ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
March 2023 » Dynamic Leader
October 19, 2024
Home 2023 March
ರಾಜಕೀಯ

ತ್ರಪುರಾ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರೊಬ್ಬರು ಸಭೆಯ ಕಲಾಪಗಳ ನಡುವೆಯೇಕುತೂಹಲದಿಂದ ಅಶ್ಲೀಲ ವೀಡಿಯೊ ನೋಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಗರ್ತಲಾ: ಉತ್ತರ ತ್ರಿಪುರದವರಾದ ಜದಬ್ ಲಾಲ್ ದೇಬನಾಥ್ ಅವರು ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಬಾಗಬಸ್ಸಾ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸಿ ಶಾಸಕರಾದವರು. ಈ ಜದಬ್ ಲಾಲ್ ದೇಬನಾಥ್ ತಮ್ಮ ಸೆಲ್ ಫೋನಿನಲ್ಲಿ ಅಶ್ಲೀಲ ವೀಡಿಯೊ ನೋಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ವಿಧಾನಸಭೆಯಲ್ಲಿ ಸಭೆ ನಡೆಯುತ್ತಿರುವುದು ಮತ್ತು ಸ್ಪೀಕರ್ ಬಿಸ್ವ ಬಂಧು ಸೇನ್ ಅವರ ಧ್ವನಿ ಸ್ಪಷ್ಟವಾಗಿ ಕೇಳಿಬರುತ್ತಿದೆ. ತನ್ನ ಸಹವರ್ತಿಗಳು ಸುತ್ತುವರೆದಿದ್ದು, ಸ್ವಲ್ಪ ಸಮಯದವರೆಗೆ ತನ್ನ ಸೆಲ್ ಫೋನ್ ಅನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಅಶ್ಲೀಲ ವೀಡಿಯೊ ವೀಕ್ಷಿಸಿಸುವ ಜದಬ್ ಲಾಲ್, ನಂತರ ತನ್ನ ಸೆಲ್ ಫೋನ್ ಅನ್ನು ಮೇಜಿನ ಮೇಲೆ ಇಟ್ಟುಕೊಂಡು ಬಹಿರಂಗವಾಗಿ ಅಶ್ಲೀಲ ಚಿತ್ರಗಳನ್ನು ಆನಂದಿಸುತ್ತಾನೆ. ಕೆಲವೊಮ್ಮೆ ಬೇಸರವಾದಾಗ ಸಭೆಯ ಚಟುವಟಿಕೆಗಳನ್ನೂ ಗಮನಿಸುತ್ತಾನೆ.

ಈ ವೀಡಿಯೋವನ್ನು ಹರಡಿದವರು ಸಾರ್ವಜನಿಕ ಹಿತಾಸಕ್ತಿಯಿಂದ ಅಶ್ಲೀಲ ವೀಡಿಯೊವನ್ನು ಮರೆಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ತ್ರಿಪುರ ಬಿಜೆಪಿ ಅಧ್ಯಕ್ಷ ರಾಜೀವ್ ಭಟ್ಟಾಚಾರ್ಜಿ, ‘ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ಮೊದಲ ಹಂತದಲ್ಲಿ ಜದಬ್ ಲಾಲ್ ದೇಬನಾಥ್ ಅವರಿಗೆ ನೋಟಿಸ್ ಜಾರಿ ಮಾಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಈ ಹಿಂದೆ ಕರ್ನಾಟಕ ಸೇರಿದಂತೆ ಬಿಜೆಪಿಯ ವಿವಿಧ ಶಾಸಕರು ಅಸೆಂಬ್ಲಿಯಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ ಆರೋಪವಿದೆ. ಇದರೊಂದಿಗೆ ಲೈಗಿಂಕ ಆರೋಪದಲ್ಲಿ ಕೆಮರಾ ಕಣ್ಣಿಗೆ ಬೆಚ್ಚಿ ಬಿದ್ದ ಬಿಜೆಪಿಯ ಹಲವು ನಾಯಕರುಗಳಿಗೆ ಸಂಬಂಧಿಸಿದ ಪೋಸ್ಟ್‌ಗಳು, ಜದಬ್ ಲಾಲ್ ದೇಬನಾಥ್ ಅವರ ಪೋಸ್ಟ್ ನೊಂದಿಗೆ ಮತ್ತೆ ವೈರಲ್ ಆಗುತ್ತಿದೆ. Shameful incident of Tripura BJP MLA watching porn during Assembly goes viral.

ವಿದೇಶ

ವ್ಯಾಟಿಕನ್ ನಗರ: ಪೋಪ್ ಫ್ರಾನ್ಸಿಸ್ (ವಯಸ್ಸು 86). ಅವರು ಇದ್ದಕ್ಕಿದ್ದಂತೆ ರೋಮ್‌ನ ಜೆಮೆಲ್ಲಿ ಆಸ್ಪತ್ರೆ ದಾಖಲಾಗಿದ್ದಾರೆ. ಅಲ್ಲಿ ಅವರು ವಿವಿಧ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿದ್ದಾರೆ. ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಇಟಾಲಿಯನ್ ಮಾಧ್ಯಮಗಳು ವರದಿ ಮಾಡಿವೆ.

ಈ ಹಿನ್ನಲೆಯಲ್ಲಿ ಶ್ವಾಸಕೋಶದ ಸೋಂಕಿನಿಂದ ಪೋಪ್ ಫ್ರಾನ್ಸಿಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವ್ಯಾಟಿಕನ್ ಅಧಿಕೃತವಾಗಿ ಪ್ರಕಟಿಸಿದೆ. ಇದರ ಬಗ್ಗೆ ಮಾಹಿತಿ ನೀಡಿದ ವ್ಯಾಟಿಕನ್ ವಕ್ತಾರ ಮ್ಯಾಟಿಯೊ ಬ್ರೂನಿ, ‘ಪೋಪ್ ಫ್ರಾನ್ಸಿಸ್ ಅವರು ಕೆಲವು ದಿನಗಳಿಂದ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದರು. ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಲಿದ್ದಾರೆ. ಅವರಿಗೆ ಕೊರೊನಾ ಸೋಂಕು ಇಲ್ಲ’ ಎಂದು ಹೇಳಿದರು.

ಪೋಪ್ ಫ್ರಾನ್ಸಿಸ್ ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೀಲು ನೋವಿನಿಂದಾಗಿ ಗಾಲಿ ಕುರ್ಚಿಯ ಮೇಲೆ ಬಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದರು. ಕಳೆದ ಜುಲೈ 2021ರಲ್ಲಿ, ಅವರ ದೊಡ್ಡ ಕರುಳಿನ 13 ಇಂಚುಗಳನ್ನು ತೆಗೆದುಹಾಕಲಾಯಿತು. ಪೋಪ್ ಫ್ರಾನ್ಸಿಸ್ ಅವರು ಹದಿಹರೆಯದವರಾಗಿದ್ದಾಗ ಉಸಿರಾಟದ ಸೋಂಕಿನಿಂದ ಶ್ವಾಸಕೋಶದ ಒಂದು ಭಾಗವನ್ನು ತೆಗೆದು ಹಾಕಲಾಗಿತ್ತು ಎಂಬುದು ಗಮನಾರ್ಹ. ಪೋಪ್ ಫ್ರಾನ್ಸಿಸ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಇಂದು ಬೆಳಿಗ್ಗೆ ಅವರ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಯಿತು. Pope Francis has been hospitalised and has been diagnosed with a respiratory infection. The tests have confirmed the infection was not Covid-related. Hospital authorities said Pope Francis will remain in the hospital for the coming days.

ದೇಶ

ಚೆನ್ನೈ: ವೈಕಂ ಚಳವಳಿಯ ಶತಮಾನೋತ್ಸವವನ್ನು ಒಂದು ವರ್ಷ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿಧಾನಸಭೆಯಲ್ಲಿ ಘೋಷಿಸಿದರು. ನಿಯಮ 110ರ ಅಡಿಯಲ್ಲಿ ಹೊಸ ಅಧಿಸೂಚನೆಗಳನ್ನು ಹೊರಡಿಸಿ ಮಾತನಾಡಿದ ಎಂ.ಕೆ.ಸ್ಟಾಲಿನ್, “ವೈಕಂ ಚಳುವಳಿ ಪ್ರಾರಂಭವಾದ ಶತಮಾನದ ಆರಂಭದ ದಿನ ಇಂದು; ಇಂದು ಐತಿಹಾಸಿಕ ದಿನ. ಪ್ರತಿಭಟನೆಯ ಯಶಸ್ಸಿಗೆ ಕಾರಣರಾದ ತಂದೈ ಪೆರಿಯಾರನ್ನು ಗೌರವಿಸುವ ರೀತಿಯಲ್ಲಿ ಐತಿಹಾಸಿಕವಾದ ವಿಶೇಷ ಪ್ರಕಟಣೆಯನ್ನು ಪ್ರಕಟಿಸುತ್ತಿದ್ದೇನೆ. ಒಂದುವರೆ ವರ್ಷಗಳ ಮೇಲೆ ನಡೆದ ಈ ಚಳುವಳಿ, 1925 ನವೆಂಬರ್ 23 ರಂದು ಕೊನೆಗೊಂಡಿತು. ಅದೇ ವರ್ಷ ನವೆಂಬರ್ 29 ರಂದು ಪೆರಿಯಾರ್ ನೇತೃತ್ವದಲ್ಲಿ ವೈಕಂನಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಭಾರತದಲ್ಲಿ ನಡೆದ ಎಲ್ಲಾ ದೇವಾಲಯದ ಗರ್ಭಗುಡಿ ಪ್ರವೇಶದ ಹೋರಾಟಗಳಿಗೆ ವೈಕಂ ಚಳುವಳಿಯೇ ಮಾದರಿಯಾಗಿತ್ತು. ದಬ್ಬಾಳಿಕೆಗೆ ಒಳಗಾದವರು ಸಮತ್ವದ ಹಕ್ಕನ್ನು ಪಡೆಯುವುದರಲ್ಲಿ ಇದುವೇ ಪ್ರೇರಣೆಯಾಗಿತ್ತು ಎಂದು ಹೇಳಿದರೆ ಅದು ಹೆಚ್ಚೇನೂ ಆಗುವುದಿಲ್ಲ. ವೈಕಂ ದೇವಾಲಯ ಪ್ರವೇಶ ಚಳುವಳಿಯ ಶತಮಾನೋತ್ಸವ ಸಮಾರಂಭವನ್ನು ತಮಿಳುನಾಡು ಸರ್ಕಾರ ಬಹಳ ಅದ್ದೂರಿಯಾಗಿ ಆಚರಿಸುತ್ತದೆ. ವರ್ಷಾದ್ಯಂತ ವೈಕಂ ಚಳುವಳಿಯ ಉದ್ದೇಶ, ಯಶಸ್ಸನ್ನು ಸಾರ್ವಜನಿಕರು, ವಿದ್ಯಾರ್ಥಿಗಳು ತಿಳಿದುಕೊಳ್ಳುವ ರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ವೈಕಂ ಚಳುವಳಿಯಲ್ಲಿ ಪೆರಿಯಾರ್ ಅವರನ್ನು ಬಂಧಿಸಿ ಜೈಲಿಗಟ್ಟಿದ ಅರುವಿಕ್ಕುತ್ತು ಗ್ರಾಮದಲ್ಲಿ ಸ್ಮಾರಕ ಸ್ಥಾಪಿಸಲು ಪ್ರಯತ್ನಿಸಲಾಗುವುದು. ಸೆಪ್ಟಂಬರ್ 17ರ ಸಾಮಾಜಿಕ ನ್ಯಾಯ ದಿನದಂದು (ಪೆರಿಯಾರ್ ಜನ್ಮ ದಿನಾಚರಣೆ) ತಮಿಳುನಾಡು ಸರ್ಕಾರ ವೈಕಂ ಪ್ರಶಸ್ತಿ ಪ್ರದಾನ ಮಾಡಲಿದೆ” ಎಂದು ಹೇಳಿದರು.

Periyar, the unsung hero who breathed life back into Vaikom Satyagraha
An unsung hero, he has been a forgotten face in Kerala’s Renaissance history. He’s known for reinvigorating a historic people’s movement from a sinking space — the Vaikom Satyagraha.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

‘ಡಬಲ್ ಇಂಜಿನ್’ ಸರ್ಕಾರದ ಬಗ್ಗೆ ನಿರಂತರವಾಗಿ ಮಾತನಾಡುವ ಪ್ರಧಾನಿ ಮೋದಿ, ಇದೀಗ ಬಿಜೆಪಿಯನ್ನು ‘ಪ್ಯಾನ್ ಇಂಡಿಯಾ’ ಪಕ್ಷ ಎಂದು ಹೆಮ್ಮೆಯಿಂದ ಉಲ್ಲೇಖಿಸಿದ್ದಾರೆ.

ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಬಿಜೆಪಿ ಆಡಳಿತ ನಡೆಸುತ್ತಿದೆ. ಹಾಗಾಗಿ ಬಿಜೆಪಿ ಮಾತ್ರ “ಪ್ಯಾನ್ ಇಂಡಿಯಾ” ಪಕ್ಷ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಾರ್ಚ್ 28 ರಂದು ರಾಜಧಾನಿ ದೆಹಲಿಯಲ್ಲಿ ಬಿಜೆಪಿಯ ಹೊಸ ಕಚೇರಿಯನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಮಾತನಾಡಿದರು.

ಆಗ ಮಾತನಾಡಿದ ಪ್ರಧಾನಿ ಮೋದಿ, “1984ರ ಕರಾಳ ಕಾಲವನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಆ ಅವಧಿಯಲ್ಲಿ ನಾವು ಸಂಪೂರ್ಣವಾಗಿ ನಾಶವಾದೆವು. ಆದರೆ ಖಿನ್ನತೆಗೆ ಒಳಗಾಗಲಿಲ್ಲ. ಅದಕ್ಕಾಗಿ ಇತರರನ್ನು ದೂಷಿಸಲಿಲ್ಲ. ಆಗ ನಾವು ಗೆದ್ದಿದ್ದು ಕೇವಲ ಎರಡು ಲೋಕಸಭಾ ಸ್ಥಾನಗಳು. ಈ ಎರಡು ಕ್ಷೇತ್ರಗಳಿಂದ ಆರಂಭವಾದ ನಮ್ಮ ಪಯಣ 303 ಕ್ಷೇತ್ರಗಳನ್ನು ತಲುಪಿದೆ. ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಬಿಜೆಪಿ ಏಕೈಕ ‘ಪ್ಯಾನ್ ಇಂಡಿಯಾ’ ಪಕ್ಷವಾಗಿದೆ” ಎಂದು ಅವರು ಹೇಳಿದರು. In his speech, the prime minister dwelt on the BJP’s growth from having two Lok Sabha seats in 1984 to 303 in 2019.

ಆ ಸಂದರ್ಭದಲ್ಲಿ ಬಿಜೆಪಿ ಆಡಳಿತ ವೈಭವದ ಬಗ್ಗೆ ಮೋದಿ ಸಾಕಷ್ಟು ಮಾತನಾಡಿದರು. ಆ ವೇಳೆ ಮಾತನಾಡಿದ ಅವರು, “ಬಿಜೆಪಿ ದೂರದರ್ಶನ, ಪತ್ರಿಕೆ, ಟ್ವಿಟರ್, ಯೂಟ್ಯೂಬ್ ಚಾನೆಲ್‌ಗಳಿಂದ ಬಂದ ಪಕ್ಷವಲ್ಲ. ಇದು ಸಂಪೂರ್ಣವಾಗಿ ಕಾರ್ಯಕರ್ತರ ಶ್ರಮದಿಂದ ರೂಪುಗೊಂಡ ಪಕ್ಷವಾಗಿದೆ” ಎಂದು ಮೋದಿ ವ್ಯಾಕ್ಯಾನಿಸಿದರು. ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಕೆಳಗಿಳಿಸುವ ವಿಚಾರದಲ್ಲಿ ವಿರೋಧ ಪಕ್ಷಗಳು ದನಿಗೂಡಿಸುತ್ತಿರುವುದನ್ನು ಉಲ್ಲೇಖಿಸಿದ ಮೋದಿ, “ಭ್ರಷ್ಟಾಚಾರ ಒಂದೇ ವೇದಿಕೆಯಲ್ಲಿ ಸೇರುತ್ತಿದೆ” ಎಂದು ಟೀಕಿಸಿದರು. ಆದರೆ ಅದಾನಿ ಸಮೂಹದ ವಂಚನೆಯ ಬಗ್ಗೆ ವಿರೋಧ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಪ್ರಧಾನಿ ಮೋದಿಯವರಿಂದ ಒಂದು ಮಾತೂ ಬರಲಿಲ್ಲ. Those involved in corruption coming on one platform, action against corrupt will continue: PM Narendra Modi

ಪ್ರಸ್ತುತ ಬಿಜೆಪಿ 16 ರಾಜ್ಯಗಳಲ್ಲಿ ಏಕಾಂಗಿಯಾಗಿ ಮತ್ತು ಮೈತ್ರಿಕೂಟ ರಚಿಸಿಕೊಂಡು ಅಧಿಕಾರದಲ್ಲಿದೆ. ಉತ್ತರದಿಂದ ದಕ್ಷಿಣಕ್ಕೆ ಬಿಜೆಪಿ ಆಡಳಿತ ನಡೆಸುತ್ತಿದೆ ಎಂದು ಮೋದಿ ಉಲ್ಲೇಖಿಸಿದರು. ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಬಲಿಷ್ಠ ಪಕ್ಷವಾಗಿದೆ. ಆದರೆ ದಕ್ಷಿಣದಲ್ಲಿ ಐದು ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮುಂತಾದ ರಾಜ್ಯಗಳ ಪೈಕಿ ಕರ್ನಾತಕದಲ್ಲಿ ಮಾತ್ರ ಬಿಜೆಪಿ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್, ಜನತಾದಳ ನಂತರ ಜಾತ್ಯತೀತ ಜನತಾದಳ ಪಕ್ಷಗಳೇ ಪರ್ಯಾಯ ಆಡಳಿತ ನಡೆಸುತ್ತಿದ್ದ ಕರ್ನಾಟಕದಲ್ಲಿ 2007ರಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿತು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರು. ನಂತರ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಸದ್ಯ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. 

ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕಳೆದ ಕೆಲವು ತಿಂಗಳುಗಳಿಂದ ಆಗಾಗ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ ದಾವನಗೆರೆ ಸಮಾವೇಶದಲ್ಲಿ ಮಾತನಾಡಿದ ಮೋದಿ, “ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವನ್ನು ಉಳಿಸಿಕೊಳ್ಳಲು ಜನರು ನಿರ್ಧರಿಸಿದ್ದಾರೆ,” ಎಂದು ಹೇಳಿದರು. ಆದರೆ ಜನರ ಮನಸ್ಸಿನಲ್ಲಿ ಏನಿದೆ ಎಂಬುದು ಮೇ 13ರ ನಂತರವೇ ಗೊತ್ತಾಗಲಿದೆ. 

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಕರ್ನಾಟಕವನ್ನು ಉಳಿಸಿಕೊಂಡರೆ ಮಾತ್ರ ಬಿಜೆಪಿ ಪಕ್ಷವು ಮೋದಿ ಹೇಳುತ್ತಿರುವ ‘ಪ್ಯಾನ್ ಇಂಡಿಯಾ’ ಪಕ್ಷವಾಗಿರುತ್ತದೆ. ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅತೃಪ್ತರಾಗಿದ್ದು, ಆಂತರಿಕ ಕಚ್ಚಾಟದಿಂದ ಬಿಜೆಪಿ ಹಿನ್ನಡೆ ಅನುಭವಿಸಲಿದೆ ಎಂದು ವರದಿಗಳು ಹೇಳುತ್ತಿವೆ. ಅಲ್ಲದೇ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ನಾನಾ ರೀತಿಯ ಭ್ರಷ್ಟಾಚಾರ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಕಾಂಗ್ರೆಸ್ ಗೆ ಗೆಲುವಿನ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ತಜ್ಞರು ಭವಿಷ್ಯ ನುಡಿದಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆಗಳು ಕೂಡ ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದು ಹೇಳುತ್ತಿದೆ. 

ಬಿಜೆಪಿ ವಿರುದ್ಧದ ಸವಾಲುಗಳನ್ನು ಹತ್ತಿಕ್ಕಲು ಕರ್ನಾಟಕ ಬಿಜೆಪಿ ಸದಸ್ಯರಿಗೆ ಅಮಿತ್ ಶಾ ರಣತಂತ್ರ ಹೆಣೆದಿದ್ದಾರೆ. ಆ ತಂತ್ರಗಳು ಯಶಸ್ವಿಯಾದರೆ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ. ಅದೇ ವೇಳೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಜಾತ್ಯತೀತ ಜನತಾದಳ ಗಮನಾರ್ಹ ಸ್ಥಾನಗಳನ್ನು ಗೆದ್ದು ಅತಂತ್ರ ವಿಧಾನಸಭೆ ಎದುರಾಗಬಹುದು. ಅಂತಹ ಪರಿಸ್ಥಿತಿ ಬಂದರೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗಬಹುದು ಎಂದು ಕುಮಾರಸ್ವಾಮಿ ಯೋಚಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಬಿಜೆಪಿ ಗೆದ್ದು, ಮೋದಿಯವರ ‘ಪ್ಯಾನ್ ಇಂಡಿಯಾ ಬಿಜೆಪಿ’ ಕನಸು ನನಸಾಗುವ ಸಾಧ್ಯತೆಗಳು ಬಹಳ ಕಡಿಮೆಯಿದೆ ಎಂದು ಹೇಳುತ್ತಿದ್ದಾರೆ ರಾಜಕೀಯ ತಜ್ಞರು. ಕಾದು ನೋಡೋಣ. BJP only pan-India party today amidst family-run political outfits: PM Narendra Modi

ರಾಜಕೀಯ

ನವದೆಹಲಿ: ಭ್ರಷ್ಟಾಚಾರ ವಿರೋಧಿ ಎಂದು ಬಿಂಬಿಸಿಕೊಳ್ಳುವುದನ್ನು ಮೊದಲು ನಿಲ್ಲಿಸಿ ಎಂದು ಪ್ರಧಾನಿ ಮೋದಿಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಇದರ ಬಗ್ಗೆ ಅವರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ‘ಪ್ರಧಾನಿ ನರೇಂದ್ರ ಮೋದಿ ಅವರೇ ಅದಾನಿಯವರ 20,000 ಕೋಟಿ ರೂಪಾಯಿ ಮೌಲ್ಯದ ಶೆಲ್ ಕಂಪನಿಗಳ ಮಾಲೀಕರು ಯಾರು? ಲಲಿತ್ ಮೋದಿ? ನೀರವ್ ಮೋದಿ? ಮೆಹುಲ್ ಚೋಕ್ಸಿ? ವಿಜಯ್ ಮಲ್ಯ? ಜಟಿನ್ ಮೆಹತಾ? ಅಥವಾ “ಭ್ರಷ್ಟಾಚಾರ್ ಭಾಗೋ ಅಭಿಯಾನ” ಸದಸ್ಯರುಗಳೇ? ನೀವು ಆ ಒಕ್ಕೂಟದ ನಾಯಕರೇ? ನಿಮ್ಮನ್ನು ನೀವು ‘ಭ್ರಷ್ಟಾಚಾರ ವಿರೋಧಿ’ ಎಂದು ಬಿಂಬಿಸಿಕೊಳ್ಳುವುದನ್ನು ಮೊದಲು ನಿಲ್ಲಿಸಿ. ಮೊದಲು ನಿಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಿ.

ಕರ್ನಾಟಕದಲ್ಲಿ ನಿಮ್ಮ ಸರ್ಕಾರವನ್ನು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಆರೋಪ ಮಾಡುವುದು ಯಾಕೆ? ಮೇಘಾಲಯದ ನಂಬರ್ ಒನ್ ಭ್ರಷ್ಟ ಸರ್ಕಾರದಲ್ಲಿ ನೀವೇಕೆ ಭಾಗವಾಗಿದ್ದೀರಿ? ರಾಜಸ್ಥಾನದಲ್ಲಿ ಸಂಜೀವನಿ ಸಹಕಾರಿ ಹಗರಣ, ಮಧ್ಯಪ್ರದೇಶದಲ್ಲಿ ಮೆಡಿಷನ್ ಹಗರಣ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ನಾಯಕರು ಎನ್‌ಎಎನ್ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲವೇ? 95ರಷ್ಟು ವಿರೋಧ ಪಕ್ಷದ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆದರೆ ಬಿಜೆಪಿಯಲ್ಲಿರುವ ನಾಯಕರೆಲ್ಲ ವಾಷಿಂಗ್ ಮೆಷಿನ್ ನಿಂದ ಕ್ಲೀನ್ ಆಗಿದ್ದಾರೆಯೇ? Kharge said the Enforcement Directorate is put after 95 percent of opposition leaders while those joining the BJP are cleaned up in a “washing machine”.

ನಿಮಗೆ (ಪ್ರಧಾನಿ) ದೈರ್ಯ ಇದ್ದರೆ, ಪಾರ್ಲಿಮೆಂಟ್ ನಲ್ಲಿ ಜಂಟಿ ಸದನ ಸಮಿತಿಯನ್ನು ಸ್ಥಾಪಿಸಿ, 9 ವರ್ಷಗಳಲ್ಲಿ ಮೊದಲ ಬಾರಿಗೆ ಬಹಿರಂಗ ಪತ್ರಿಕಾಗೋಷ್ಠಿ ಒಂದನ್ನು ನಡೆಸಿ ನೋಡೋಣ’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. Stop image makeover by calling yourself anti-corruption crusader: Kharge attacks PM Modi Congress chief Mallikarjun Kharge accused PM Modi of styling himself as an “anti-corruption crusader” while heading an alliance of corrupt individuals like Gautam Adani and Nirav Modi.

ರಾಜಕೀಯ

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ ಸಿಕ್ಕ ಕೋಟ್ಯಂತರ ರೂ. ಹಣ ಚುನಾವಣೆಗೆ ಹೊಂದಿಸಿಟ್ಟಿದ್ದು ಎಂಬ ಸಂಗತಿ ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಒಬ್ಬ ಶಾಸಕನ ಮನೆಯಲ್ಲಿ ಇಷ್ಟು ದುಡ್ಡು ಚುನಾವಣೆಗಾಗಿ ಸಂಗ್ರಹವಾಗಿದೆ ಅಂದ್ರೆ, ಬಿಜೆಪಿ ಸರ್ಕಾರದ ಸಚಿವರ ಕತೆ ಏನು? ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.

ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಹೋಗಿ ಮಾಡಾಳ್ ಅವರು ಸಿಕ್ಕಿಹಾಕಿಕೊಂಡಿದ್ದಾರೆ. ಹಣದ ಥೈಲಿಯಲ್ಲಿ ಬಿಜೆಪಿ ಸರ್ಕಾರ ಮುಳುಗಿರುವುದು ಗುಟ್ಟಾಗಿ ಉಳಿದಿಲ್ಲ. 40% ಕಮಿಷನ್ ದಂಧೆಯಲ್ಲಿ ಇವರೆಲ್ಲ ಎಷ್ಟು ದುಡ್ಡು ಲೂಟಿ ಹೊಡೆದಿದ್ದಾರೆ? ಚುನಾವಣೆಯಲ್ಲಿ ನೀರಿನ ರೀತಿ ಹಣ ಖರ್ಚು ಮಾಡುವುದಕ್ಕೆ ಭೂಮಿಕೆ ಸಿದ್ಧವಾಗಿದೆ.

ಕಳಪೆ ಆಡಳಿತ, ಜನರ ತೆರಿಗೆ ಹಣದ ಸುಲಿಗೆ, ಕೋಮು ರಾಜಕಾರಣ ಇವೇ ಮುಂತಾದ ಕುಕೃತ್ಯಗಳನ್ನು ಮಾಡಿ ಹೇಳಿಕೊಳ್ಳಲು ಒಂದು ಕೆಲಸವಿಲ್ಲದ ಕೆಟ್ಟ ಸರ್ಕಾರವಿದು. ಈಗ ಕೋಟಿಗಟ್ಟಲೆ ಹಣ ಸಂಗ್ರಹಿಸಿ ಚುನಾವಣೆಗೆ ಸುರಿಯಲು ಮುಂದಾಗಿದ್ದಾರೆ. ರಾಜ್ಯದ ಜನತೆಯನ್ನು ದುಡ್ಡಿನಲ್ಲಿ ಕೊಳ್ಳಲು ಸಾಧ್ಯವಿಲ್ಲ. ಈ ಸಲ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಪಕ್ಷ ಸರಣಿ ಟ್ವೀಟ್ ಮಾಡಿದೆ.

ರಾಜಕೀಯ

ಚೆನ್ನೈ: ಭಾರತವೇ ನಿಮ್ಮ ಮನೆ ಎಂದು ನಟ ಪ್ರಕಾಶ್ ರಾಜ್ ರಾಹುಲ್ ಗಾಂಧಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡ ಬೆನ್ನಲ್ಲೇ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯ ದೆಹಲಿ 10, ತುಘಲಕ್  ಲೇನ್ ಸರ್ಕಾರಿ ಬಂಗಲೆಯನ್ನು ಏಪ್ರಿಲ್ 22 ರೊಳಗೆ ತೆರವು ಮಾಡುವಂತೆ ನಿನ್ನೆ ಲೋಕಸಭೆ ಸೆಕ್ರೆಟರಿಯೇಟ್ ಅವರಿಗೆ ನೋಟಿಸ್ ಜಾರಿಮಾಡಿತ್ತು. ‘ರಾಹುಲ್ ಅವರಿಗೆ ಕಾಲಾವಕಾಶ ಬೇಕಿದ್ದಲ್ಲಿ ಲೋಕಸಭೆಯ ವಸತಿ ಸಮಿತಿಗೆ ಪತ್ರ ಬರೆದು ಕೇಳಿಕೊಂಡರೆ ಪರಿಗಣಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ನೋಟಿಸ್ ನಲ್ಲಿ ತಿಳಿಸಲಾಗಿತ್ತು.

ಅದಕ್ಕೆ ಮರುದಿನ ಲೋಕಸಭೆ ಸೆಕ್ರೆಟರಿಯೇಟ್ ಅವರ ನೋಟಿಸ್ ಗೆ ಉತ್ತರವನ್ನು ಕಳುಹಿಸಿಕೊಟ್ಟ ರಾಹುಲ್, “ಜನಾದೇಶದಿಂದ 4 ಬಾರಿ ಲೋಕಸಭಾ ಸಂಸದನಾಗಿ ಆಯ್ಕೆಯಾದ ನಾನು ಈ ಬಂಗಲೆಯಲ್ಲಿ ವಾಸವಾಗಿದ್ದ ಸಂತೋಷದ ನೆನಪುಗಳಿಗೆ ಋಣಿಯಾಗಿದ್ದೇನೆ. ನಾನು ಯಾವುದೇ ಹಕ್ಕುಗಳನ್ನು ಪ್ರತಿಪಾದಿಸದೆ, ನಿಮ್ಮ ಪತ್ರದ ವಿಷಯಗಳಿಗೆ ನಾನು ಖಂಡಿತವಾಗಿಯೂ ಬದ್ಧನಾಗಿರುತ್ತೇನೆ” ಎಂದು ಹೇಳಿದರು. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿಗೆ ಹಲವರು ಬೆಂಬಲ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ನಟ, ರಾಜಕಾರಣಿ ಪ್ರಕಾಶ್ ರಾಜ್ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಪ್ರಕಾಶ್ ರಾಜ್ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ, “ಆತ್ಮೀಯ ರಾಹುಲ್ ಗಾಂಧಿ… ಈ ದಬ್ಬಾಳಿಕೆಯಿಂದ ನಮ್ಮ ದೇಶವನ್ನು ಉಳಿಸಲು ಬಯಸುವ ಪ್ರತಿಯೊಬ್ಬರ ಮನೆಯೂ ನಿಮ್ಮ ಮನೆಯಾಗಿದೆ. ಭಾರತವೇ ನಿಮ್ಮ ಮನೆ. ನಿಮಗೆ ಅತ್ಯಂತ ಸ್ವಾಗತ.. ನಿಮಗೆ ಹೆಚ್ಚಿನ ಶಕ್ತಿ” ಎಂದು ಉಲ್ಲೇಖಿಸಿದ್ದಾರೆ. ಇದು ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

ರಾಜಕೀಯ

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ, ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸಿದ್ದಾರೆ ಮತ್ತು ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಏಪ್ರಿಲ್ 13 ರಂದು ಅಧಿಸೂಚನೆ ಪ್ರಕಟ ಏಪ್ರಿಲ್ 20 ರಂದು ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ, ಏಪ್ರಿಲ್ 24 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.  ಮೇ 10 ರ ಬುಧವಾರ ಮತದಾನ ನಡೆಯಲಿದ್ದು, ಮೇ 15 ರೊಳಗೆ ಮತದಾನದ ಸಂಪೂರ್ಣ ಪ್ರಕ್ರಿಯೆ ಮುಗಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈಶಾನ್ಯದ ಮೂರು ರಾಜ್ಯಗಳ ಚುನಾವಣೆ ಸಕ್ಸಸ್ ಆಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ನಮ್ಮ ಪ್ರಯತ್ನ. ಕರ್ನಾಟಕದಲ್ಲಿ ಪುರುಷ ಮತದಾರರು 2,62,42,561 ಇದ್ದು, 2,59,26,319 ಮಹಿಳಾ ಮತದಾರರು ಇದ್ದಾರೆ. ಇನ್ನು ಕರ್ನಾಟಕದಲ್ಲಿ 4,699 ತೃತೀಯ ಲಿಂಗಿಗಳು ಮತದಾರರು ಇದ್ದು, 12.15 ಲಕ್ಷ ಯುವ ಮತದಾರರು ಇದ್ದಾರೆ.

ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ನೀಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಮಾಹಿತಿ ನೀಡಿದರು. ಇದೇ ಮೊದಲ ಬಾರಿಗೆ ಮತದಾನ ಮಾಡುವ 18-19 ವಯಸ್ಸಿನ ಮತದಾರರ ಸಂಖ್ಯೆ 9,17,241. ಕರ್ನಾಟಕದಲ್ಲಿ 5.55 ಲಕ್ಷ ವಿಕಲಚೇತನ ಮತದಾರರರು ಇದ್ದಾರೆ.

ರಾಜ್ಯದಲ್ಲಿ ಈ ಬಾರಿ ಒಟ್ಟು 52,282 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 12 ಸಾವಿರ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. 24,063 ನಗರ ಪ್ರದೇಶದಲ್ಲಿ, 34,219 ಗ್ರಾಮೀಣ ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿವೆ.

ಯುವಕರಿಗಾಗಿ 224 ಪ್ರತ್ಯೇಕ ಮತಗಟ್ಟೆ, ಮಹಿಳೆಯರಿಗಾಗಿ 1320 ಮತಗಟ್ಟೆಗಳು ಸೇರಿ ಸರಾಸರಿ 883 ಮತದಾರರಿಗೊಂದು ಮತಗಟ್ಟೆ ನಿರ್ಮಾಣ ಮಾಡಲಾಗುತ್ತದೆ

ಚುನಾವಣಾ ಆಯೋಗದ ಆ್ಯಪ್‌ನಲ್ಲಿ ಅಭ್ಯರ್ಥಿಗಳ ಸಂಪೂರ್ಣ ವಿವರ ಲಭ್ಯವಿರುತ್ತದೆ. ಅಭ್ಯರ್ಥಿಯ ಅಫಿಡವಿಟ್ ಕೂಡ ಆ್ಯಪ್‌ನಲ್ಲೇ ಲಭ್ಯವಿರಲಿದ್ದು, ಚುನಾವಣಾ ಅಕ್ರಮದ ಬಗ್ಗೆ ಆ್ಯಪ್‌ನಲ್ಲೇ ಮತದಾರರು ದೂರು ಸಲ್ಲಿಸಬಹುದಾಗಿದೆ. ದೂರು ಸಲ್ಲಿಸಿದರೆ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ಭರವಸೆ ನೀಡಿದೆ. ಚುನಾವಣಾ ಅಕ್ರಮ ತಡೆಗೆ 2400 ತಂಡಗಳ ರಚನೆ ಮಾಡಲಾಗಿದೆ.

ಭಾರತದ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನದ ದಿನಾಂಕಗಳನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆʼ  ಜಾರಿಗೆ ಬಂದಿದೆ. ರಾಜಕೀಯ ನಾಯಕರು, ಪಕ್ಷಗಳು, ಅಧಿಕಾರಿಗಳು, ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲರೂ ಈ ನೀತಿಸಂಹಿತೆಗೆ ಬದ್ಧರಾಗಿರಬೇಕಾಗುತ್ತದೆ.

ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಆಯೋಗ ಕ್ರಮ ಕೈಗೊಳ್ಳಲಿದೆ. ಬೆಂಗಳೂರಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗುತ್ತಿದೆ. ಇದನ್ನು ತಡೆಯಲು ಪರಿಹಾರ ಕಂಡುಕೊಳ್ಳಲು ಎಲೆಕ್ಟ್‌ಥಾನ್ ಕೈಗೊಳ್ಳಲು ಮುಂದಾಗಿದ್ದೇವೆ. ಐಐಎಸ್ಸಿ ಇದರಲ್ಲಿ ಕೈಜೋಡಿಸಿದೆ ಎಂದು ಮಾಹಿತಿ ನೀಡಿದ್ದಾರೆ. Election Commission to announce Karnataka assembly election schedule today.

ರಾಜಕೀಯ

ರಾಹುಲ್ ಗಾಂಧಿ ಸ್ಪರ್ಧಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾದರೆ, ಅವರ ವಯನಾಡ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಹೋದರಿ ಪ್ರಿಯಾಂಕಾ ಅವರನ್ನು ಕಣಕ್ಕೆ ಇಳಿಸಲು ಕೇರಳ ರಾಜ್ಯ ಕಾಂಗ್ರೆಸ್ ಯೋಜನೆ ರೂಪಿಸಿದೆ.

ಮೋದಿಯ ಮಾನಹಾನಿ ಪ್ರಕರಣದಲ್ಲಿ, ರಾಹುಲ್‌ಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಗುಜರಾತ್‌ನ ಸೂರತ್ ಕೋರ್ಟ್ ನೀಡಿದ ತೀರ್ಪಿನ ನಂತರ, ರಾಹುಲ್ ಅವರನ್ನು ಸಂಸದ ಸ್ಥಾನದಿಂದ ಅನರ್ಹ ಗೊಳಿಸಲಾಯಿತು. ಈ ಪರಿಣಾಮದಿಂದ ಅವರ ಕೇರಳದ ವಯನಾಡ್ ಲೋಕಸಭಾ ಸ್ಥಾನವು ಖಾಲಿಯಾಗಿದೆ.

ಪಂಜಾಬ್ ರಾಜ್ಯದ ಜಲಂಧರ್ ಕ್ಷೇತ್ರದ ಕಾಂಗ್ರೆಸ್ ಸಂಸದ ಚಂದೋಕ್ ಸಿಂಗ್ ಚೌಧರಿ ನಿಧನ, ಲಕ್ಷದ್ವೀಪ ರಾಷ್ಟ್ರೀಯವಾದಿ ಕಾಂಗ್ರೆಸ್ ಸಂಸದ ಮೊಹಮ್ಮದ್ ಫೈಸಲ್ ಅವರಿಗೆ 10 ವರ್ಷಗಳ ಜೈಲು ಶಿಕ್ಷೆಯ ಸಮಸ್ಯೆಯಿಂದಾಗಿ ಎರಡೂ ಕ್ಷೇತ್ರಗಳು ಖಾಲಿಯಾಗಿವೆ. ಖಾಲಿಯಾಗಿರುವ ಕ್ಷೇತ್ರಗಳಿಗೆ 90 ದಿನದೊಳಗೆ ಚುನಾವಣೆ ನಡೆಸ ಬೇಕಿರುವುದರಿಂದ, ಮೂರೂ ಲೋಕಸಭಾ ಕ್ಷೇತ್ರಗಳಿಗೂ ಉಪಚುನಾವಣೆ ನಡೆಸಲು ಚುನಾವಣೆ ಆಯೋಗದಿಂದ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ.

ಈ ಹಿನ್ನಲೆಯಲ್ಲಿ ಅನರ್ಹತೆಯ ವಿರುದ್ಧದ ಕಾನೂನು ಹೋರಾಟದಲ್ಲಿ ರಾಹುಲ್ ಗಾಂಧಿಗೆ ಹಿನ್ನಡೆಯಾದರೆ, ವಯನಾಡು ಕ್ಷೇತ್ರದಲ್ಲಿ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸಲು ಕೇರಳ ರಾಜ್ಯ ಕಾಂಗ್ರೆಸ್ ಯೋಜನೆ ರೂಪಿಸಿದೆ. Wayanad going to bypoll soon? What EC’s Lakshadweep move signals.

ದೇಶ

ಅದಾನಿ ಎಂಟರ್‌ಪ್ರೈಸಸ್ ಷೇರು ಬೆಲೆ 55% ಮತ್ತು ಅದಾನಿ ಪೋರ್ಟ್ಸ್ ಷೇರು ಬೆಲೆ 23% ರಷ್ಟು ಕುಸಿತವನ್ನು ಖಂಡಿದೆ. ಅದಾನಿ ಗ್ರೂಪ್ ಕಂಪನಿಗಳು ಮನಿ ಲಾಂಡರಿಂಗ್ ಮತ್ತು ಷೇರು ಮಾರುಕಟ್ಟೆ ವಂಚನೆಯನ್ನು ಆರೋಪಿಸಿ ಅಮೆರಿಕದ ಶಾರ್ಟ್ ಸೆಲ್ಲಿಂಗ್ ಸಂಸ್ಥೆಯಾದ ಹಿಂಡೆನ್‌ಬರ್ಗ್ ಕಂಪನಿ ವರದಿಯನ್ನು ಬಿಡುಗಡೆ ಮಾಡಿತ್ತು. ಈ ವರದಿಯ ನಂತರ ಷೇರುಪೇಟೆಯಲ್ಲಿ ಅದಾನಿ ಸಮೂಹದ ಷೇರುಗಳು ತೀವ್ರ ಕುಸಿತವನ್ನು ಕಂಡಿದೆ.

ಅದಾನಿ ಗ್ರೂಪ್ ಷೇರುಗಳು ಸುಮಾರು $105 ಬಿಲಿಯನ್ ನಷ್ಟವನ್ನು ಅನುಭವಿಸುತ್ತಿರುವ ಹಿನ್ನಲೆಯಲ್ಲಿ, ಷೇರುಪೇಟೆ ಕೆಲವು ವಾರಗಳ ಕಾಲ ತೀವ್ರ ಕುಸಿತವನ್ನು ಖಂಡಿತು. ಈ ಹಿನ್ನಲೆಯಲ್ಲಿ ಗೌತಮ್ ಅದಾನಿ ಕೂಡ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನದಿಂದ 35ನೇ ಸ್ಥಾನಕ್ಕೆ ತಳ್ಳಲ್ಪಟ್ಟರು.ಅದಾನಿಯ ವಿರುದ್ಧ ದೂರುಗಳು, ವಿವಾದಗಳು ಇನ್ನು ಮುಂದುವರಿಯುತ್ತಿರುವ ಹಿನ್ನಲೆಯಲ್ಲಿ ಅದಾನಿ ಷೇರುಗಳಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಪ್ರಾಧಿಕಾರವು EPFO ಹೂಡಿಕೆಯನ್ನು ಮುಂದುವರೆಸುತ್ತಿರುವುದಾಗಿ ವರದಿಯಾಗಿದೆ. ಅದಾನಿ ಸಮೂಹದ ಷೇರುಗಳಿಂದ ಹೆಚ್ಚಿನ ಅಪಾಯವಿರುವ ಕಾರಣದಿಂದಲೇ FII ಹೂಡಿಕೆದಾರರು ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಹೂಡದೇ ದೂರ ಸರಿದಿದ್ದಾರೆ.

ಆದರೆ ಕಾರ್ಮಿಕರ ಅನುಕೂಲಕ್ಕಾಗಿ ಸಂಗ್ರಹಿಸಿ ನಿರ್ವಹಣೆ ಮಾಡುತ್ತಿರುವ PF ಹಣವನ್ನು ಅದಾನಿ ಷೇರುಗಳಲ್ಲಿ ಹೂಡಿಕೆ ಮಾಡುವುದು ಜನರಲ್ಲಿ ದೊಡ್ಡ ಆಘಾತವನ್ನು ಸೃಷ್ಟಿಸಿದೆ. ದೇಶದಲ್ಲಿ ಒಟ್ಟು 27.73 ಕೋಟಿ ಕಾರ್ಮಿಕರು EPFO ಸದಸ್ಯರಾಗಿದ್ದಾರೆ. ಇವರ ಭವಿಷ್ಯದ ನಿವೃತ್ತಿ ನಿಧಿಯನ್ನು ಆಯೋಗವು ನಿರ್ವಹಿಸುತ್ತಿದೆ. ಈ ಹಣವು ಸಂಪೂರ್ಣವಾಗಿ ಜನರ ನಿವೃತ್ತಿಯ ನಂತರದ ಅಗತ್ಯಗಳಿಗಾದದ್ದು. ವೃದ್ಧಾಪ್ಯ ಮತ್ತು ಹಣ ಗಳಿಸಲು ಸಾಧ್ಯವಾಗದ ಸಂದರ್ಭದಲ್ಲಿ ಲಾಭದಾಯಕವಾಗಿ ಉಳಿಸಿದ PF ನಿಧಿಯನ್ನು ಹೆಚ್ಚಿನ ಅಪಾಯದ ಷೇರುಗಳಲ್ಲಿ ಹೂಡಿಕೆ ಮಾಡುವುದು ಸರಿಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಅದಾನಿ ವಿರುದ್ಧದ ದೂರುಗಳಿಂದ ಅದರ ಷೇರುಗಳು ಕುಸಿತವನ್ನು ಕಂಡಿದ್ದರೂ ಅದಾನಿ ಗ್ರೂಪ್‌ನ 2 ಕಂಪನಿ ಷೇರುಗಳಲ್ಲಿ PF ಹಣವನ್ನು ಹೂಡಿಕೆ ಮಾಡುವುದನ್ನು ಮುಂದುವರೆಸಿರುವುದು ಆಘಾತಕಾರಿಯಾಗಿದೆ. EPFO Remains Invested In Adani Stocks Despite Hindenburg-Induced Market Rout. 

PF ಹಣವನ್ನು ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಪೋರ್ಟ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಕಳೆದ 3 ತಿಂಗಳುಗಳಲ್ಲಿ ಅದಾನಿ ಎಂಟರ್‌ಪ್ರೈಸಸ್ ಷೇರು ಬೆಲೆ 55% ಮತ್ತು ಅದಾನಿ ಪೋರ್ಟ್ಸ್ ಷೇರು ಬೆಲೆ 23% ರಷ್ಟು ಕುಸಿದಿದೆ. ಈ ಕುಸಿತದ ನಂತರವೂ ಕಾರ್ಮಿಕರ ಪಿಂಚಣಿ ಹಣವನ್ನು ಕೋಟಿಗಟ್ಟಲೆ ಅದಾನಿ ಷೇರುಗಳಲ್ಲಿ ಹೂಡಿಕೆ ಮಾಡುವುದು ಸರಿಯಾದ ಕ್ರಮವಲ್ಲ ಎಂಬ ಧ್ವನಿ ಕಾರ್ಮಿಕರಲ್ಲಿ ಬಲವಾಗಿ ಕೇಳಿಬರುತ್ತಿದೆ. EPFO ಬೋರ್ಡ್ ಆಫ್ ಟ್ರಸ್ಟಿಗಳು ಈ ನಿಟ್ಟಿನಲ್ಲಿ ತಕ್ಷಣದ ನಿರ್ಧಾರವನ್ನು ತೆಗೆದುಕೊಂಡರೆ ಮಾತ್ರ ಅದಾನಿ ಷೇರುಗಳಲ್ಲಿನ ಹೂಡಿಕೆಯನ್ನು ಹಿಂಪಡೆಯಬಹುದು. ಇಲ್ಲದಿದ್ದರೆ ಬರುವ 30 ರಿಂದ ಮುಂದಿನ 6 ತಿಂಗಳವರೆಗೆ ಅದಾನಿ ಷೇರುಗಳನ್ನು EPFO ಇರಿಸಿಕೊಳ್ಳಬೇಕಾದ ಸ್ಥಿತಿ ಎದುರಾಗುತ್ತದೆ ಎಂದು ಹೇಳಲಾಗುತ್ತಿದೆ. ಅದಾನಿ ಷೇರು ಹೂಡಿಕೆಯಿಂದ EPFO ಹೂಡಿಕೆ ಮೌಲ್ಯವು ಏರಿಳಿತವಾಗಬಹುದು. ಇದು PF ಸದಸ್ಯರ ಹಣದ ಮೇಲೆ ಗಣನೀಯವಾದ ಪರಿಣಾಮವನ್ನು ಸೃಷ್ಟಿಸುತ್ತದೆ. EPFO Remains Invested In Adani Stocks Despite Hindenburg-Induced Market Rout.