ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ ಸಿಕ್ಕ ಹಣ ಚುನಾವಣೆಗೆ ಹೊಂದಿಸಿಟ್ಟಿದ್ದು? ಜೆಡಿಎಸ್ ಆರೋಪ! » Dynamic Leader
October 5, 2024
ರಾಜಕೀಯ

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ ಸಿಕ್ಕ ಹಣ ಚುನಾವಣೆಗೆ ಹೊಂದಿಸಿಟ್ಟಿದ್ದು? ಜೆಡಿಎಸ್ ಆರೋಪ!

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ ಸಿಕ್ಕ ಕೋಟ್ಯಂತರ ರೂ. ಹಣ ಚುನಾವಣೆಗೆ ಹೊಂದಿಸಿಟ್ಟಿದ್ದು ಎಂಬ ಸಂಗತಿ ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಒಬ್ಬ ಶಾಸಕನ ಮನೆಯಲ್ಲಿ ಇಷ್ಟು ದುಡ್ಡು ಚುನಾವಣೆಗಾಗಿ ಸಂಗ್ರಹವಾಗಿದೆ ಅಂದ್ರೆ, ಬಿಜೆಪಿ ಸರ್ಕಾರದ ಸಚಿವರ ಕತೆ ಏನು? ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.

ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಹೋಗಿ ಮಾಡಾಳ್ ಅವರು ಸಿಕ್ಕಿಹಾಕಿಕೊಂಡಿದ್ದಾರೆ. ಹಣದ ಥೈಲಿಯಲ್ಲಿ ಬಿಜೆಪಿ ಸರ್ಕಾರ ಮುಳುಗಿರುವುದು ಗುಟ್ಟಾಗಿ ಉಳಿದಿಲ್ಲ. 40% ಕಮಿಷನ್ ದಂಧೆಯಲ್ಲಿ ಇವರೆಲ್ಲ ಎಷ್ಟು ದುಡ್ಡು ಲೂಟಿ ಹೊಡೆದಿದ್ದಾರೆ? ಚುನಾವಣೆಯಲ್ಲಿ ನೀರಿನ ರೀತಿ ಹಣ ಖರ್ಚು ಮಾಡುವುದಕ್ಕೆ ಭೂಮಿಕೆ ಸಿದ್ಧವಾಗಿದೆ.

ಕಳಪೆ ಆಡಳಿತ, ಜನರ ತೆರಿಗೆ ಹಣದ ಸುಲಿಗೆ, ಕೋಮು ರಾಜಕಾರಣ ಇವೇ ಮುಂತಾದ ಕುಕೃತ್ಯಗಳನ್ನು ಮಾಡಿ ಹೇಳಿಕೊಳ್ಳಲು ಒಂದು ಕೆಲಸವಿಲ್ಲದ ಕೆಟ್ಟ ಸರ್ಕಾರವಿದು. ಈಗ ಕೋಟಿಗಟ್ಟಲೆ ಹಣ ಸಂಗ್ರಹಿಸಿ ಚುನಾವಣೆಗೆ ಸುರಿಯಲು ಮುಂದಾಗಿದ್ದಾರೆ. ರಾಜ್ಯದ ಜನತೆಯನ್ನು ದುಡ್ಡಿನಲ್ಲಿ ಕೊಳ್ಳಲು ಸಾಧ್ಯವಿಲ್ಲ. ಈ ಸಲ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಪಕ್ಷ ಸರಣಿ ಟ್ವೀಟ್ ಮಾಡಿದೆ.

Related Posts