ವೈಕಂ ಚಳುವಳಿಯ ಶತಮಾನೋತ್ಸವವನ್ನು ಒಂದು ವರ್ಷ ಆಚರಿಸಲಾಗುವುದು: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಘೋಷಣೆ! » Dynamic Leader
October 12, 2024
ದೇಶ

ವೈಕಂ ಚಳುವಳಿಯ ಶತಮಾನೋತ್ಸವವನ್ನು ಒಂದು ವರ್ಷ ಆಚರಿಸಲಾಗುವುದು: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಘೋಷಣೆ!

ಚೆನ್ನೈ: ವೈಕಂ ಚಳವಳಿಯ ಶತಮಾನೋತ್ಸವವನ್ನು ಒಂದು ವರ್ಷ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿಧಾನಸಭೆಯಲ್ಲಿ ಘೋಷಿಸಿದರು. ನಿಯಮ 110ರ ಅಡಿಯಲ್ಲಿ ಹೊಸ ಅಧಿಸೂಚನೆಗಳನ್ನು ಹೊರಡಿಸಿ ಮಾತನಾಡಿದ ಎಂ.ಕೆ.ಸ್ಟಾಲಿನ್, “ವೈಕಂ ಚಳುವಳಿ ಪ್ರಾರಂಭವಾದ ಶತಮಾನದ ಆರಂಭದ ದಿನ ಇಂದು; ಇಂದು ಐತಿಹಾಸಿಕ ದಿನ. ಪ್ರತಿಭಟನೆಯ ಯಶಸ್ಸಿಗೆ ಕಾರಣರಾದ ತಂದೈ ಪೆರಿಯಾರನ್ನು ಗೌರವಿಸುವ ರೀತಿಯಲ್ಲಿ ಐತಿಹಾಸಿಕವಾದ ವಿಶೇಷ ಪ್ರಕಟಣೆಯನ್ನು ಪ್ರಕಟಿಸುತ್ತಿದ್ದೇನೆ. ಒಂದುವರೆ ವರ್ಷಗಳ ಮೇಲೆ ನಡೆದ ಈ ಚಳುವಳಿ, 1925 ನವೆಂಬರ್ 23 ರಂದು ಕೊನೆಗೊಂಡಿತು. ಅದೇ ವರ್ಷ ನವೆಂಬರ್ 29 ರಂದು ಪೆರಿಯಾರ್ ನೇತೃತ್ವದಲ್ಲಿ ವೈಕಂನಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಭಾರತದಲ್ಲಿ ನಡೆದ ಎಲ್ಲಾ ದೇವಾಲಯದ ಗರ್ಭಗುಡಿ ಪ್ರವೇಶದ ಹೋರಾಟಗಳಿಗೆ ವೈಕಂ ಚಳುವಳಿಯೇ ಮಾದರಿಯಾಗಿತ್ತು. ದಬ್ಬಾಳಿಕೆಗೆ ಒಳಗಾದವರು ಸಮತ್ವದ ಹಕ್ಕನ್ನು ಪಡೆಯುವುದರಲ್ಲಿ ಇದುವೇ ಪ್ರೇರಣೆಯಾಗಿತ್ತು ಎಂದು ಹೇಳಿದರೆ ಅದು ಹೆಚ್ಚೇನೂ ಆಗುವುದಿಲ್ಲ. ವೈಕಂ ದೇವಾಲಯ ಪ್ರವೇಶ ಚಳುವಳಿಯ ಶತಮಾನೋತ್ಸವ ಸಮಾರಂಭವನ್ನು ತಮಿಳುನಾಡು ಸರ್ಕಾರ ಬಹಳ ಅದ್ದೂರಿಯಾಗಿ ಆಚರಿಸುತ್ತದೆ. ವರ್ಷಾದ್ಯಂತ ವೈಕಂ ಚಳುವಳಿಯ ಉದ್ದೇಶ, ಯಶಸ್ಸನ್ನು ಸಾರ್ವಜನಿಕರು, ವಿದ್ಯಾರ್ಥಿಗಳು ತಿಳಿದುಕೊಳ್ಳುವ ರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ವೈಕಂ ಚಳುವಳಿಯಲ್ಲಿ ಪೆರಿಯಾರ್ ಅವರನ್ನು ಬಂಧಿಸಿ ಜೈಲಿಗಟ್ಟಿದ ಅರುವಿಕ್ಕುತ್ತು ಗ್ರಾಮದಲ್ಲಿ ಸ್ಮಾರಕ ಸ್ಥಾಪಿಸಲು ಪ್ರಯತ್ನಿಸಲಾಗುವುದು. ಸೆಪ್ಟಂಬರ್ 17ರ ಸಾಮಾಜಿಕ ನ್ಯಾಯ ದಿನದಂದು (ಪೆರಿಯಾರ್ ಜನ್ಮ ದಿನಾಚರಣೆ) ತಮಿಳುನಾಡು ಸರ್ಕಾರ ವೈಕಂ ಪ್ರಶಸ್ತಿ ಪ್ರದಾನ ಮಾಡಲಿದೆ” ಎಂದು ಹೇಳಿದರು.

Periyar, the unsung hero who breathed life back into Vaikom Satyagraha
An unsung hero, he has been a forgotten face in Kerala’s Renaissance history. He’s known for reinvigorating a historic people’s movement from a sinking space — the Vaikom Satyagraha.

Related Posts