4 ಹಂತದ ಮತದಾನ: ಶೇಕಡಾವಾರು ಪ್ರಮಾಣದಲ್ಲಿ ಮುಂದುವರಿದ ಅಕ್ರಮಗಳು; ಏಕಾಏಕಿ ಹೆಚ್ಚಾದ 1 ಕೋಟಿ ಮತಗಳು! ಮೋದಿ ಸರ್ಕಾರದ ಷಡ್ಯಂತ್ರವೇನು? » Dynamic Leader
July 18, 2024
ಲೇಖನ

4 ಹಂತದ ಮತದಾನ: ಶೇಕಡಾವಾರು ಪ್ರಮಾಣದಲ್ಲಿ ಮುಂದುವರಿದ ಅಕ್ರಮಗಳು; ಏಕಾಏಕಿ ಹೆಚ್ಚಾದ 1 ಕೋಟಿ ಮತಗಳು! ಮೋದಿ ಸರ್ಕಾರದ ಷಡ್ಯಂತ್ರವೇನು?

ಡಿ.ಸಿ.ಪ್ರಕಾಶ್

ಚುನಾವಣಾ ಆಯೋಗದ ಹೊಸ ಶೇಕಡಾವಾರು ಲೆಕ್ಕಾಚಾರದ ಪ್ರಕಾರ, ಮತದಾರರ ಸಂಖ್ಯೆ ಇದ್ದಕ್ಕಿದ್ದಂತೆ ಒಂದು ಕೋಟಿಯಷ್ಟು ಹೆಚ್ಚಾಗಿದೆ.!

ದೇಶಾದ್ಯಂತ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಇದರಲ್ಲಿ 4 ಹಂತದ ಚುನಾವಣೆ ಮುಗಿದಿದೆ. ಹಲವು ರಾಜ್ಯಗಳಲ್ಲಿ ಚುನಾವಣೆ ವೇಳೆ ನಾನಾ ಅಕ್ರಮಗಳು ನಡೆದಿರುವ ಆರೋಪ ಕೇಳಿಬಂದಿತ್ತು. ಏತನ್ಮಧ್ಯೆ, ಚುನಾವಣಾ ಆಯೋಗದ ಕಾರ್ಯವೈಖರಿಯಲ್ಲಿ ವಿಶ್ವಾಸಾರ್ಹತೆಯ ಕೊರತೆಯಿದೆ ಎಂದು ಟೀಕಿಸಲಾಗುತ್ತಿದೆ.

ಅದರಲ್ಲೂ ಚುನಾವಣೆ ಘೋಷಣೆಯಾದಾಗಿನಿಂದಲೂ ಕೇವಲ ಇಂಡಿಯಾ ಮೈತ್ರಿಕೂಟದ ನಾಯಕರು ಹಾಗೂ ಅಭ್ಯರ್ಥಿಗಳನ್ನೇ ಗುರಿಯಾಗಿಸಿಕೊಂಡು ಅಡ್ಡಿಪಡಿಸುವ ರೀತಿಯಲ್ಲಿ ಚುನಾವಣಾ ಆಯೋಗ ವರ್ತಿಸುತ್ತಿದೆ ಎನ್ನಲಾಗಿತ್ತು. ಇದಲ್ಲದೇ ಮತದಾನದ ವಿವರ ಪ್ರಕಟಿಸುವಲ್ಲಿ ನಾನಾ ಅಕ್ರಮಗಳು ನಡೆದಿವೆ ಎಂದು ಹೇಳಲಾಗುತ್ತಿದೆ.

ಮೊದಲ ಹಂತ ಹಾಗೂ ಎರಡನೇ ಹಂತದ ಮತದಾನ ಮುಗಿದಮೇಲೆ, ಚುನಾವಣಾ ಆಯೋಗವು ತಕ್ಷಣದ ಮತದಾನದ ಶೇಕಡಾವಾರು ಪ್ರಮಾಣವನ್ನು ಬಿಡುಗಡೆ ಮಾಡದೆ ವಿಳಂಬ ಮಾಡಿ, ಮೊದಲು ಒಂದುರೀತಿಯ ಅಂಕಿಅಂಶವನ್ನು, ನಂತರ ಮತ್ತೊಂದು ಅಂಕಿಅಂಶವನ್ನು ಬಿಡುಗಡೆ ಮಾಡಿ ಗೊಂದಲವನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮತದಾನದ ವಿವರ ಬಿಡುಗಡೆಗೆ ವಿಳಂಬ ಮಾಡಿರುವುದು ಎಲ್ಲರಲ್ಲೂ ಅನುಮಾನ ಮೂಡಿಸಿದೆ.

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಚುನಾವಣಾ ಮತದಾನದ ಶೇಕಡಾವಾರು ಮತ್ತು ಮತದಾರರ ಸಂಖ್ಯೆಯನ್ನು ತಕ್ಷಣವೇ ಪ್ರಕಟಿಸಬೇಕೆಂದು ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಇದಲ್ಲದೆ, ಪ್ರಕರಣವನ್ನು ತುರ್ತಾಗಿ ವಿಚಾರಿಸುವಂತೆ ಮನವಿ ಮಾಡಿದ ನಂತರ, ಚುನಾವಣಾ ಆಯೋಗವು ತನ್ನ ಅಭಿಪ್ರಾಯವನ್ನು ತಕ್ಷಣವೇ ತಿಳಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಈ ವೇಳೆ ಚುನಾವಣಾ ಆಯೋಗ ಇತ್ತೀಚೆಗೆ ಬಿಡುಗಡೆ ಮಾಡಿರುವ ಹೊಸ ಶೇಕಡಾವಾರು ಲೆಕ್ಕಾಚಾರದ ಪ್ರಕಾರ ಮತದಾನ ಮಾಡಿದವರ ಸಂಖ್ಯೆ ಹಠಾತ್ತನೆ ಒಂದು ಕೋಟಿ ಏರಿಕೆಯಾಗಿದೆ. ನಾಲ್ಕು ಹಂತದ ಮತದಾನದಲ್ಲಿ ಚುನಾವಣಾ ಆಯೋಗವು ಆರಂಭದಲ್ಲಿ 65.4% ಮತದಾನವಾಗಿದೆ ಎಂದು ವರದಿ ಮಾಡಿದೆ. ನಂತರ ಮೊನ್ನೆ ಬಿಡುಗಡೆ ಮಾಡಿರುವ ಹೊಸ ವರದಿ ಪ್ರಕಾರ ಶೇ.66.9ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಲೆಕ್ಕಗಳ ಪ್ರಕಾರ ಒಂದು ಕೋಟಿ ಮತಗಳು (1.07 ಕೋಟಿ) ಹೆಚ್ಚಿರುವುದು ಬೆಳಕಿಗೆ ಬಂದಿದೆ.

ಅಂದರೆ ಪ್ರತಿ ಕ್ಷೇತ್ರಕ್ಕೆ ಸರಾಸರಿ 28,000 ಮತಗಳ ಹೆಚ್ಚಳವಾಗಿದೆ. ಈ ಕುರಿತು ವಿಶ್ಲೇಷಣೆ ನಡೆಸಿದಾಗ ಮೊದಲ ಹಂತದಲ್ಲಿ 18 ಲಕ್ಷ, ಎರಡನೇ ಹಂತದಲ್ಲಿ 32 ಲಕ್ಷ, ಮೂರನೇ ಹಂತದಲ್ಲಿ 22 ಲಕ್ಷ ಹಾಗೂ ನಾಲ್ಕನೇ ಹಂತದಲ್ಲಿ 34 ಲಕ್ಷ ಮತಗಳು ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.

ಅಸ್ಸಾಂ ನಲ್ಲಿ ಪ್ರತಿ ಕ್ಷೇತ್ರಕ್ಕೆ ಗರಿಷ್ಠ ಸರಾಸರಿ 73,000 ಮತಗಳು ಹೆಚ್ಚಳವಾಗಿದೆ. ಆಂಧ್ರಪ್ರದೇಶದಲ್ಲಿ ಪ್ರತಿ ಕ್ಷೇತ್ರಕ್ಕೆ 69,000 ಮತಗಳು ಹೆಚ್ಚಿವೆ. ಕೇರಳದಲ್ಲಿ ಪ್ರತಿ ಕ್ಷೇತ್ರಕ್ಕೆ 57 ಸಾವಿರ, ಕರ್ನಾಟಕದಲ್ಲಿ 51 ಸಾವಿರ ಮತ್ತು ಮಹಾರಾಷ್ಟ್ರದಲ್ಲಿ 48 ಸಾವಿರ ಮತಗಳು ಪ್ರತಿ ಕ್ಷೇತ್ರದಲ್ಲೂ ಸರಾಸರಿ ಏರಿಕೆಯಾಗಿದೆ.

ಮತದಾನ ಮುಗಿದ ಕೂಡಲೇ ಚಲಾವಣೆಯಾದ ಮತಗಳ ಸಂಖ್ಯೆಯನ್ನು ಪ್ರಕಟಿಸಬೇಕು ಎಂದು ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳು ಒತ್ತಾಯಿಸುತ್ತಲೇ ಇವೆ. ಆದರೆ ಮತದಾನ ಮಾಡಿದವರ ಸಂಖ್ಯೆಯನ್ನು ಬಹಿರಂಗಪಡಿಸಲು ಚುನಾವಣಾ ಆಯೋಗ ನಿರಾಕರಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ನಾಲ್ಕು ಹಂತದ ಚುನಾವಣೆಯ ನಂತರ ಮತದಾನದ ಪ್ರಮಾಣ ಹೆಚ್ಚಾಗಿರುವುದು ನಾನಾ ಅನುಮಾನಗಳಿಗೆ ಕಾರಣವಾಗಿದೆ ಎಂದು ರಾಜಕೀಯ ಪಕ್ಷಗಳು ಹೇಳುತ್ತಿವೆ. ಇದರಲ್ಲಿ ಮೋದಿ ಸರ್ಕಾರದ ಷಡ್ಯಂತ್ರವೇನು? ಎಂದು ಇಂಡಿಯಾ ಮೈತ್ರಿಕೂಟದ ನಾಯಕರು ಪ್ರಶ್ನೆ ಎತ್ತಿದ್ದಾರೆ.

SOURCE: kalaignarseithigal.com

Related Posts