ತ್ರಿಪುರಾ ವಿಧಾನಸಭೆಯಲ್ಲಿ ಕುತೂಹಲದಿಂದ ಅಶ್ಲೀಲ ವೀಡಿಯೊ ನೋಡುತ್ತಿದ್ದ ಬಿಜೆಪಿ ಎಮ್ಮೆಲ್ಯೆ!
ತ್ರಪುರಾ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರೊಬ್ಬರು ಸಭೆಯ ಕಲಾಪಗಳ ನಡುವೆಯೇಕುತೂಹಲದಿಂದ ಅಶ್ಲೀಲ ವೀಡಿಯೊ ನೋಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಗರ್ತಲಾ: ಉತ್ತರ ತ್ರಿಪುರದವರಾದ ಜದಬ್ ಲಾಲ್ ದೇಬನಾಥ್ ಅವರು ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಬಾಗಬಸ್ಸಾ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸಿ ಶಾಸಕರಾದವರು. ಈ ಜದಬ್ ಲಾಲ್ ದೇಬನಾಥ್ ತಮ್ಮ ಸೆಲ್ ಫೋನಿನಲ್ಲಿ ಅಶ್ಲೀಲ ವೀಡಿಯೊ ನೋಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ವಿಧಾನಸಭೆಯಲ್ಲಿ ಸಭೆ ನಡೆಯುತ್ತಿರುವುದು ಮತ್ತು ಸ್ಪೀಕರ್ ಬಿಸ್ವ ಬಂಧು ಸೇನ್ ಅವರ ಧ್ವನಿ ಸ್ಪಷ್ಟವಾಗಿ ಕೇಳಿಬರುತ್ತಿದೆ. ತನ್ನ ಸಹವರ್ತಿಗಳು ಸುತ್ತುವರೆದಿದ್ದು, ಸ್ವಲ್ಪ ಸಮಯದವರೆಗೆ ತನ್ನ ಸೆಲ್ ಫೋನ್ ಅನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಅಶ್ಲೀಲ ವೀಡಿಯೊ ವೀಕ್ಷಿಸಿಸುವ ಜದಬ್ ಲಾಲ್, ನಂತರ ತನ್ನ ಸೆಲ್ ಫೋನ್ ಅನ್ನು ಮೇಜಿನ ಮೇಲೆ ಇಟ್ಟುಕೊಂಡು ಬಹಿರಂಗವಾಗಿ ಅಶ್ಲೀಲ ಚಿತ್ರಗಳನ್ನು ಆನಂದಿಸುತ್ತಾನೆ. ಕೆಲವೊಮ್ಮೆ ಬೇಸರವಾದಾಗ ಸಭೆಯ ಚಟುವಟಿಕೆಗಳನ್ನೂ ಗಮನಿಸುತ್ತಾನೆ.
ಈ ವೀಡಿಯೋವನ್ನು ಹರಡಿದವರು ಸಾರ್ವಜನಿಕ ಹಿತಾಸಕ್ತಿಯಿಂದ ಅಶ್ಲೀಲ ವೀಡಿಯೊವನ್ನು ಮರೆಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ತ್ರಿಪುರ ಬಿಜೆಪಿ ಅಧ್ಯಕ್ಷ ರಾಜೀವ್ ಭಟ್ಟಾಚಾರ್ಜಿ, ‘ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ಮೊದಲ ಹಂತದಲ್ಲಿ ಜದಬ್ ಲಾಲ್ ದೇಬನಾಥ್ ಅವರಿಗೆ ನೋಟಿಸ್ ಜಾರಿ ಮಾಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.
ಈ ಹಿಂದೆ ಕರ್ನಾಟಕ ಸೇರಿದಂತೆ ಬಿಜೆಪಿಯ ವಿವಿಧ ಶಾಸಕರು ಅಸೆಂಬ್ಲಿಯಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ ಆರೋಪವಿದೆ. ಇದರೊಂದಿಗೆ ಲೈಗಿಂಕ ಆರೋಪದಲ್ಲಿ ಕೆಮರಾ ಕಣ್ಣಿಗೆ ಬೆಚ್ಚಿ ಬಿದ್ದ ಬಿಜೆಪಿಯ ಹಲವು ನಾಯಕರುಗಳಿಗೆ ಸಂಬಂಧಿಸಿದ ಪೋಸ್ಟ್‌ಗಳು, ಜದಬ್ ಲಾಲ್ ದೇಬನಾಥ್ ಅವರ ಪೋಸ್ಟ್ ನೊಂದಿಗೆ ಮತ್ತೆ ವೈರಲ್ ಆಗುತ್ತಿದೆ. Shameful incident of Tripura BJP MLA watching porn during Assembly goes viral.