ದೇಶದ್ರೋಹಿ ಅಜಿತ್ ಪವಾರ್; ಚಾಣಕ್ಯ ಪಡ್ನವೀಸ್: ಬಾಹುಬಲಿ ಶೈಲಿಯ ಪೋಸ್ಟರ್ ಯುದ್ಧ! » Dynamic Leader
July 18, 2024
ದೇಶ

ದೇಶದ್ರೋಹಿ ಅಜಿತ್ ಪವಾರ್; ಚಾಣಕ್ಯ ಪಡ್ನವೀಸ್: ಬಾಹುಬಲಿ ಶೈಲಿಯ ಪೋಸ್ಟರ್ ಯುದ್ಧ!

ಮುಂಬೈ: ಅಜಿತ್ ಪವಾರ್ ಇತ್ತೀಚೆಗೆ ರಾಷ್ಟ್ರೀಯವಾದಿ ಕಾಂಗ್ರೆಸ್‌ನಿಂದ ಬೇರ್ಪಟ್ಟು, ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಶರದ್ ಪವಾರ್‌ ಬೆಂಬಲಿಗರು ಅವರನ್ನು ಟೀಕಿಸಿ ಪೋಸ್ಟರ್‌ ಹಾಕಿದ್ದಾರೆ.

ಶರದ್ ಪವಾರ್ ಅವರ ಮನೆ ಮತ್ತು ಪ್ರಮುಖ ಸ್ಥಳಗಳನ್ನು ಆಕ್ರಮಿಸಿರುವ ಪೋಸ್ಟರ್‌ನಲ್ಲಿ ಬಾಹುಬಲಿಯಂತಹ ವ್ಯಂಗ್ಯ ಚಿತ್ರಗಳೂ ಕಾಣಿಸಿಕೊಂಡಿದೆ. ‘ದ್ರೋಹಿಯನ್ನು (ಹಿಂದಿಯಲ್ಲಿ-ಗದಾರ್) ಜನರು ಕ್ಷಮಿಸುವುದಿಲ್ಲ ಕಟ್ಟಪ್ಪ’ ಎಂಬ ಸಾಲುಗಳು ಆ ಪೊಸ್ಟರ್ ನಲ್ಲಿ ಕಾಣುತ್ತಿವೆ. ಬೆನ್ನಿಗೆ ಕತ್ತಿಯಿಂದ ಇರಿಯುವ ದೃಶ್ಯವೂ ಅದರಲ್ಲಿದೆ.

ಅಜಿತ್ ಪವಾರ್ ಇತ್ತೀಚೆಗೆ ರಾಷ್ಟ್ರೀಯವಾದಿ ಕಾಂಗ್ರೆಸ್‌ನಿಂದ ಕೆಲವು ಶಾಸಕರೊಂದಿಗೆ ಶಿವಸೇನೆ ಮತ್ತು ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸೇರಿಕೊಂಡು, ಉಪ ಮುಖ್ಯಮಂತ್ರಿ ಆಗಿರುವುದನ್ನು ತೀವ್ರವಾಗಿ ಖಂಡಿಸಿರುವ ಶರದ್ ಪವಾರ್ ಬೆಂಬಲಿಗರು, ಈ ರೀತಿಯ ಪೋಸ್ಟರ್ ಅಭಿಯಾನವನ್ನು ಮಾಡುತ್ತಿದ್ದಾರೆ.

ಇದಕ್ಕೆ ಪ್ರತಿಯಾಗಿ ಬಿಜೆಪಿಯ ಮಾಜಿ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಅವರನ್ನು ರಾಜಕೀಯ ಚಾಣಕ್ಯ ಎಂದು ಅವರ ಬೆಂಬಲಿಗರು ಬಣ್ಣಿಸುತ್ತಿರುವುದು ಗಮನಾರ್ಹ.  

Related Posts