ದೇಶದ ಪ್ರತಿಯೊಂದು ನಗರವೂ ​​ಕಾಶ್ಮೀರ ಎಂಬ ಹೆಸರಿನಲ್ಲಿ ಬೀದಿಯನ್ನು ಹೊಂದಿರಬೇಕು! » Dynamic Leader
December 13, 2024
ದೇಶ

ದೇಶದ ಪ್ರತಿಯೊಂದು ನಗರವೂ ​​ಕಾಶ್ಮೀರ ಎಂಬ ಹೆಸರಿನಲ್ಲಿ ಬೀದಿಯನ್ನು ಹೊಂದಿರಬೇಕು!

ಡಿ.ಸಿ.ಪ್ರಕಾಶ್ ಸಂಪಾದಕರು

ದೇಶದ ಪ್ರತಿಯೊಂದು ನಗರದವೂ ​​ಕಾಶ್ಮೀರ ಎಂಬ ಹೆಸರಿನಲ್ಲಿ ಬೀದಿಯನ್ನು ಹೊಂದಿರಬೇಕು! ವಿಶ್ವ ಕಾಶ್ಮೀರಿ ಪಂಡಿತ್ ಸಮ್ಮೇಳನದಲ್ಲಿ ಸದ್ಗುರುಗಳ ಭಾಷಣ!!

ವಿಶ್ವ ಕಾಶ್ಮೀರಿ ಪಂಡಿತ್ ಸಮ್ಮೇಳನದಲ್ಲಿ ಸದ್ಗುರುಗಳು ಭಾರತದ ಪ್ರತಿಯೊಂದು ನಗರವೂ ​​ಕಾಶ್ಮೀರದ ಹೆಸರಿನಲ್ಲಿ ಬೀದಿ ಅಥವಾ ಚೌಕವನ್ನು ರಚಿಸಬೇಕು ಎಂದು ಹೇಳಿದರು.

“ಕಾಶ್ಮೀರದ ಮೂಲನಿವಾಸಿಗಳಾದ ಕಾಶ್ಮೀರಿ ಪಂಡಿತರ ವಿರುದ್ಧ ನಡೆದ ಅನ್ಯಾಯ ಮತ್ತು ದುಃಖಗಳನ್ನು ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಅದಕ್ಕಾಗಿ, ಭಾರತದಾದ್ಯಂತ ಪ್ರತಿ ಪ್ರಮುಖ ನಗರಗಳಲ್ಲಿ ‘ಕಾಶ್ಮೀರ’ ಎಂಬ ಹೆಸರಿನಲ್ಲಿ ರಸ್ತೆ, ಚೌಕ, ವೃತ್ತ ಅಥವಾ ಕಾಶ್ಯಪ್ಪ ಬೆಟ್ಟ ಅಥವಾ ಶಿಖರವನ್ನು ಅಳವಡಿಸುವಂತೆ ನೀವು ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಬೇಕು” ಎಂದು ಕಾಶ್ಮೀರಿ ಪಂಡಿತ್ ಸಮ್ಮೇಳನದಲ್ಲಿ ಸದ್ಗುರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಕಾಶ್ಮೀರಿ ಪಂಡಿತರ ಜನಾಂಗೀಯ ಹತ್ಯೆಯನ್ನು ಜಗತ್ತು ಅಂಗೀಕರಿಸಬೇಕು ಎಂಬ ಉದ್ದೇಶದಿಂದ, ವಲಸೆ ಬಂದ ಕಾಶ್ಮೀರಿ ಪಂಡಿತರು ಸಂಘಟಿತರಾಗಿ ‘ವಿಶ್ವ ಕಾಶ್ಮೀರಿ ಪಂಡಿತ್ ವಲಸಿಗರ ಒಕ್ಕೂಟ’ವನ್ನು (Global Kashmiri Pandit Diaspora) ರಚಿಸಿಕೊಂಡಿದ್ದಾರೆ. ಈ ಸಂಸ್ಥೆಯ ವತಿಯಿಂದ ನಡೆದ ಸಮಾವೇಶದಲ್ಲಿ ಸದ್ಗುರು ಭಾಗವಹಿಸಿ ಆಶೀರ್ವಚನ ನೀಡಿದರು.

ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ವಿಶ್ವಾದ್ಯಂತ ಕಾಶ್ಮೀರಿ ಪಂಡಿತರ ಮೇಲಿನ ಅಭಿಪ್ರಾಯವನ್ನು ಬದಲಾಯಿಸುವುದು ತುಂಬಾ ಅವಶ್ಯಕವಾಗಿದೆ. ಕನಿಷ್ಟಪಕ್ಷ ಭಾರತದಲ್ಲಿ ವಾಸಿಸುವ ಎಲ್ಲಾ ಭಾರತೀಯರು ನಮ್ಮ ಕಾಶ್ಮೀರಿ ಪಂಡಿತರ ವಿರುದ್ಧ ಪ್ರದರ್ಶನಗೊಂಡ ಸಂಕಟಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳಬೇಕು. ವೈಯಕ್ತಿಕವಾಗಿ ಮತ್ತು ಕೌಟುಂಬಿಕವಾಗಿ ನೀವು ಅನುಭವಿಸಿದ ನೋವಿನ ಬಗ್ಗೆ 10 ರಿಂದ 20 ನಿಮಿಷಗಳ ಕಿರುಚಿತ್ರಗಳನ್ನು ತಯಾರಿಸಿ ಪ್ರಕಟಿಸಬೇಕು. ಅದಕ್ಕೆ ಚಿತ್ರಮಂದಿರಗಳ ಅಗತ್ಯವಿಲ್ಲ. ನಮ್ಮೆಲ್ಲರಿಗೂ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ ಇದೆ. ಈ ತಂತ್ರಜ್ಞಾನಗಳೇ ಸಾಕು,’’ ಎಂದರು.

ಮತ್ತು ಇದರ ಬಗ್ಗೆ ಮಾಡಿರುವ ತನ್ನ ಟ್ವಿಟರ್ ಪೋಸ್ಟ್‌ಗಳಲ್ಲಿ, “ನಿಮ್ಮ ಅಪಾರ ಸಂಕಟಕ್ಕಾಗಿ ನನ್ನ ಹೃದಯವು ನಿಮ್ಮಲ್ಲಿ ಪ್ರತಿಯೊಬ್ಬರ ಬಗ್ಗೆ ಸಹಾನುಭೂತಿಯಿಂದ ಪ್ರತಿಧ್ವನಿಸುತ್ತಿದೆ. ಕಾಶ್ಮೀರದ ಪರಿಕಲ್ಪನೆಯನ್ನು ಮರುಪರಿಶೀಲಿಸುವ ಸಮಯವಿದು. ಕಾಶ್ಮೀರದ ಯುವಕರು ಈ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಮತ್ತು ಕಾಶ್ಮೀರದ ಭವಿಷ್ಯವನ್ನು ಪುನಃ ರಚಿಸಬೇಕು. ಈಗಾಗಲೇ ಸಂಭವಿಸಿರುವುದನ್ನು ಸರಿಪಡಿಸಲು ಸಾಧ್ಯವಿಲ್ಲ. ಆದರೆ ಹೆಚ್ಚು ಸಂಭ್ರಮದ ಭವಿಷ್ಯವನ್ನು ರಚಿಸಲು ನಾವು ಬದ್ಧತೆಯನ್ನು ತೋರಬಹುದು. ಕಾಶ್ಮೀರದ ಭವಿಷ್ಯ ಮತ್ತು ಪರಿಕಲ್ಪನೆಯನ್ನು ಬದಲಾಯಿಸುವ ಕಾರ್ಯದಲ್ಲಿ ಯುವಕರು ಸಶಕ್ತರಾಗಬೇಕು ಮತ್ತು ಜವಾಬ್ದಾರಿಯುತವಾಗಿರಬೇಕು. ಅಭಿನಂದನೆಗಳು ಮತ್ತು ಆಶೀರ್ವಾದಗಳು ನಿಮ್ಮೊಂದಿಗೆ ಇರಲಿ.” ಎಂದು ಪೋಸ್ಟ್ ಮಾಡಿದ್ದಾರೆ.

ಇದಲ್ಲದೆ, ಸದ್ಗುರುಗಳು ಕಾಶ್ಮೀರದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಸಂರಕ್ಷಿಸಲು ತಾನು ಬೆಂಬಲ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ಮಾತನಾಡಿದ ಅವರು, “ಭಾರತದ ದಕ್ಷಿಣ ಭಾಗಗಳಲ್ಲಿ ನೀವು ‘ಕಾಶ್ಮೀರ ದಿನ’ ಎಂಬ ಕಾರ್ಯಕ್ರಮವನ್ನು ಆಯೋಜಿಸಬಹುದು. ಅದಕ್ಕೆ ಬೇಕಾದ ಎಲ್ಲ ನೆರವುಗಳನ್ನು ನೀಡುತ್ತೇವೆ. ಇಂತಹ ಕಾರ್ಯಕ್ರಮಗಳ ಮೂಲಕ ನಿಮ್ಮ ಕಲೆ, ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಇತರರು ತಿಳಿದುಕೊಳ್ಳಲಿ. ನಿಮ್ಮ ಕಥೆಗಳು ನೋವಿನಿಂದ ಮಾತ್ರ ನಿಲ್ಲದೇ ಕಾಶ್ಮೀರಿ ಸಂಸ್ಕೃತಿಯ ಸೌಂದರ್ಯ ಮತ್ತು ನಿಮ್ಮೊಳಗಿನ ರೋಮಾಂಚಕ ಕಂಪನಗಳನ್ನು ವ್ಯಕ್ತಪಡಿಸುವಂತಾಗಬೇಕು,”ಎಂದು ಅವರು ಹೇಳಿದರು.

Related Posts