ಮೇಕೆದಾಟು ಅಣೆಕಟ್ಟುಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತೀವ್ರ ವಿರೋಧ! » Dynamic Leader
December 3, 2024
ದೇಶ

ಮೇಕೆದಾಟು ಅಣೆಕಟ್ಟುಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತೀವ್ರ ವಿರೋಧ!

ಡಿ.ಸಿ.ಪ್ರಕಾಶ್

ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಬಾರದು ಎಂಬುದೇ ತಮಿಳುನಾಡು ಭಾರತೀಯ ಜನತಾ ಪಕ್ಷದ ನಿಲುವು ಎಂದು ತಮಿಳು ನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಇಂದು ಪುನರುಚ್ಚರಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಇದೇ ಅಣ್ಣಾಮಲೈ “ತಮಿಳುನಾಡು ಮುಖ್ಯಮಂತ್ರಿ ಏನಾದರೂ ಕರ್ನಾಟಕಕ್ಕೆ ಹೋಗಿ, ಕಾಂಗ್ರೆಸ್ ಕರೆದಿರುವ ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸಿದರೆ, ತಮಿಳುನಾಡಿನಲ್ಲಿ ಸ್ಟಾಲಿನ್ ಅವರಿಗೆ ಪ್ರವೇಶ ನೀಡುವುದಿಲ್ಲ” ಎಂದು ಭಹಿರಂಗ ಹೇಳಿಕೆ ನೀಡಿದ್ದರು.

ಕರ್ನಾಟಕ ಸರ್ಕಾರವು ತಮಿಳುನಾಡಿಗೆ ನೀಡಬೇಕಿದ್ದ ಜೂನ್ ತಿಂಗಳ ನೀರನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿರುವುದಕ್ಕೆ ಅಣ್ಣಾಮಲೈ ಪ್ರತಿಕ್ರಿಯೆ ಇದಾಗಿತ್ತು. ಈಗ ಮುಂದುವರೆದು “ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಬಾರದು ಎಂಬುದೇ ತಮಿಳುನಾಡು ಭಾರತೀಯ ಜನತಾ ಪಕ್ಷದ ನಿಲುವು ಎಂದು ಪುನರುಚ್ಚರಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈತನನ್ನು ಕರ್ನಾಟಕ ಚುನಾವಣೆ ಸಹ ಉಸ್ತುವಾರಿಯಾಗಿ ಬಿಜೆಪಿ ಪಕ್ಷ ನೇಮಕ ಮಾಡಿತ್ತು. ಅದೂ ಅಲ್ಲದೇ ಈ ಆಸಾಮಿ ಬೆಂಗಳೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದಾಗ, ನಮ್ಮ ಕನ್ನಡಿಗರು ಇವರನ್ನು “ರಿಯಲ್ ಸಿಂಗಂ” ಎಂದೆಲ್ಲಾ ಕರೆದು ಕೊಂಡಾಡಿದ್ದರು. ಆದರೆ ಇವರು ಮೇಕೆದಾಟುವಿನಲ್ಲಿ ಅಣೆಕಟ್ಟುವುದಕ್ಕೆ ತೀವ್ರ ರೀತಿಯ ವಿರೋಧವನ್ನು ವ್ಯಕ್ತಪಡಿಸಿ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ.

ನೀರು ಕೊಡದ ಕರ್ನಾಟಕಕ್ಕೆ ಹೋದರೆ, ತಮಿಳುನಾಡಿಗೆ ವಾಪಸ್ಸ್ ಬರಲು ಅವಕಾಶ ನೀಡುವುದಿಲ್ಲ ಮತ್ತು ಗೋ ಬ್ಯಾಕ್ ಸ್ಟಾಲಿನ್ ಎಂದು ಬ್ಯಾನರ್ಗಳೊಂದಿಗೆ ಕಪ್ಪು ಬಲೂನ್ ಹಾರಿಸಲಾಗುವುದು ಎಂದು ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಧಮ್ಕಿ ಹಾಕಿದ ಅಣ್ಣಾಮಲೈ, ಈಗ ಮೇಕೆದಾಟು ಅಣೆಕಟ್ಟಿಗೆ ತೀವ್ರ ರೀತಿಯ ವಿರೋಧವನ್ನು ವ್ಯಕ್ತಪಡಿಸಿ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಇದರ ಬಗ್ಗೆ ಕೆಲವು ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳ ಬಳಿ ಮಾತನಾಡಿದಾಗ, “ಮೇಕೆದಾಟು ಅಣೆಕಟ್ಟು ವಿರೋಧಿ, ಕನ್ನಡ ದ್ರೋಹಿ ಅಣ್ಣಾಮಲೈ ಕರ್ನಾಟಕಕ್ಕೆ ಪ್ರವೇಶ ಮಾಡಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ. “ನಮ್ಮ ನೀರನ್ನು ಕುಡಿದು, ನಮ್ಮಲ್ಲಿ ಬೆಳದ ಆತನಿಗಿ ಎಷ್ಟು ಅಹಂಕಾರ ಇರಬಹುದು” ಎಂದು ಹೇಳಿಕೊಂಡಿದ್ದಾರೆ.

Related Posts