ಮಣಿಪುರದಲ್ಲಿ ಶಾಂತಿ ಶವಪೆಟ್ಟಿಗೆ ರ್‍ಯಾಲಿ ನಡೆಸಿದ ಬುಡಕಟ್ಟು ವಿದ್ಯಾರ್ಥಿಗಳ ಗುಂಪು! » Dynamic Leader
October 21, 2024
ದೇಶ

ಮಣಿಪುರದಲ್ಲಿ ಶಾಂತಿ ಶವಪೆಟ್ಟಿಗೆ ರ್‍ಯಾಲಿ ನಡೆಸಿದ ಬುಡಕಟ್ಟು ವಿದ್ಯಾರ್ಥಿಗಳ ಗುಂಪು!

ಇಂಫಾಲ: ಮಣಿಪುರ ಗಲಭೆಗಳನ್ನು ಕೊನೆಗಾಣಿಸುವಂತೆ ಒತ್ತಾಯಿಸಿ, ಸುರಸಂದಪುರ ಜಿಲ್ಲೆಯ ಲಮ್ಕಾ ಪ್ರದೇಶದಲ್ಲಿ ಬುಡಕಟ್ಟು ವಿದ್ಯಾರ್ಥಿಗಳ ಗುಂಪು, ಕಪ್ಪು ಬಟ್ಟೆ ಧರಿಸಿ ಶಾಂತಿ ಶವಪೆಟ್ಟಿಗೆ ರ್‍ಯಾಲಿ ನಡೆಸಿದರು. ಅಲ್ಲದೆ, ಹಿಂಸಾಚಾರದಲ್ಲಿ ಸಾವನ್ನಪ್ಪಿದ ಆದಿವಾಸಿಗಳ ಶವಗಳನ್ನು ಸರಿಯಾಗಿ ಹೂಳಬೇಕು ಎಂದು ಬುಡಕಟ್ಟು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಈಶಾನ್ಯ ರಾಜ್ಯ ಮಣಿಪುರದಲ್ಲಿ ಮುಖ್ಯಮಂತ್ರಿ ಬೈರೋನ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಮೇ 3ರಿಂದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ನಡೆಯುತ್ತಿದೆ. ಈ ಗಲಭೆಯಲ್ಲಿ ನೂರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 3 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಲ್ಲದೆ, ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆದು, ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಮಣಿಪುರದ ಹಲವೆಡೆ ದಾಳಿಗೆ ಸಂಬಂಧಿಸಿದಂತೆ, ನಿನ್ನೆ ಪೊಲೀಸರು 12 ಮಂದಿಯನ್ನು ಬಂಧಿಸಿದ್ದರು. ಇವರಿಂದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ಮಹಿಳೆಯರ ನೇತೃತ್ವದಲ್ಲಿ 1200 ರಿಂದ 1500 ಜನರು, ಸೈನ್ಯವನ್ನು ಸುತ್ತುವರೆದು ಬಂದಿಸಿದರು. ನಂತರ ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ನಿನ್ನೆ ಸೇನೆ ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಮಾತುಕತೆ ವಿಫಲವಾಗಿತ್ತು. 12 ಜನರನ್ನು ಬಿಡುಗಡೆ ಮಾಡದೆ ಕದಲುವುದಿಲ್ಲ ಎಂದು ನಾಗರಿಕರು ರಾತ್ರಿಯಿಡೀ ಸೈನಿಕರನ್ನು ಸುತ್ತುವರೆದರು ಕುಳಿತಿದ್ದರು. ಬಳಿಕ ಇಂದು (ಜೂನ್ 25) ಎಲ್ಲಾ 12 ಮಂದಿಯನ್ನು ಸೇನೆ ಬಿಡುಗಡೆ ಮಾಡಿದೆ.

ಮಣಿಪುರ ಗಲಭೆಗಳನ್ನು ಕೊನೆಗಾಣಿಸುವಂತೆ ಒತ್ತಾಯಿಸಿ, ಸುರಸಂದಪುರ ಜಿಲ್ಲೆಯ ಲಮ್ಕಾ ಪ್ರದೇಶದಲ್ಲಿ ಬುಡಕಟ್ಟು ವಿದ್ಯಾರ್ಥಿಗಳ ಗುಂಪು, ಕಪ್ಪು ಬಟ್ಟೆ ಧರಿಸಿ ಶಾಂತಿ ಶವಪೆಟ್ಟಿಗೆ ರ್‍ಯಾಲಿ ನಡೆಸಿದರು. ಮತ್ತು ಹಿಂಸಾಚಾರದಲ್ಲಿ ಸಾವನ್ನಪ್ಪಿದ ಆದಿವಾಸಿಗಳ ಶವಗಳನ್ನು ಸರಿಯಾಗಿ ಹೂಳಬೇಕು ಎಂದು ಬುಡಕಟ್ಟು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Related Posts