ಬೆಂಗಳೂರು ನಗರದಲ್ಲಿ CRPC 1973 ಕಲಂ 144ರ ಮೇರೆಗೆ ನಿಷೇಧಾಜ್ಞೆ ಜಾರಿ! » Dynamic Leader
October 5, 2024
ಬೆಂಗಳೂರು

ಬೆಂಗಳೂರು ನಗರದಲ್ಲಿ CRPC 1973 ಕಲಂ 144ರ ಮೇರೆಗೆ ನಿಷೇಧಾಜ್ಞೆ ಜಾರಿ!

ಮದ್ಯೆ ರಹಿತವಾಗಿ ಮಾತ್ರವೇ ಊಟೋಪಚಾರಕ್ಕೆ ನಿಯಮಾನುಸಾರ ಅವಕಾಶವಿರುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಅಯುಕ್ತರಾದ ಪ್ರಥಾಪ್ ರೆಡ್ಡಿಯವರು ತಿದ್ದುಪಡಿ ಆದೇಶವನ್ನು ಹೊರಡಿಸಿದ್ದಾರೆ.

ದಿನಾಂಕ: 08-05-2023ರ ಸಂಜೆ 05-00 ಗಂಟೆಯಿಂದ ದಿನಾಂಕ: 10.05.2023 ರ ಮಧ್ಯ ರಾತ್ರಿ 12-00 ಗಂಟೆಯವರೆಗೆ ಹಾಗೂ ಮತ ಎಣಿಕೆ ದಿನಾಂಕ: 13-05-2023 ರ ಬೆಳಿಗ್ಗೆ 06-00 ಗಂಟೆಯಿಂದ ಮಧ್ಯ ರಾತ್ರಿ 12-00 ಗಂಟೆಯವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಗಟು ಅಥವಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮದ್ಯ, ನಶೆಯುಳ್ಳ ಪದಾರ್ಥಗಳು ಇತರೆ ಯಾವುದೇ ಮಾದಕ ವಸ್ತುಗಳ ಬಳಕೆ, ಮಾರಾಟ ಮತ್ತು ಸಂಗ್ರಹಣೆಯ ನಿಷೇಧದ ಜೊತೆಗೆ Liquor Shops, Wine Shops, Bars, Hotels, Restaurants, Tavern, Shops or any other Public or Private Place ಗಳನ್ನು ಮುಚ್ಚುವಂತೆ ಮದ್ಯ ಮಾರಾಟ ನಿಷೇಧಾಜ್ಞೆಯನ್ನು ಜಾರಿ ಮಾಡಿ ಆದೇಶವನ್ನು ಹೊರಡಿಸಲಾಗಿತ್ತು.

“ಮೇಲ್ಕಂಡ ಸ್ಥಳಗಳಲ್ಲಿ ಮದ್ಯ ಮಾರಾಟ, ಸೇವನೆ ಹೊರೆತುಪಡಿಸಿ Sale, Service of liquor & consumption of liquor is prohibited. But other eatable supply may be continued without liquor and intoxicated items” ಮದ್ಯೆ ರಹಿತವಾಗಿ ಮಾತ್ರವೇ ಊಟೋಪಚಾರಕ್ಕೆ ನಿಯಮಾನುಸಾರ ಅವಕಾಶವಿರುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಅಯುಕ್ತರಾದ ಪ್ರಥಾಪ್ ರೆಡ್ಡಿಯವರು ತಿದ್ದುಪಡಿ ಆದೇಶವನ್ನು ಹೊರಡಿಸಿದ್ದಾರೆ.

Related Posts