ಪಧ್ಮಶ್ರೀ ಫಾರ್ಮ ಅಂಗಡಿಯ ಮೇಲೆ ಸಿಸಿಬಿ ಕಾರ್ಯಾಚರಣೆ ಸುಮಾರು 1 ಕೋಟಿ 90 ಲಕ್ಷ ರೂಗಳು ವಸಕ್ಕೆ! » Dynamic Leader
October 11, 2024
ಕ್ರೈಂ ರಿಪೋರ್ಟ್ಸ್

ಪಧ್ಮಶ್ರೀ ಫಾರ್ಮ ಅಂಗಡಿಯ ಮೇಲೆ ಸಿಸಿಬಿ ಕಾರ್ಯಾಚರಣೆ ಸುಮಾರು 1 ಕೋಟಿ 90 ಲಕ್ಷ ರೂಗಳು ವಸಕ್ಕೆ!

ಬೆಂಗಳೂರು: ಕಾಟನ್ ಪೇಟೆ ಪೊಲೀಸ್ ಠಾಣೆ ಸರಹದ್ದಿನ ಅಕ್ಕಿ ಪೇಟೆ ಮುಖ್ಯ ರಸ್ತೆಯಲ್ಲಿರುವ ಪವನ್ ಪ್ಲಾಜಾ ಕಾಂಪ್ಲೆಕ್ಸ್ ನ ಪಧ್ಮಶ್ರೀ ಫಾರ್ಮ ಅಂಗಡಿಯಲ್ಲಿ, ಯಾವುದೇ ದಾಖಲೆಗಳಿಲ್ಲದೇ ಅಕ್ರಮವಾಗಿ ಹಣ ದಾಸ್ತಾನು ಮಾಡಿಕೊಂಡಿರುವ ಬಗ್ಗೆ ಸಿಸಿಬಿ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಖಚಿತವಾದ ಮಾಹಿತಿಯನ್ನು ಸಂಗ್ರಹಿಸಿ, ಪ್ರಸ್ತುತ ಕರ್ನಾಟಕ ವಿಧಾನ ಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮವಾಗಿ ಹಣ ದಾಸ್ತಾನು ಮಾಡಿಕೊಂಡಿರುವ ಸ್ಥಳದ ಮೇಲೆ ದಾಳಿ ಮಾಡಿ, ಅವರನ್ನು ವಶಕ್ಕೆ ಪಡೆಯಲು ಗಾಂಧಿನಗರ ವಿಧಾನ ಸಭಾ ಕ್ಷೇತ್ರದ ವಿಶೇಷ ಚುನಾವಣಾ ಅಧಿಕಾರಿಗಳೊಂದಿಗೆ ಸೇರಿ ಜಂಟಿ ಕಾರ್ಯಚರಣೆ ನಡೆಸಿ ಅಕ್ರಮವಾಗಿ ಹಣ ದಾಸ್ತಾನು ಮಾಡಿಕೊಂಡಿದ್ದ ಪಧ್ಮಶ್ರೀ ಫಾರ್ಮ ಮೇಲೆ ದಾಳಿ ಮಾಡಿ ಮೂರು ಜನ ಆಸಾಮಿಗಳನ್ನು ಹಾಗೂ ಅವರ ವಸದಲ್ಲಿದ್ದ ಸುಮಾರು 1 ಕೋಟಿ 90 ಲಕ್ಷ ರೂಗಳ ನಗದು ಹಣವನ್ನು ವಸಪಡಿಸಿಕೊಳ್ಳಲಾಗಿದೆ.

ಇವರುಗಳ ವಿರುದ್ಧ ಕ್ರಮ ಜರುಗಿಸಲು ಸ್ಥಳಕ್ಕೆ ಅದಾಯ ತೆರಿಗೆ ಅಧಿಕಾರಿಗಳನ್ನು ಬರಮಾಡಿಕೊಂಡು ಆಸಾಮಿಗಳನ್ನು ಮತ್ತು ವಸಪಡಿಸಿಕೊಂಡಿದ್ದ ಹಣವನ್ನು ಅವರ ಬಳಿ ನೀಡಿದ್ದು, ಆದಾಯ ತೆರಿಗೆ ಇಲಾಖೆಯಲ್ಲಿ ತನಿಖೆ ಮುಂದುವರಿದಿದೆ. ಈ ಕಾರ್ಯಚರಣೆಯನ್ನು ಬೆಂಗಳೂರು ನಗರ ಸಿಸಿಬಿ ವಿಶೇಷ ವಿಚಾರಣಾ ದಳದ ಅಧಿಕಾರಿ ಮತ್ತು ಸಿಬ್ಬಂಧಿಗಳು ಕೈಗೊಂಡಿರುತ್ತಾರೆ.

Related Posts