ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಜಿ20 Archives » Dynamic Leader
July 18, 2024
Home Posts tagged ಜಿ20
ದೇಶ

ತಂಜಾವೂರು: ಅಷ್ಟ ಖನಿಜಗಳಿಂದ ಮಾಡಲಾದ 28 ಅಡಿ ಎತ್ತರದ ನಟರಾಜನ ಪ್ರತಿಮೆ ದೆಹಲಿಯ ಜಿ-20 ಸಮ್ಮೇಳ ಸಭಾಂಗಣದ ಮುಂಭಾಗದಲ್ಲಿ ಪ್ರತಿಷ್ಠಾಪಿಸಲು ತಂಜಾವೂರಿನ ಸ್ವಾಮಿಮಲೈನಿಂದ ಹೊರಟಿದೆ.

ಜಿ20 ಶೃಂಗಸಭೆ ಮುಂದಿನ ತಿಂಗಳು 9 ಮತ್ತು 10 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿದೆ. ಸಮ್ಮೇಳನದ ಸ್ಥಳದ ಮುಂಭಾಗದಲ್ಲಿ ಸ್ಥಾಪಿಸಲು, ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ವತಿಯಿಂದ, ಚೋಳರ ಕಾಲದ ನಟರಾಜನ ಪ್ರತಿಮೆಯನ್ನು ವಿನ್ಯಾಸಗೊಳಿಸಲು ನಿರ್ಧರಿಸಲಾಯಿತು.

ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ಹುಂಡಿಯಲ್ಲಿ ರೂ.100 ಕೋಟಿ ಚೆಕ್ ಪಾವತಿಸಿದ ಭಕ್ತ; ಬ್ಯಾಂಕ್ ಮೊರೆ ಹೋದ ದೇವಸ್ಥಾನದ ಆಡಳಿತಾಧಿಕಾರಿಗಳಿಗೆ ನಿರಾಸೆ!

ಅದರ ನಂತರ, ತಂಜಾವೂರು ಜಿಲ್ಲೆಯ ಸ್ವಾಮಿಮಲೈನ ‘ಎಸ್.ದೇವಸೇನಾಪತಿ ಸ್ಥಪತಿ ಸನ್ಸ್’ ಕಂಪನಿಯ ಸ್ಥಪತಿಗಳಾದ ರಾಧಾಕೃಷ್ಣನ್, ಶ್ರೀಕಂಠನ್, ಸ್ವಾಮಿನಾಥನ್ ಮೂವರೂ ಸೇರಿ, ಪ್ರತಿಮೆಯನ್ನು ವಿನ್ಯಾಸಗೊಳಿಸುವ ಕೆಲಸ ಪ್ರಾರಂಭಿಸಿದರು. ಪ್ರತಿಮೆ ಶೇ.75ರಷ್ಟು ಸಂಪೂರ್ಣವಾದ ಸ್ಥಿತಿಯಲ್ಲಿ, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಮುಖ್ಯಸ್ಥ ಆರ್ಥಲ್ ಪಾಂಡ್ಯಾ, ಕೇಂದ್ರ ಅಧಿಕಾರಿಗಳಾದ ಜವಾಹರ್ ಪ್ರಸಾದ್ ಮತ್ತು ಮನೋಗನ್ ದೀಕ್ಷಿತ್ ಪ್ರತಿಮೆಯನ್ನು ಪಡೆದುಕೊಂಡರು.

ನಂತರ ಪ್ರತಿಮೆಯನ್ನು ಪೊಕ್ಲೈನ್ ಯಂತ್ರದ ಮೂಲಕ ಲಾರಿಯಲ್ಲಿ ಇರಿಸಿ ಕಳುಹಿಸಿ ಕೊಡಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಭಕ್ತಾದಿಗಳು ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಕಳುಹಿಸಿಕೊಟ್ಟರು. ನಟರಾಜನ ಪ್ರತಿಮೆ ಉಳುಂದೂರುಪೇಟೆ, ಸೇಲಂ, ಬೆಂಗಳೂರು, ನಾಗ್ಪುರ, ಆಗ್ರಾ ಮೂಲಕ ದೆಹಲಿಗೆ ದಿನಾಂಕ 28 ರಂದು ತಲುಪಲಿದ್ದು, ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: ಡಾ.ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮ: ಬರೀ ಅಂಬಾನಿ-ಅದಾನಿ ಜೇಬಿನಲ್ಲಿ ಹಣ ಇದ್ದರೆ ಬಡವರ, ಮಧ್ಯಮ ವರ್ಗದವರ ಉದ್ಧಾರ ಸಾಧ್ಯವಿಲ್ಲ! – ಸಿದ್ದರಾಮಯ್ಯ

ಇದರ ಬಗ್ಗೆ ಮಾತನಾಡಿದ ಸ್ಥಪತಿಗಳು, “ತಾಮ್ರ, ಹಿತ್ತಾಳೆ, ಚಿನ್ನ, ಬೆಳ್ಳಿ, ಕಬ್ಬಿಣ, ಪಾದರಸ ಮುಂತಾದ ಅಷ್ಟ (ಎಂಟು) ಖನಿಜಗಳಿಂದ ವಿಗ್ರಹ ನಿರ್ಮಿಸಲಾಗಿದ್ದು, ವಿಶೇಷತೆ ಪಡೆದುಕೊಂಡಿರುವ ಈ ವಿಗ್ರಹವು 28 ಅಡಿ ಎತ್ತರ, 21 ಅಡಿ ಅಗಲ ಮತ್ತು ಸುಮಾರು 25 ಸಾವಿರ ಕೆಜಿ ತೂಕದ 51 ಜ್ವಾಲೆಗಳು ತಿರುವಾಚಿಯಲ್ಲಿ ನೆಲೆಗೊಂಡಿವೆ. ರೂ.10 ಕೋಟಿ ವೆಚ್ಚದಲ್ಲಿ ವಿನ್ಯಾಸ ಮಾಡಲಾಗಿದೆ” ಎಂದು ಹೇಳಿದ್ದಾರೆ.

ದೇಶ ರಾಜಕೀಯ

ನವದೆಹಲಿ: ಭಾರತದ 100ಕ್ಕೂ ಹೆಚ್ಚು ಹಿಂದುಳಿದ ಜಿಲ್ಲೆಗಳಲ್ಲಿ ಜನರ ಜೀವನವನ್ನು ಸುಧಾರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ವಾರಣಾಸಿಯಲ್ಲಿ ನಡೆಯುತ್ತಿರುವ ಜಿ20 ಸಚಿವರ ಸಭೆಯನ್ನು ಉದ್ದೇಶಿಸಿ ವಿಡಿಯೋ ಮೂಲಕ ಮಾತನಾಡಿದ ಪ್ರಧಾನಿ ಮೋದಿ ಈ ವಿಷಯವನ್ನು ಪ್ರಸ್ತಾಪಿಸಿದರು.

ಜಿ20 ಸಚಿವರ ಸಮಾವೇಶ ನಿನ್ನೆ (ಜೂನ್ 11) ಉತ್ತರಪ್ರದೇಶದ ವಾರಣಾಸಿಯಲ್ಲಿ ಆರಂಭವಾಗಿದೆ. ವಿದೇಶಾಂಗ ಸಚಿವ ಜೈಶಂಕರ್ ಮತ್ತು ಜಿ20 ರಾಷ್ಟ್ರಗಳ ವಿದೇಶಾಂಗ ಸಚಿವರು ಇದರಲ್ಲಿ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು (ಜೂನ್ 12) ಜಿ20 ಸಚಿವರ ಸಭೆಯಲ್ಲಿ ಪ್ರಧಾನಿ ಮೋದಿ ವಿಡಿಯೋ ಮೂಲಕ ಮಾತನಾಡಿದರು.

“ಭಾರತದಲ್ಲಿ, ಡಿಜಿಟಲೀಕರಣವು ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣವು ಮುಖ್ಯವಾಗಿದೆ.

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ವಿಳಂಬ ಮಾಡದೆ ಇರುವುದು ನಮ್ಮ ಜವಾಬ್ದಾರಿ ಎಂದು ನಾನು ದೃಢವಾಗಿ ನಂಬುತ್ತೇನೆ. ಭಾರತದ 100ಕ್ಕೂ ಹೆಚ್ಚು ಹಿಂದುಳಿದ ಜಿಲ್ಲೆಗಳಲ್ಲಿ ಜನರ ಜೀವನವನ್ನು ಸುಧಾರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ತಂತ್ರಜ್ಞಾನವನ್ನು ಪ್ರಜಾಪ್ರಭುತ್ವೀಕರಣ ಮಾಡುವುದು ಮುಖ್ಯವಾಗಿದೆ.

ನಮ್ಮ ಪ್ರಯತ್ನಗಳು ಸಮಗ್ರ, ನ್ಯಾಯೋಚಿತ ಮತ್ತು ಸಮರ್ಥನೀಯವಾಗಿರಬೇಕು. ಪಾಲುದಾರ ರಾಷ್ಟ್ರಗಳೊಂದಿಗೆ ತನ್ನ ಅನುಭವವನ್ನು ಹಂಚಿಕೊಳ್ಳಲು ಭಾರತ ಸಿದ್ಧವಾಗಿದೆ” ಎಂದು ಹೇಳಿದರು.

ಆಗ ಕಾಶಿಯ ಮಹತ್ವವನ್ನು ಸಭೆಗೆ ತಿಳಿಸಿದ ಪ್ರಧಾನಿ, “ಇದು ಶತಮಾನಗಳಿಂದ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿದೆ. ಗಂಗಾ ಮತ್ತು ಸಾರನಾಥಕ್ಕೆ ನೀಡಿರುವ ನಿಮ್ಮ ಭೇಟಿಯು, ನಿಮಗೆ ಅಪೇಕ್ಷಿತ ಫಲಿತಾಂಶಗಳನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದರು.