BOMBAY BLOOD GROUP ಬಗ್ಗೆ ನಿಮಗೆ ತಿಳಿದಿದೆಯೇ? ನಿಮಗೆ ಗೊತ್ತಿರದ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ.! » Dynamic Leader
December 4, 2024
ಲೇಖನ

BOMBAY BLOOD GROUP ಬಗ್ಗೆ ನಿಮಗೆ ತಿಳಿದಿದೆಯೇ? ನಿಮಗೆ ಗೊತ್ತಿರದ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ.!

ಯಾವುದೇ ವಿಷಯವಾಗಿರಲಿ, ಅವುಗಳಲ್ಲಿ ಅತ್ಯಂತ ಅಪರೂಪದ ಒಂದು ವಿಶೇಷತೆ ಇರುತ್ತದೆ. ನಮ್ಮ ದೇಹದಲ್ಲಿ ಹರಿಯುವ ರಕ್ತಕ್ಕೆ ಸಂಬಂಧಿಸಿದ ಅಪರೂಪದ ಅಂಶವೊಂದು ಇಲ್ಲಿದೆ… ರಕ್ತದಲ್ಲಿ ಅದೇನು ಅಪುರೂಪ? ಇಲ್ಲಿದೆ ನೋಡೋಣ.

ರಕ್ತ
ಇದು ಮಾನವ ದೇಹದ ಚಲನೆಗೆ ದೇಹದಾದ್ಯಂತ ಹರಿಯುವ ಜೀವ ಮೂಲವಾಗಿದೆ. ರಕ್ತದ ಪ್ರಕಾರಗಳನ್ನು ಸಾಮಾನ್ಯವಾಗಿ A ಗುಂಪು, B ಗುಂಪು, O ಗುಂಪು, AB ಗುಂಪು ಮತ್ತು ಧನಾತ್ಮಕ (Positive), ಋಣಾತ್ಮಕ (Negative) ಎಂದು ಕರೆಯಲಾಗುತ್ತದೆ. ಇವೆಲ್ಲವನ್ನೂ ಮೀರಿ ಇನ್ನೊಂದು ರಕ್ತದ ಗುಂಪು ಇದೆ. ಇದರ ಬಗ್ಗೆ ಹಲವರಿಗೆ ತಿಳಿದಿರಲು ಸಾಧ್ಯವಿಲ್ಲ.

ಬಾಂಬೆ ಬ್ಲಡ್ ಗ್ರೂಪ್
ಈ ರಕ್ತದ ಗುಂಪಿನ ಹೆಸರು ‘BOMBAY BLOOD GROUP’ ವೈದ್ಯಕೀಯ ಜಗತ್ತಿನಲ್ಲಿ ಈ ಪ್ರಕಾರವನ್ನು ‘H’ ಗ್ರೂಫ್ ಎಂದು ಕರೆಯಲಾಗುತ್ತದೆ. ಈ ಬಾಂಬೆ ಗ್ರೂಪನ್ನು ಮೊದಲು ಬಾಂಬೆಯಲ್ಲಿ ಗುರುತಿಸಲಾಯಿತು, ಹಿಂದಿನ ಬಾಂಬೆಯನ್ನು ಇದೀಗ ಮುಂಬೈ ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ‘ಬಾಂಬೆ ಬ್ಲಡ್ ಗ್ರೂಪ್’ ಎಂಬ ಹೆಸರು ಬಂದಿತು.

1952ರಲ್ಲಿ ಡಾ.ಪೆಂಡೆ ಎಂಬುವವರು ಇದನ್ನು ಪತ್ತೆಹಚ್ಚಿದರು. ಭಾರತದಲ್ಲಿ 60,000 ಜನರಲ್ಲಿ ಒಬ್ಬರಿಗೆ ಮಾತ್ರ ಈ ರೀತಿಯ ರಕ್ತವಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಅಷ್ಟರ ಮಟ್ಟಿಗೆ ಈ ರಕ್ತ ಅಪರೂಪವಾದದ್ದು. ಬಾಂಬೆ ಬ್ಲಡ್ ಗ್ರೂಪ್ ಗೆ ಸೇರಿದ ಜನರೇ ಯುನಿವರ್ಸಲ್ ಡೋನರ್ (UNIVERSAL DONOR).

ವಿಶೇಷವೇನು?
ಈ ರಕ್ತದ ಗುಂಪು ಹೊಂದಿರುವ ಜನರು, ಎಲ್ಲಾ ರೀತಿಯ ರಕ್ತ ಹೊಂದಿರುವವರಿಗೆ ರಕ್ತದಾನ ಮಾಡಬಹುದು. ಆದರೆ, ಬಾಂಬೆ ಬ್ಲಡ್ ಗ್ರೂಪಿನವರಿಗೆ ಅದೇ ಗ್ರೂಪ್ ರಕ್ತವೇ ಬೇಕು. ಬಾಂಬೆ ಬ್ಲಡ್ ಗ್ರೂಪ್ ಭಾರತದಲ್ಲಿ ಅಪರೂಪವಾಗಿರುವುದರಿಂದ, ಅದೇ ಗ್ರೂಪಿನ ಜನರಿಗೆ ಮಾತ್ರ ರಕ್ತದಾನ ಮಾಡುವ ಸ್ಥಿತಿ ಇದೆ.

ಇದು ಬಾಂಬೆ ರಕ್ತದ ಗುಂಪಿನ ವಿಶೇಷತೆಯೂ ಹೌದು. ಅದೇ ಸಂದರ್ಭದಲ್ಲಿ ಸಮಸ್ಯೆಯೂ ಆಗಿದೆ. ಬಾಂಬೆ ಬ್ಲಡ್ ಗ್ರೂಪ್ ನ ಪುರುಷ ಮತ್ತು ಮಹಿಳೆ ಮದುವೆಯಾದರೆ ಹುಟ್ಟುವ ಮಕ್ಕಳು ಆರೋಗ್ಯದಿಂದ ಇರುತ್ತಾರೆ. ದಂಪತಿಗಳಲ್ಲಿ ಒಬ್ಬರು ಬೇರೆ ಗುಂಪಿಗೆ ಸೇರಿದವರಾಗಿದ್ದರೆ ಹುಟ್ಟುವ ಮಗುವಿಗೆ ಆಸ್ತಮಾ ಬರುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವೈದ್ಯರು.

Related Posts