ಸನಾತನ ಸಮಸ್ಯೆ: ಸಚಿವ ಉದಯನಿಧಿ ಸ್ಟಾಲಿನ್ ತಲೆಗೆ ರೂ.10 ಕೋಟಿ ಘೋಷಣೆ; ವಿವಾದ ಎಬ್ಬಿಸಿದ ಸ್ವಾಮೀಜಿ! » Dynamic Leader
July 23, 2024
ರಾಜಕೀಯ

ಸನಾತನ ಸಮಸ್ಯೆ: ಸಚಿವ ಉದಯನಿಧಿ ಸ್ಟಾಲಿನ್ ತಲೆಗೆ ರೂ.10 ಕೋಟಿ ಘೋಷಣೆ; ವಿವಾದ ಎಬ್ಬಿಸಿದ ಸ್ವಾಮೀಜಿ!

ಸನಾತನವನ್ನು ತೊಲಗಿಸಬೇಕು ಎಂಬ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಬಿಜೆಪಿ ಪಕ್ಷದ ಮುಖಂಡರು, ಸದಸ್ಯರು ಸೇರಿದಂತೆ ಹಲವರು ಉದಯನಿಧಿ ಸ್ಟಾಲಿನ್ ಅವರನ್ನು ಖಂಡಿಸುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪೊಲೀಸ್ ಠಾಣೆಗಳಲ್ಲಿ ದೂರು ಸಹ ದಾಖಲಿಸಲಾಗುತ್ತಿದೆ. ಸನಾತನ ವಿಷಯ ಇಡೀ ದೇಶದಲ್ಲಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ, ಅಯೋಧ್ಯೆಯ ಸ್ವಾಮೀಜಿಯೊಬ್ಬರು ನೀಡಿರುವ ಹೇಳಿಕೆ ಸದ್ಯ ಸಂಚಲನ ಮೂಡಿಸಿದೆ.

ತಮಿಳುನಾಡು ಕ್ರೀಡಾ ಸಚಿವ ಉದಯನೀಧಿ ಸ್ಟಾಲೀನ್

ಅಯೋಧ್ಯೆಯ ಸ್ವಾಮೀಜಿ ಪರಮಹಂಸ ಆಚಾರ್ಯರು ಸಚಿವ ಉದಯನಿಧಿ ಸ್ಟಾಲಿನ್ ಅವರ ತಲೆಗೆ ರೂ.10 ಕೋಟಿ ನೀಡುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಸಚಿವ ಉದಯನಿಧಿ ಸ್ಟಾಲಿನ್ ಅವರ ಛಾಯಾಚಿತ್ರವನ್ನು ಕತ್ತಿಯಿಂದ ಹರಿದು, ಬೆಂಕಿ ಹಚ್ಚಿರುವ ವೀಡಿಯೊ ಬಿಡುಗಡೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಹಿಂದೆ ಇದೇ ಸ್ವಾಮೀಜಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು; ಘೋಷಿಸದಿದ್ದರೆ ಜಲಸಮಾಧಿ ಆಗುತ್ತೇನೆಎಂದು 2021ರಲ್ಲಿ ಘೋಷಿಸಿದ್ದರು (ನೀರಿಗೆ ಇಳಿದು ತಮ್ಮ ಪ್ರಾಣವನ್ನು ತೆಗೆದುಕೊಳ್ಳುತ್ತಾರೆ). ಆದರೆ, ಅವರು ಹಾಗೆ ಮಾಡಲಿಲ್ಲ. ಆ ಮೂಲಕ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎನ್ನಲಾಗಿದೆ.

Related Posts