ಒಟಿಟಿಯಿಂದ ಸಿನಿಮಾ ನಾಶವಾಗುತ್ತದೆ! ಅಡೂರು ಗೋಪಾಲಕೃಷ್ಣನ್ » Dynamic Leader
July 18, 2024
ಸಿನಿಮಾ

ಒಟಿಟಿಯಿಂದ ಸಿನಿಮಾ ನಾಶವಾಗುತ್ತದೆ! ಅಡೂರು ಗೋಪಾಲಕೃಷ್ಣನ್

  • ಪ್ರತಿಬನ್ ಪ್ರಕಾಶ್

ಒಟಿಟಿಯಿಂದ ಚಿತ್ರರಂಗ ನಾಶವಾಗುತ್ತದೆ ಎಂದು ಕೇರಳದ ಖ್ಯಾತ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಎಚ್ಚರಿಸಿದ್ದಾರೆ.

‘ಸ್ವಯಂವರಂ’, ‘ಎಲಿ ಪತ್ತಾಯಂ’, ‘ನಾಲು ಪೆನ್ನುಗಳ್’ ಮುಂತಾದ 12ಕ್ಕೂ ಹೆಚ್ಚಿನ ಸಿನಿಮಾಗಳನ್ನು ನಿರ್ದೇಶಿಸಿ, 16 ರಾಷ್ಟ್ರೀಯ ಪ್ರಶಸ್ತಿ, 18 ಕೇರಳ ರಾಜ್ಯ ಪ್ರಶಸ್ತಿ, 2004ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡವರು ಅಡೂರು ಗೋಪಾಲಕೃಷ್ಣನ್ (80)

ಕೆಲವು ದಿನಗಳ ಹಿಂದೆ ಅವರು ನೀಡಿದ ಸಂದರ್ಶನವೊಂದರಲ್ಲಿ ‘ಚಿತ್ರ ಮಂದಿರಗಳಲ್ಲಿ ಸಿನಿಮಾ ನೋಡುವುದೆಂಬುದು ಒಂದು ಸಾಮಾಜಿಕ ಅನುಭವ. ಅದನ್ನು ಕಿರು ತೆರೆಯಲ್ಲಿ ನೋಡುವುದು ಹೇಗೆ? ಕೊರೊನಾ ಕಾರಣದಿಂದ ಮನೆಯಲ್ಲೇ ಉಳಿದುಕೊಂಡ ನಾವು, ಒಟಿಟಿಗೆ ಒಗ್ಗಿಕೊಂಡೆವು. ಆದರೇ ಸಿನಿಮಾ ಜೀವಂತವಾಗಿರಬೇಕಾದರೆ, ಅದು ಕಿರುತೆರೆಯನ್ನು ನಂಬಿರಬಾರದು. ನಿರ್ದಿಷ್ಟವಾಗಿ ಹೇಳಬೇಕಾದರೆ, ಒಟಿಟಿಗಾಗಿ ತಯಾರಿಸಲ್ಪಡುವ ಸಿನಿಮಾಗಳು, ಸಿನಿಮಾ ಸಂಸ್ಕೃತಿಯನ್ನೇ ನಾಶಮಾಡಿಬಿಡುತ್ತದೆ’ ಎಂದು ಎಚ್ಚರಿಸಿದ್ದಾರೆ.

Related Posts