ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Varanasi Archives » Dynamic Leader
September 17, 2024
Home Posts tagged Varanasi
ದೇಶ

ನವದೆಹಲಿ: 3ನೇ ಬಾರಿಗೆ ಗೆದ್ದಿರುವ ಪ್ರಧಾನಿ ಮೋದಿ ಇಂದು (ಜೂನ್-18) ತಮ್ಮ ತವರು ಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಇಲ್ಲಿ ರಾತ್ರಿ ಗಂಗಾನದಿಯಲ್ಲಿ ವಿಶೇಷ ಆರತಿಯಲ್ಲಿ ಪಾಲ್ಗೊಳ್ಳುತ್ತಾರೆ.

ಬೆಳಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ರೈತರಿಗೆ ಸಹಾಯಧನ ನೀಡುವ ಯೋಜನೆಯನ್ನು ಉದ್ಘಾಟಿಸಲಿದ್ದು, ಕಡಿಮೆ ಆದಾಯದ ರೈತರಿಗೆ ಹಣಕಾಸಿನ ನೆರವು ನೀಡುವ ಯೋಜನೆಗಾಗಿ ಮೊದಲ ಹಂತದಲ್ಲಿ ರೂ.20 ಸಾವಿರ ಕೋಟಿ ನೀಡಲು ಅನುಮೋದನೆ ನೀಡಿದ್ದಾರೆ. ಇದರಿಂದ ದೇಶಾದ್ಯಂತ 9.25 ಕೋಟಿ ಜನರಿಗೆ ಅನುಕೂಲವಾಗಲಿದೆ.

ಇದರೊಂದಿಗೆ ತನಗೆ ಮತ ನೀಡಿದ ಜನರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.

ರಾಜಕೀಯ

ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಅವಧಿಗೆ ಸ್ಪರ್ಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಸಕ್ರಿಯವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಇದೇ ವೇಳೆ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, “ನಾನು ಎಂದಿಗೂ ಹಿಂದೂ-ಮುಸ್ಲಿಂ ವಿಭಜನೆಯನ್ನು ಸೃಷ್ಟಿಸುವುದಿಲ್ಲ. ಮೋದಿ ಮಾದರಿಯಲ್ಲಿ ಹಿಂದೂ-ಮುಸ್ಲಿಂ ವಿಭಜನೆಗೆ ಅವಕಾಶವಿಲ್ಲ. ನನ್ನ ಬಾಲ್ಯದಿಂದಲೂ ನಾನು ನನ್ನ ಮುಸ್ಲಿಂ ಸ್ನೇಹಿತರೊಂದಿಗೆ ಈದ್ ಅನ್ನು ನನ್ನ ಮನೆಯ ಸಮೀಪದಲ್ಲಿ ಆಚರಿಸಿದ್ದೇನೆ.

ನಾನು ಬಾಲ್ಯದಿಂದಲೂ ಮುಸ್ಲಿಂ ಕುಟುಂಬದೊಂದಿಗೆ ವಾಸಿಸುತ್ತಿದ್ದೇನೆ. 2002 ರಿಂದ ನನ್ನ ಹೆಸರನ್ನು ಹಾಳು ಮಾಡಿದ್ದಾರೆ.

ಹಿಂದೂಗಳಲ್ಲಿ ಕೂಡ ಹೆಚ್ಚು ಮಕ್ಕಳನ್ನು ಹೊಂದಿರುವವರು ಇದ್ದಾರೆ. ಮುಸ್ಲಿಮರು ನನಗೆ ಮತ ಹಾಕುತ್ತಾರೆ. ಹಿಂದೂ-ಮುಸ್ಲಿಂ ವಿಭಜನೆಗೆ ಕಾರಣವಾದರೆ ನಾನು ಸಾರ್ವಜನಿಕ ಜೀವನಕ್ಕೆ ಅನರ್ಹ” ಎಂದು ಹೇಳಿದ್ದಾರೆ.

ರಾಜಕೀಯ

ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಧಾನಿ ಮೋದಿ ಇಂದು (ಮೇ 14) ನಾಮಪತ್ರ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ 3ನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.

ಈ ಕ್ಷೇತ್ರಕ್ಕೆ ಜೂನ್ 1 ರಂದು 7ನೇ ಮತ್ತು ಅಂತಿಮ ಹಂತದ ಚುನಾವಣೆಯ ಸಮಯದಲ್ಲಿ ಮತದಾನ ನಡೆಯಲಿದೆ. ಇಂದು (ಮೇ 14) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಇಂದು ಪ್ರಧಾನಿ ಮೋದಿ ಅವರು ನಾಮಪತ್ರ ಸಲ್ಲಿಸಲು ವಾರಣಾಸಿಗೆ ಆಗಮಿಸಿದ್ದರು. ಇದಕ್ಕೂ ಮುನ್ನ ಅವರು ಗಂಗಾನದಿ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.

ದೇಶ

ವಾರಣಾಸಿ: ‘ಸಣ್ಣ ಕುಶಲಕರ್ಮಿಗಳನ್ನು ಜನಪ್ರಿಯಗೊಳಿಸಲು ಸ್ಥಳೀಯ ಉತ್ಪನ್ನಗಳ ಪರವಾಗಿದ್ದೇನೆ. ಸಣ್ಣ ರೈತರು ಹಾಗೂ ಉದ್ಯಮಿಗಳ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ತಮ್ಮ ತವರು ಕ್ಷೇತ್ರ ವಾರಣಾಸಿಗೆ ಎರಡು ದಿನಗಳ ಪ್ರವಾಸವನ್ನು ಕೈಗೊಂಡಿದ್ದಾರೆ. ಬೆಳಗ್ಗೆ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ, ನಂತರ ಸಂತ ಗುರು ರವಿದಾಸರ 647ನೇ ಜನ್ಮದಿನಾಚರಣೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ವಾರಣಾಸಿಯಲ್ಲಿ 13,000 ಕೋಟಿ ವೆಚ್ಚದ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದರು: ‘ವಾರಣಾಸಿಯಲ್ಲಿ ಕಳೆದ 10 ವರ್ಷಗಳಲ್ಲಿ ಬೆಳವಣಿಗೆ ಹಲವು ಪಟ್ಟು ಹೆಚ್ಚಾಗಿದೆ. ಈ ನಗರದ ಜನರ ಜೀವನಮಟ್ಟವನ್ನು ಹೆಚ್ಚಿಸಲು ನಾನು ಸಂಕಲ್ಪ ಮಾಡಿದ್ದೇನೆ.

ಸಣ್ಣ ಕುಶಲಕರ್ಮಿಗಳನ್ನು ಜನಪ್ರಿಯಗೊಳಿಸಲು ನಾನು ಸ್ಥಳೀಯ ಉತ್ಪನ್ನಗಳಿಗೆ ಧ್ವನಿ ನೀಡುತ್ತಿದ್ದೇನೆ. ಸಣ್ಣ ರೈತರು ಹಾಗೂ ಉದ್ಯಮಿಗಳ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ಹೊಂದಾಣಿಕೆ ರಾಜಕಾರಣದಿಂದಾಗಿ ಉತ್ತರಪ್ರದೇಶ ಅಭಿವೃದ್ಧಿಯಲ್ಲಿ ಹಿಂದುಳಿದಿದೆ.

ಕಾಂಗ್ರೆಸ್ ಯುವರಾಜ, ಕಾಶಿ ಮತ್ತು ಉತ್ತರಪ್ರದೇಶ ಯುವಕರನ್ನು ಗುಲಾಮರು ಎಂದು ಕರೆಯುತ್ತಾರೆ. ಇದು ಯಾವ ರೀತಿಯ ವಿಮರ್ಶೆ? ಅವರು ಉತ್ತರಪ್ರದೇಶದ ಯುವಕರ ಮೇಲೆ ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದಾರೆ. ಆದರೆ ಯುವಕರು ತಮ್ಮದೇ ಆದ ರಾಜ್ಯವನ್ನು ಕಟ್ಟುತ್ತಿದ್ದಾರೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೇಶ

ಮಧ್ಯಪ್ರದೇಶದ ಭೋಪಾಲ್ ಮೂಲದ ಮಹಿಳೆಯೊಬ್ಬರು ಮದುವೆಯಾದ ಐದೇ ತಿಂಗಳಲ್ಲಿ ಪತಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಈ ದಂಪತಿಗಳಿಗೆ ಮದುವೆಯಾಗಿತ್ತು. ಆ ವ್ಯಕ್ತಿ ಐಟಿ ವಲಯದಲ್ಲಿ ಕೆಲಸ ಮಾಡುತ್ತಿದ್ದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಹಾಗೆಯೇ ಮಹಿಳೆಯೂ ಕೆಲಸಕ್ಕೆ ಹೋಗುತ್ತಿದ್ದಾರೆ; ಅವರಿಗೂ  ಒಳ್ಳೆಯ ಸಂಬಳ ಇದೆ. ಮೊದಲು ಅವರು ತಮ್ಮ ಹನಿಮೂನ್‌ಗಾಗಿ ವಿದೇಶಕ್ಕೆ ಹೋಗಲು ಯೋಜಿಸಿದ್ದರು. ಒಳ್ಳೆಯ ಸಂಬಳ ಪಡೆಯುತ್ತಿದ್ದರಿಂದ ಇಬ್ಬರಿಗೂ ಹನಿಮೂನ್‌ಗೆ ವಿದೇಶಕ್ಕೆ ಹೋಗುವುದು ದೊಡ್ದ ಸಮಸ್ಯೆ ಆಗಿರಲಿಲ್ಲ.

ತಮ್ಮ ಹನಿಮೂನ್ ಯೋಜನೆ ಬಗ್ಗೆ ಮಾತನಾಡಿದ ಮಹಿಳೆ, “ನನ್ನ ಪತಿ ತನ್ನ ಹೆತ್ತವರನ್ನು ನೋಡಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಹನಿಮೂನ್‌ಗೆ ವಿದೇಶಕ್ಕೆ ಹೋಗುವ ಆಲೋಚನೆಯನ್ನು ತಿರಸ್ಕರಿಸಿದರು. ದೇಶೀಯವಾಗಿ ಹನಿಮೂನ್‌ಗೆ ಹೋಗೋಣ” ಎಂದು ಹೇಳಿದರು. ಇದರ ನಂತರ, ದಂಪತಿಗಳು ಅಂತಿಮವಾಗಿ ಗೋವಾ ಮತ್ತು ದಕ್ಷಿಣ ಭಾರತಕ್ಕೆ ಭೇಟಿ ನೀಡಲು ನಿರ್ಧರಿಸಿದರು.

ಆದರೆ ಅವರ ಪತಿ, ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕಾಗಿ ಅಯೋಧ್ಯೆಗೆ ಹೋಗಬೇಕೆಂದು ಅವರ ತಾಯಿ ಬಯಸಿದ್ದರಿಂದ ಅಯೋಧ್ಯೆ ಮತ್ತು ವಾರಣಾಸಿಗೆ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ. ಆದರೆ ಅವರು ತನ್ನ ಹೆಂಡತಿಗೆ ಇದನ್ನು ಹೇಳದೇ ಪ್ರವಾಸಕ್ಕೆ ಒಂದು ದಿನ ಮೊದಲು ಮಾಹಿತಿ ನೀಡಿದ್ದಾರೆ. ಉದ್ಘಾಟನಾ ಸಮಾರಂಭಕ್ಕೂ ಮುನ್ನ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಬೇಕೆಂದು ತಾಯಿಯ ಇಚ್ಛೆಯಂತೆ ಪ್ರವಾಸವನ್ನು ಯೋಜಿಸಿದ್ದಾಗಿ ಪತಿ ವಿವರಿಸಿದ್ದಾರೆ.

ನಂಬಿ ಮೋಸಗೊಳಿಸಿದ್ದಾರೆ ಎಂದು ಆಘಾತಗೊಂಡ ಮಹಿಳೆ ಅದನ್ನು ಬಹಿರಂಗಪಡಿಸದೆ, ಅಯೋಧ್ಯೆಗೆ ಹೋಗಲು ಯಾವುದೇ ವಿರೋಧ ವ್ಯಕ್ತಪಡಿಸದೇ ಅಯೋಧ್ಯೆ ಮತ್ತು ವಾರಣಾಸಿಗೆ ಭೇಟಿ ನೀಡಿ ಬಂದಿದ್ದಾರೆ. ಹಿಂತಿರುಗಿ ಬಂದು ಸುಮಾರು 10 ದಿನಗಳ ನಂತರ, ಜನವರಿ 19 ರಂದು ಮಹಿಳೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

“ಮದುವೆಗೆ ಮೊದಲಿನಿಂದಲೂ ಪತಿ ತನಗಿಂತ ಅವರ ಕುಟುಂಬ ಸದಸ್ಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ. ದಂಪತಿಗೆ ಈಗ ಭೋಪಾಲ್ ಕೌಟುಂಬಿಕ ನ್ಯಾಯಾಲಯವು ಆಲೋಚನೆ ಪಡೆಯಲು ಸಮಯ ನೀಡಿದೆ.

ಎರಡು ವಿಭಿನ್ನ ಜೀವನ ಪರಿಸರದಲ್ಲಿ ಬದುಕುತ್ತಿರುವ ಇಬ್ಬರು ವ್ಯಕ್ತಿಗಳು ಪತಿ-ಪತ್ನಿಯಾಗಿ ಒಟ್ಟಿಗೆ ಪ್ರಯಾಣಿಸಲು ಪ್ರಾರಂಭಿಸಿದಾಗ, ಅವರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಾರೆ. ಪತಿಯಾದವರು ತಮ್ಮ ಕುಟುಂಬದ ಆದ್ಯತೆ ಹಾಗೂ ಪತ್ನಿಯ ಮನಸ್ಸನ್ನು ಅರಿತು ಜೀವನ ನಡೆಸಬೇಕು. ಅದೇ ರೀತಿ ಪತ್ನಿಯಾದವಳು ತಮ್ಮ ಪ್ರಾಶಸ್ತ್ಯಗಳನ್ನು ಬಿಟ್ಟುಕೊಡದೆ ಅರ್ಥ ಮಾಡಿಕೊಂಡು ನಡೆಯಬೇಕು. ಕೌಟುಂಬಿಕ ಸಂಬಂಧ ಸುಗಮವಾಗಿ ಸಾಗಲು ಇಬ್ಬರ ಸಹಕಾರವೂ ಮುಖ್ಯವಾಗಿದೆ. ತಾನು ಯಾವ ಸ್ಥಳದಲ್ಲಿ ತನ್ನ ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತೇವೆ ಎಂಬುದನ್ನು ಇಬ್ಬರೂ ವಾಸ್ತವಿಕ ನೆಲೆಗಟ್ಟಿನಿಂದ ಯೋಚಿಸಿ ಜೀವನವನ್ನು ಸಾಗಿಸಿದರೆ ಸಮಸ್ಯೆಗಳಿದ್ದರೂ ಈ ರೀತಿ ವಿಚ್ಛೇದನಕ್ಕೆ ಕಾರಣವಾಗುವುದಿಲ್ಲ.

ದೇಶ ರಾಜಕೀಯ

ನವದೆಹಲಿ: ಭಾರತದ 100ಕ್ಕೂ ಹೆಚ್ಚು ಹಿಂದುಳಿದ ಜಿಲ್ಲೆಗಳಲ್ಲಿ ಜನರ ಜೀವನವನ್ನು ಸುಧಾರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ವಾರಣಾಸಿಯಲ್ಲಿ ನಡೆಯುತ್ತಿರುವ ಜಿ20 ಸಚಿವರ ಸಭೆಯನ್ನು ಉದ್ದೇಶಿಸಿ ವಿಡಿಯೋ ಮೂಲಕ ಮಾತನಾಡಿದ ಪ್ರಧಾನಿ ಮೋದಿ ಈ ವಿಷಯವನ್ನು ಪ್ರಸ್ತಾಪಿಸಿದರು.

ಜಿ20 ಸಚಿವರ ಸಮಾವೇಶ ನಿನ್ನೆ (ಜೂನ್ 11) ಉತ್ತರಪ್ರದೇಶದ ವಾರಣಾಸಿಯಲ್ಲಿ ಆರಂಭವಾಗಿದೆ. ವಿದೇಶಾಂಗ ಸಚಿವ ಜೈಶಂಕರ್ ಮತ್ತು ಜಿ20 ರಾಷ್ಟ್ರಗಳ ವಿದೇಶಾಂಗ ಸಚಿವರು ಇದರಲ್ಲಿ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು (ಜೂನ್ 12) ಜಿ20 ಸಚಿವರ ಸಭೆಯಲ್ಲಿ ಪ್ರಧಾನಿ ಮೋದಿ ವಿಡಿಯೋ ಮೂಲಕ ಮಾತನಾಡಿದರು.

“ಭಾರತದಲ್ಲಿ, ಡಿಜಿಟಲೀಕರಣವು ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣವು ಮುಖ್ಯವಾಗಿದೆ.

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ವಿಳಂಬ ಮಾಡದೆ ಇರುವುದು ನಮ್ಮ ಜವಾಬ್ದಾರಿ ಎಂದು ನಾನು ದೃಢವಾಗಿ ನಂಬುತ್ತೇನೆ. ಭಾರತದ 100ಕ್ಕೂ ಹೆಚ್ಚು ಹಿಂದುಳಿದ ಜಿಲ್ಲೆಗಳಲ್ಲಿ ಜನರ ಜೀವನವನ್ನು ಸುಧಾರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ತಂತ್ರಜ್ಞಾನವನ್ನು ಪ್ರಜಾಪ್ರಭುತ್ವೀಕರಣ ಮಾಡುವುದು ಮುಖ್ಯವಾಗಿದೆ.

ನಮ್ಮ ಪ್ರಯತ್ನಗಳು ಸಮಗ್ರ, ನ್ಯಾಯೋಚಿತ ಮತ್ತು ಸಮರ್ಥನೀಯವಾಗಿರಬೇಕು. ಪಾಲುದಾರ ರಾಷ್ಟ್ರಗಳೊಂದಿಗೆ ತನ್ನ ಅನುಭವವನ್ನು ಹಂಚಿಕೊಳ್ಳಲು ಭಾರತ ಸಿದ್ಧವಾಗಿದೆ” ಎಂದು ಹೇಳಿದರು.

ಆಗ ಕಾಶಿಯ ಮಹತ್ವವನ್ನು ಸಭೆಗೆ ತಿಳಿಸಿದ ಪ್ರಧಾನಿ, “ಇದು ಶತಮಾನಗಳಿಂದ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿದೆ. ಗಂಗಾ ಮತ್ತು ಸಾರನಾಥಕ್ಕೆ ನೀಡಿರುವ ನಿಮ್ಮ ಭೇಟಿಯು, ನಿಮಗೆ ಅಪೇಕ್ಷಿತ ಫಲಿತಾಂಶಗಳನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದರು.