ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಪುಟಿನ್ Archives » Dynamic Leader
November 8, 2024
Home Posts tagged ಪುಟಿನ್
ವಿದೇಶ

ಕೀವ್: 22ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ರಷ್ಯಾಕ್ಕೆ ತೆರಳಿದ್ದಾರೆ. ಇಂದು ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ. ವಿವಿಧ ರಾಜಕೀಯ ಸನ್ನಿವೇಶಗಳಿಂದಾಗಿ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ. ಉಭಯ ದೇಶಗಳ ನಾಯಕರ ಭೇಟಿಯ ಬಳಿಕ ಈ ಬಗ್ಗೆ ಸಂಪೂರ್ಣ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.

ಈ ಹಿನ್ನೆಲೆಯಲ್ಲಿ, ಮೋದಿ ಮತ್ತು ಪುಟಿನ್ ಭೇಟಿಯ ಕುರಿತು ತಮ್ಮ ‘ಎಕ್ಸ್’ ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ರಷ್ಯಾದ ಕ್ಷಿಪಣಿ ದಾಳಿಯಿಂದ ಉಕ್ರೇನ್‌ನಲ್ಲಿ ಇಂದು 13 ಮಕ್ಕಳು ಸೇರಿದಂತೆ 37 ಜನರು ಸಾವನ್ನಪ್ಪಿದ್ದಾರೆ. ಯುವ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಮಕ್ಕಳ ಆಸ್ಪತ್ರೆಯ ಮೇಲೆ ರಷ್ಯಾ ಇಂದು ಕ್ಷಿಪಣಿ ದಾಳಿ ನಡೆಸಿದೆ. ಅವರಲ್ಲಿ ಹಲವರು ಅವಶೇಷಗಳಡಿ ಸಿಲುಕಿದ್ದಾರೆ.

ಇಂತಹ ಸನ್ನಿವೇಶದಲ್ಲಿ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ನಾಯಕರೊಬ್ಬರು, ಮಾಸ್ಕೋದಲ್ಲಿ ವಿಶ್ವದ ಅತ್ಯಂತ ಕೆಟ್ಟ ಅಪರಾಧಿಯನ್ನು ತಬ್ಬಿಕೊಂಡಿರುವುದು ಬಹಳ ನಿರಾಶೆಯನ್ನು ಮೂಡಿಸಿದೆ ಮತ್ತು ಶಾಂತಿಯ ಮೇಲಿನ ಹೊಡೆತದಂತಿದೆ ಎಂದು ಮೋದಿ-ಪುಟಿನ್ ಭೇಟಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಜೂನ್ 14 ರಂದು ಇಟಲಿಯಲ್ಲಿ ನಡೆದ ಜಿ7 ಸಮ್ಮೇಳನದಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದು ಗಮನಾರ್ಹ.

ಇದನ್ನೂ ಓದಿ:
“ಮೋದಿ ಮರು ಆಯ್ಕೆ ಆಕಸ್ಮಿಕವಲ್ಲ; ಅವರ ಹಲವು ವರ್ಷಗಳ ಪರಿಶ್ರಮದ ಫಲ” – ವ್ಲಾಡಿಮಿರ್ ಪುಟಿನ್ ಶ್ಲಾಘನೆ!

 

ವಿದೇಶ

ಮಾಸ್ಕೋ,
ಯುದ್ಧವನ್ನು ಕೊನೆಗೊಳಿಸಲು ಉಕ್ರೇನ್‌ನೊಂದಿಗೆ ಮಾತುಕತೆ ನಡೆಸಲು ರಷ್ಯಾ ಸಿದ್ಧವಾಗಿದೆ ಎಂದು ಅದರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಆದರೆ ಸಂಧಾನಕ್ಕೆ ನಿರಾಕರಿಸಿರುವ ಉಕ್ರೇನ್ ಮೌನ ವಹಿಸಿದೆ.

ಪೂರ್ವ ಯುರೋಪಿಯನ್ ದೇಶವಾದ ಉಕ್ರೇನ್ ವಿರುದ್ಧ ರಷ್ಯಾ ಯುದ್ಧವನ್ನು ಪ್ರಾರಂಭಿಸಿದೆ. ರಷ್ಯಾ ನಿರೀಕ್ಷಿಸದ ರೀತಿಯಲ್ಲಿ ಉಕ್ರೇನ್ ಪ್ರತಿದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ, ರಾಯಿಟರ್ಸ್ ಸುದ್ದಿ ಸಂಸ್ಥೆ, “ಉಕ್ರೇನ್‌ನಲ್ಲಿ ಕದನ ವಿರಾಮ ಜಾರಿಗೆ ತರಲು ಅಧ್ಯಕ್ಷ ಪುಟಿನ್ ಸಿದ್ಧರಾಗಿದ್ದಾರೆ ಎಂದು ರಷ್ಯಾದ 4 ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಶಾಂತಿ ಒಪ್ಪಂದದ ತೀರ್ಮಾನವನ್ನು ಕೆಲವು ಯುರೋಪಿಯನ್ ದೇಶಗಳು ತಡೆಯುತ್ತಿವೆ ಎಂದು ಪುಟಿನ್ ನಂಬಿದ್ದಾರೆ” ಎಂದು ಹೇಳಿದೆ.

ಈ ಕುರಿತು, ರಷ್ಯಾ ಅಧ್ಯಕ್ಷರ ಭವನದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, “ಯುದ್ಧವನ್ನು ಕೊನೆಗೊಳಿಸಲು ಉಕ್ರೇನ್‌ನೊಂದಿಗೆ ಮಾತುಕತೆ ನಡೆಸಲು ರಷ್ಯಾ ಸಿದ್ಧವಾಗಿದೆ. ನಾವು ಯುದ್ಧವನ್ನು ಬಯಸುವುದಿಲ್ಲ” ಎಂದು ಅವರು ಉತ್ತರಿಸಿದರು.

ಉಕ್ರೇನಿಯನ್ ಅಧಿಕಾರಿಗಳು ರಷ್ಯಾದೊಂದಿಗೆ ಕದನ ವಿರಾಮದ ಮಾತುಕತೆಗೆ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ ಉಕ್ರೇನ್ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೇ ಮೌನವಾಗಿದೆ.

ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ರಷ್ಯಾದಲ್ಲಿ ಕಟ್ಟಡದ ಸೆಕ್ಯುರಿಟಿ ಗಾರ್ಡ್‌ ಕೆಲಸ ಕೊಡಿಸುವುದಾಗಿ ನಂಬಿಸಿ ಏಜೆಂಟ್‌ಗಳ ಮೂಲಕ ಕರೆದೊಯ್ಯದ ಭಾರತೀಯರನ್ನು ಯುದ್ಧಭೂಮಿಗೆ ವರ್ಗಾಯಿಸಲಾಗುತ್ತಿದೆ ಎಂದು ಓವೈಸಿ ಆರೋಪಿಸಿದ್ದಾರೆ.

ಅಮೆರಿಕ ಸದಸ್ಯರಾಗಿರುವ ನ್ಯಾಟೋಗೆ ಸೇರುವ ಉಕ್ರೇನ್ ಪ್ರಸ್ತಾಪವನ್ನು ವಿರೋಧಿಸಿದ ರಷ್ಯಾ, ಅಧ್ಯಕ್ಷ ಪುಟಿನ್ ಅವರ ಆದೇಶದ ಮೇರೆಗೆ ಫೆಬ್ರವರಿ 24, 2022 ರಂದು ಉಕ್ರೇನ್ ಮೇಲಿನ ಯುದ್ಧ ಪ್ರಾರಂಭವಾಯಿತು. ಯುದ್ಧ ಪ್ರಾರಂಭವಾಗಿ ನಾಳೆಗೆ ಎರಡು ವರ್ಷ ಪೂರ್ಣಗೊಳ್ಳಲಿದೆ. ಆದರೂ ರಷ್ಯಾದ ದಾಳಿ, ಉಕ್ರೇನ್‌ನ ಪ್ರತಿರೋಧ ನಿರಂತರವಾಗಿದೆ. ಯುದ್ಧ ಪ್ರಾರಂಭವಾದಾಗಿನಿಂದ ಕನಿಷ್ಠ 3 ಲಕ್ಷದ 15 ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಗುಪ್ತಚರ ಇಲಾಖೆಯ ವರದಿಗಳು ಹೇಳುತ್ತವೆ.

ಆದಾಗ್ಯೂ, ಉಕ್ರೇನ್ ಸಂಪೂರ್ಣವಾಗಿ ರಷ್ಯಾಕ್ಕೆ ಶರಣಾದರೆ ಮಾತ್ರ ಪುಟಿನ್ ಯುದ್ಧವನ್ನು ನಿಲ್ಲಿಸುತ್ತಾರೆ ಎಂದು ಹೇಳಲಾಗುತ್ತದೆ. ಈ ಹಿನ್ನಲೆಯಲ್ಲಿ, ಉದ್ಯೋಗಕ್ಕಾಗಿ ಏಜೆಂಟ್‌ಗಳಿಂದ ರಷ್ಯಾಕ್ಕೆ ಕರೆದೊಯ್ಯಲ್ಪಟ್ಟ ಭಾರತೀಯರನ್ನು ಸೈನ್ಯಕ್ಕೆ ಸ್ವಯಂ ಸೇವಕರು ಎಂಬ ಹೆಸರಿನಲ್ಲಿ, ಆಯುಧಗಳನ್ನು ನಿರ್ವಹಿಸು ತರಬೇತಿ ನೀಡಿ, ಮಾರಿಯುಪೋಲ್, ಖಾರ್ಕಿವ್ ಮತ್ತು ಡೊನೆಟ್ಸ್ಕ್‌ನಲ್ಲಿ ಬಲವಂತಪಡಿಸಿ ಯುದ್ಧಭೂಮಿಗೆ ದೂಡಲಾಗುತ್ತಿದೆ ಎಂಬ ವರದಿಗಳಿವೆ.

ವ್ಲಾಡಿಮಿರ್‌ ಪುಟಿನ್‌

ಇದರಲ್ಲಿ, ವಿದೇಶದಲ್ಲಿ ಉದ್ಯೋಗ ಪಡೆಯುವುದು ಹೇಗೆ ಎಂಬ ವೀಡಿಯೋಗಳನ್ನು, ‘ಬಾಬಾ ವ್ಲಾಗ್ಸ್’ (Baba Vlogs) ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡುತ್ತಿರುವ ಫೈಸಲ್ ಖಾನ್ ಎಂಬಾತನೇ ಭಾರತೀಯರನ್ನು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಹಿನ್ನಲೆಯಲ್ಲಿ, ಎಐಎಂಐಎಂ (AIMIM) ನಾಯಕ ಮತ್ತು ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿ, ಕೆಲಸದ ಹೆಸರಿನಲ್ಲಿ ರಷ್ಯಾಕ್ಕೆ ಕರೆದೊಯ್ಯಲಾದ ಭಾರತೀಯರನ್ನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಭಾಗವಹಿಸಲು ಕಡ್ಡಾಯಗೊಳಿಸಲಾಗುತ್ತಿದ್ದು, ಕೂಡಲೇ ಅವರನ್ನು ರಕ್ಷಿಸಿ ಅಲ್ಲಿಂದ ಕರೆತರಲು ನೆರವಾಗುವಂತೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, “ತೆಲಂಗಾಣ, ಗುಜರಾತ್, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶದಿಂದ ನಿರುದ್ಯೋಗಿ ಪುರುಷರನ್ನು ರಷ್ಯಾದಲ್ಲಿ ಕಟ್ಟಡ ಭದ್ರತಾ ಸಿಬ್ಬಂದಿಯ ಕೆಲಸ ಕೊಡಿಸುವುದಾಗಿ ನಂಬಿಸಿ, ಏಜೆಂಟ್‌ಗಳ ಮೂಲಕ ಕರೆದೊಯ್ಯಲಾಗಿದೆ. ಆದರೆ, ಅಲ್ಲಿ ಅವರನ್ನು ವಂಚಿಸಿ ಯುದ್ಧಭೂಮಿಗೆ ಕಳುಹಿಸಲಾಗಿದೆ.

ಅಸಾದುದ್ದೀನ್ ಓವೈಸಿ

ಅಲ್ಲಿ ಸಿಕ್ಕಿಬಿದ್ದವರಿಗೆ ಸಂಬಂಧಿಸಿದಂತೆ, ನನ್ನ ಬಳಿ ಸಹಾಯ ಕೇಳಿ ಬಂದ ಕುಟುಂಬಗಳನ್ನು ನಾನು ಕಳೆದ ಡಿಸೆಂಬರ್‌ನಲ್ಲಿ ಭೇಟಿಯಾದೆ. ಇದಾದ ಬಳಿಕ ಅಲ್ಲಿನ ಜನರನ್ನು ವಾಪಸ್ ಕರೆತರುವಂತೆ ವಿದೇಶಾಂಗ ಸಚಿವ ಜೈಶಂಕರ್ ಹಾಗೂ ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಅವರಿಗೆ ಪತ್ರ ಬರೆದಿದ್ದೇನೆ.

ದುಬೈನಲ್ಲಿರುವ ಫೈಸಲ್ ಖಾನ್, ಮುಂಬೈ ಮೂಲದ ಸುಫಿಯಾನ್ ಮತ್ತು ಭೋಜಾ ಎಂಬುವವರೊಂದಿಗೆ ಸೇರಿ ವಂಚಿಸಿದ್ದಾರೆ. ಅಲ್ಲಿ ಸಿಕ್ಕಿಬಿದ್ದು ಬಲವಂತವಾಗಿ ಯುದ್ಧಭೂಮಿಗೆ ದೂಡಲ್ಪಟ್ಟ ಒಬ್ಬ ಭಾರತೀಯನು ಸಾವನ್ನಪ್ಪಿದ್ದಾನೆ” ಎಂದು ಹೇಳಿದರು.

ಅಲ್ಲದೆ, ಜೈಶಂಕರ್‌ಗೆ ಓವೈಸಿ ಬರೆದಿರುವ ಪತ್ರದಲ್ಲಿ, “ಮೊಹಮ್ಮದ್ ಅಸ್ಫಾನ್, ಅರ್ಬಾಬ್ ಹುಸೇನ್ ಮತ್ತು ಜಹೂರ್ ಅಹ್ಮದ್ ಹೈದರಾಬಾದ್‌ಗೆ ಮರಳಲು ಸಹಾಯವನ್ನು ಎದುರು ನೋಡುತ್ತಿದ್ದಾರೆ. ಆದರೆ ಅವರನ್ನು ಭಾರತೀಯ ಏಜೆಂಟರು ದಾರಿ ತಪ್ಪಿಸಿ ಬಲವಂತವಾಗಿ ರಷ್ಯಾದ ಸೇನೆಗೆ ಸೇರಿಸಿದ್ದಾರೆ ಎಂಬ ಅಂಶವೂ ಬಹಿರಂಗವಾಗಿದೆ.

ವೊಲೊಡಿಮಿರ್ ಝೆಲೆನ್ಸ್ಕಿ

25 ದಿನಗಳಿಂದ ಅವರು ತಮ್ಮ ಕುಟುಂಬದವರನ್ನು ಸಂಪರ್ಕಿಸಿಲ್ಲ. ಅವರ ಕುಟುಂಬಗಳು ತುಂಬಾ ಚಿಂತಿತರಾಗಿದ್ದಾರೆ. ಅಲ್ಲದೆ, ಅವರ ಕುಟುಂಬದಲ್ಲಿ ಅವರೊಬ್ಬರೇ ಸಂಪಾದನೆ ಮಾಡುವವರಾಗಿದ್ದರು” ಎಂದು ನಮೂದಿಸಿದ್ದಾರೆ.

ಇದಕ್ಕೂ ಮೊದಲು, ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ವೀಡಿಯೊದಲ್ಲಿ, ಯುರೋಪಿಯನ್ ದೇಶಗಳ ಕೆಲಸದ ಪರವಾನಿಗೆ (Work Permit) ತನಗೆ ಸಿಕ್ಕಿರುವುದಾಗಿ ಹೇಳಿದ್ದ ಫೈಸಲ್ ಖಾನ್, ರಷ್ಯಾದ ಸೈನ್ಯದೊಂದಿಗೆ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದ್ದರು. ಮತ್ತೊಂದು ವೀಡಿಯೊದಲ್ಲಿ, ಏಳು ಜನರು ರಷ್ಯಾದಲ್ಲಿ ಕೆಲಸ ಮಾಡಲು ಅನುಮತಿ ಪಡೆದಿದ್ದಾರೆ ಎಂದು ಅವರು ಉಲ್ಲೇಖಿಸಿದ್ದರು ಎಂಬುದು ಗಮನಾರ್ಹ.   

ದೇಶ

ನವದೆಹಲಿ: ಉಕ್ರೇನ್ ವಿರುದ್ಧದ ಯುದ್ಧದ ನಂತರ ಯುರೋಪಿಯನ್ ರಾಷ್ಟ್ರಗಳು ರಷ್ಯಾದ ಕಚ್ಚಾ ತೈಲ ಆಮದನ್ನು ನಿಷೇಧಿಸಿತು. ಆದರೆ ಭಾರತದಲ್ಲಿ ಸಂಸ್ಕರಿಸಿದ ರಷ್ಯಾದ ಕಚ್ಚಾ ತೈಲವನ್ನು ಯುರೋಪಿಯನ್ ರಾಷ್ಟ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲಾಗಿದೆ.

ಉಕ್ರೇನ್ ವಿರುದ್ಧದ ರಷ್ಯಾದ ಆಕ್ರಮಣಕ್ಕೆ ಪ್ರತಿಯಾಗಿ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಯುರೋಪಿಯನ್ ರಾಷ್ಟ್ರಗಳು ಕಚ್ಚಾ ತೈಲ ಆಮದಿನ ಮೇಲೆ ನಿಷೇಧ ಹೇರಿದ್ದವು. ಆದರೆ, ನಿರ್ಬಂಧದ ಮೊದಲು ಯುರೋಪ್ ರಾಷ್ಟ್ರಗಳು ತೈಲ ಅಗತ್ಯತೆಯ ಶೇ.30ರಷ್ಟು ರಷ್ಯಾದಿಂದ ಖರೀದಿಸಿಕೊಂಡಿತ್ತು.

ಈ ಹಿನ್ನಲೆಯಲ್ಲಿ, ಭಾರತದಲ್ಲಿ ಸಂಸ್ಕರಿಸಿದ ರಷ್ಯಾದ ಕಚ್ಚಾ ತೈಲವನ್ನು ಯುರೋಪಿಯನ್ ರಾಷ್ಟ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲಾಗಿದೆ. ಭಾರತವು ರಷ್ಯಾದೊಂದಿಗೆ ತಟಸ್ಥ ಸಂಬಂಧವನ್ನು ಹೊಂದಿದೆ. ಅಂತೆಯೇ ಭಾರತವು ಪಾಶ್ಚಿಮಾತ್ಯ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಕಾಯ್ದುಕೊಳ್ಳುತ್ತಿದೆ.

ಪ್ರಸ್ತುತ, ಭಾರತವು ರಷ್ಯಾದಿಂದ ಕೈಗೆಟುಕುವ ಬೆಲೆಯಲ್ಲಿ ಕಚ್ಚಾ ತೈಲವನ್ನು ಖರೀದಿಸಿ, ಅದನ್ನು ದೇಶೀಯವಾಗಿ ಪರಿಷ್ಕರಿಸಿ, ಶೇ.115 ಕಿಂತಲೂ ಹೆಚ್ಚಿನದನ್ನು ಯುರೋಪಿಯನ್ ರಾಷ್ಟ್ರಗಳಿಗೆ ಅಭೂತಪೂರ್ವ ದರದಲ್ಲಿ ವಿತರಿಸಲಾಗುತ್ತಿದೆ.

ಆರ್ಥಿಕ ನಿರ್ಬಂಧಗಳಿಂದಾಗಿ ರಷ್ಯಾದ ಉತ್ಪನ್ನಗಳ ಕಚ್ಚಾ ತೈಲವು ಭಾರಿ ನಷ್ಟವನ್ನು ಅನುಭವಿಸುತ್ತಿದೆ ಎಂಬುದು ಗಮನಾರ್ಹ.

ವಿದೇಶ

ಮಾಸ್ಕೋ: ಬಲ್ಗೇರಿಯಾ ದೇಶಕ್ಕೆ ಸೇರಿದವರು ಬಾಬಾ ವಂಗಾ. ಉತ್ತರ ಮ್ಯಾಸಿಡೋನಿಯಾದಲ್ಲಿ 1911ರಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ತೀವ್ರ ಚಂಡಮಾರುತದಲ್ಲಿ ಸಿಕ್ಕಿಬಿದ್ದ ಅವರು ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದರು. ಅದರಿಂದ ಅವರು ಭವಿಷ್ಯವನ್ನು ಊಹಿಸುವ ಶಕ್ತಿಯನ್ನು ಪಡೆದುಕೊಂಡಿದ್ದರು ಎಂದು ಹೇಳಲಾಗುತ್ತದೆ. ಅವರು 1996ರಲ್ಲಿ ನಿಧನರಾದರು.

ಪ್ರಪಂಚದ ವಿದ್ಯಮಾನಗಳ ಬಗ್ಗೆ ಅವರು ಭವಿಷ್ಯ ನುಡಿದ ಶೇಕಡಾ 85ರಷ್ಟು ನಿಜವಾಗಿದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಚೆರ್ನೋಬಿಲ್ ಪರಮಾಣು ರಿಯಾಕ್ಟರ್ ಅಪಘಾತ, ಇಂಗ್ಲೆಂಡ್‌ನ ರಾಜಕುಮಾರಿ ಡಯಾನಾ ಸಾವು, ಸೋವಿಯತ್ ಒಕ್ಕೂಟದ ವಿಸರ್ಜನೆ ಮತ್ತು ಅಮೆರಿಕ ಅವಳಿ ಗೋಪುರಗಳ ಮೇಲಿನ ದಾಳಿಗಳು ನಿಜವಾಗಿವೆ.

ಈ ಹಿನ್ನಲೆಯಲ್ಲಿ, ಮುಂಬರುವ 2024ರಲ್ಲಿ ಅವರು ಏಳು ಭವಿಷ್ಯವಾಣಿಗಳನ್ನು ನುಡಿದಿದ್ದಾರೆ ಎಂದು ಸುದ್ದಿ ಸಂಸ್ಥೆ ಡೈಲಿ ಸ್ಟಾರ್ ವರದಿ ಮಾಡಿದೆ. ಅವುಗಳನ್ನು ಈ ಕೆಳಗಿನಂತೆ ನೋಡೋಣ.

2024ರಲ್ಲಿ ಭೂಕಂಪ, ಅಗ್ನಿ ಮತ್ತು ಪ್ರವಾಹದಂತಹ ಅನೇಕ ನೈಸರ್ಗಿಕ ವಿಕೋಪಗಳು ಸಂಭವಿಸುತ್ತವೆ. ಕ್ಯಾನ್ಸರ್‌ಗೆ ಮದ್ದು ಕಂಡು ಹಿಡಿಯಲಾಗುವುದು. ಕ್ವಾಂಟಮ್ ಕಂಪ್ಯೂಟರ್‌ಗಳ ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿಗಳು ಸಂಭವಿಸುತ್ತವೆ. ರಷ್ಯಾದ ಅಧ್ಯಕ್ಷ ಪುಟಿನ್ ತನ್ನ ದೇಶದವನೊಬ್ಬನಿಂದ ಹತ್ಯೆಯಾಗುತ್ತಾರೆ.

ಯುರೋಪಿನಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಾಗಿರುತ್ತದೆ. ಮತ್ತು ಒಂದು “ಪ್ರಮುಖ ದೇಶ” ಮುಂದಿನ ವರ್ಷ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗಳು ಮತ್ತು ದಾಳಿಗಳನ್ನು ನಡೆಸುತ್ತದೆ. ದೊಡ್ಡ ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ. ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ನಿಗೂಢ ಕಾಯಿಲೆಯಿಂದ ಬಳಲಲಿದ್ದಾರೆ.

ಸೈಬರ್ ದಾಳಿಗಳು ಹೆಚ್ಚಾಗುತ್ತವೆ. ಹ್ಯಾಕರ್‌ಗಳು ಹೆಚ್ಚು ಅತ್ಯಾಧುನಿಕರಾಗುತ್ತಾರೆ ಮತ್ತು ಪವರ್ ಗ್ರಿಡ್‌ಗಳು ಹಾಗೂ ನೀರಿನ ಸಂಸ್ಕರಣಾ ಘಟಕಗಳಂತಹ ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿಸುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಪ್ರತಿ ವರ್ಷವೂ ಸಾಮಾಜಿಕ ಮಾಧ್ಯಮದಲ್ಲಿ ಮುಖ್ಯಾಂಶಗಳಾಗಿ ಹರಿದಾಡುತ್ತವೆ ಎಂಬುದು ಗಮನಾರ್ಹ.

ವಿದೇಶ

ಮಾಸ್ಕೋ: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ರಷ್ಯಾದಲ್ಲಿ ಪುಟಿನ್ ಅವರನ್ನು ಭೇಟಿಯಾದರು. ಎರಡೂ ರಾಷ್ಟ್ರಗಳ ಮುಖ್ಯಸ್ಥರು ಶಸ್ತ್ರಾಸ್ತ್ರ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ.

ರೈಲಿನಲ್ಲಿ ಪ್ರಯಾಣ:
ಉತ್ತರ ಕೊರಿಯಾ ಮತ್ತು ರಷ್ಯಾ ನಡುವೆ 1,180 ಕಿ.ಮೀ ದೂರವಿದೆ. ಆದರೆ, ಉತ್ತರ ಕೊರಿಯಾದ ಅಧ್ಯಕ್ಷರು ವಿಮಾನದಲ್ಲಿ ಹೋಗುವ ಬದಲು ರೈಲಿನಲ್ಲಿ ಹೊರಟರು. ಶರವೇಗದಲ್ಲಿ ಸೇನಾ ಬಲವನ್ನು ವೃದ್ಧಿಸಿಕೊಳ್ಳುತ್ತಿರುವ ಕಿಮ್ ಜಾಂಗ್ ಉನ್ ವಿಮಾನದಲ್ಲಿ ಪ್ರಯಾಣಿಸದಿರಲು ಅವರ ಪರಂಪರೆಯೇ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಸನಾತನದ ವಿರುದ್ಧ ಮಾತನಾಡುವವರ ನಾಲಿಗೆಯನ್ನು ಕಿತ್ತೊಗೆಯಬೇಕು! ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್

ಶಸ್ತ್ರಾಸ್ತ್ರ ಶೃಂಗಸಭೆ:
ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಇಂದು (ಸೆಪ್ಟೆಂಬರ್ 12) ರಷ್ಯಾಕ್ಕೆ ಆಗಮಿಸಿದ್ದಾರೆ. ಅವರ ಪ್ರಯಾಣ ಅಮೆರಿಕ ಸೇರಿದಂತೆ ಹಲವು ಅಂತಾರಾಷ್ಟ್ರೀಯ ದೇಶಗಳ ಗಮನ ಸೆಳೆದಿದೆ. ಈ ಹಿನ್ನಲೆಯಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ರಷ್ಯಾದ ಪುಟಿನ್ ಅವರನ್ನು ಭೇಟಿ ಮಾಡಿದ್ದಾರೆ. ಎರಡೂ ರಾಷ್ಟ್ರಗಳ ಮುಖ್ಯಸ್ಥರು ಶಸ್ತ್ರಾಸ್ತ್ರ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ.

ಉಕ್ರೇನ್‌ನ ಯುದ್ಧವನ್ನು ಎದುರಿಸಲು ಪುಟಿನ್ ಉತ್ತರ ಕೊರಿಯಾದಿಂದ ಶಸ್ತ್ರಾಸ್ತ್ರಗಳನ್ನು ಕೋರಿದರು ಎಂದು ವರದಿಯಾಗಿದೆ. ಇದೀಗ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ಅಧ್ಯಕ್ಷರ ಭೇಟಿ ನಡೆದಿದೆ. ಉತ್ತರ ಕೊರಿಯಾದೊಂದಿಗಿನ ಸಹಕಾರವನ್ನು ಎಲ್ಲಾ ಕ್ಷೇತ್ರಗಳಲ್ಲಿ ಸುಧಾರಿಸಬೇಕು ಎಂದು ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಹೇಳಿದ್ದಾರೆ.

ಇದನ್ನೂ ಓದಿ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕಮಲದ ಹೂವುಗಳಿಂದ ಕೂಡಿದ ಹೊಸ ಸಮವಸ್ತ್ರ!

ರಷ್ಯಾದ ವ್ಯಾಗ್ನರ್ ಪಡೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ಉತ್ತರ ಕೊರಿಯಾವನ್ನು ಅಮೆರಿಕಾ  ತೀವ್ರವಾಗಿ ಖಂಡಿಸಿತ್ತು ಎಂಬುದು ಗಮನಾರ್ಹ.