ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಪವನ್ ಕಲ್ಯಾಣ್ Archives » Dynamic Leader
November 8, 2024
Home Posts tagged ಪವನ್ ಕಲ್ಯಾಣ್
ರಾಜಕೀಯ

ಹೈದರಾಬಾದ್‌ನ ಪಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ ಪವನ್ ಕಲ್ಯಾಣ್ ವಿರುದ್ಧ ದೂರು ದಾಖಲಾಗಿದೆ!

ಅಮರಾವತಿ,
‘ತಿರುಪತಿ ದೇವಸ್ಥಾನದ ಲಡ್ಡುಗಳಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದ್ದು, ಈ ಲಡ್ಡುಗಳನ್ನು ಅಯೋಧ್ಯೆಗೂ ಕಳುಹಿಸಿಕೊಡಲಾಗಿತ್ತು’ ಎಂದು ಆಂಧ್ರ ಉಪ ಮುಖ್ಯಮಂತ್ರಿ ಹಾಗೂ ತೆಲುಗು ನಟ ಪವನ್ ಕಲ್ಯಾಣ್ ಆರೋಪಿಸಿ ವಿವಾದ ಸೃಷ್ಟಿಸಿದ್ದರು.

ಇದರ ಬೆನ್ನಲ್ಲೇ, ಪ್ರಜಾ ಶಾಂತಿ ಪಕ್ಷದ ನಾಯಕ ಕೆ.ಎ.ಪಾಲ್ (K.A.Paul) ಹೈದರಾಬಾದ್‌ನ ಪಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ ಪವನ್ ಕಲ್ಯಾಣ್ ವಿರುದ್ಧ ದೂರು ದಾಖಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎ.ಪಾಲ್,

“ಪವನ್ ಕಲ್ಯಾಣ್ ಅವರ ಹೇಳಿಕೆ ಹುಚ್ಚುತನದಿಂದ ಕೂಡಿದೆ. ಪ್ರಾಣಿಗಳ ಕೊಬ್ಬನ್ನು ಬೆರೆಸಿದ ಒಂದು ಲಕ್ಷ ಲಡ್ಡನ್ನು ಅಯೋಧ್ಯೆಯ ರಾಮಮಂದಿರಕ್ಕೆ ಸಿದ್ಧಪಡಿಸಿ ಕಳುಹಿಸಿಕೊಡಲಾಗಿದೆ ಎಂದು ಆರೋಪಿಸಿದ್ದಾರೆ. ಅಯೋಧ್ಯೆ ರಾಮಮಂದಿರ ಕಾರ್ಯಕ್ರಮ ಜನವರಿಯಲ್ಲಿ ನಡೆದಿತ್ತು. ಆದರೆ ಜುಲೈನಲ್ಲೇ ಚಂದ್ರಬಾಬು ನಾಯ್ಡು ಲಡ್ಡುವಿನಲ್ಲಿ ಕಲಬೆರಕೆ ಮಾಡಿರುವ ವಿಷಯವನ್ನು ಬಹಿರಂಗಪಡಿಸಿದ್ದರು. ಹೀಗಿರುವಾಗ, ಜನವರಿಯಲ್ಲಿ ತಿರುಪತಿ ಲಡ್ಡುವಿನಲ್ಲಿ ಕಲಬೆರಕೆ ನಡೆದಿರುವುದು ಇವರಿಗೆ ಹೇಗೆ ಗೊತ್ತು? ಹಾಗಾಗಿ ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಿರುವ ಪವನ್ ಕಲ್ಯಾಣ್ ವಿರುದ್ಧ ಕ್ರಮ ಕೈಗೊಂಡು ಬಂಧಿಸಬೇಕು. ಇದನ್ನು ಒತ್ತಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೂ ಮನವಿ ಪತ್ರ ಕಳುಹಿಸಿದ್ದೇನೆ” ಎಂದು ಹೇಳಿದ್ದಾರೆ.  

ರಾಜಕೀಯ ಸಿನಿಮಾ

ಡಿಯರ್ ಪವನ್ ಕಲ್ಯಾಣ್, ನಾನು ನಿಮ್ಮ ಪತ್ರಿಕಾಗೋಷ್ಠಿಯನ್ನು ನೋಡಿದೆ. ನಾನು ಹೇಳಿದ್ದನ್ನು ನೀವು ತಪ್ಪಾಗಿ ಅರ್ಥೈಸಿಕೋಂಡು ಮಾತನಾಡಿರುವುದು ಆಶ್ಚರ್ಯಕರವಾಗಿದೆ – ನಟ ಪ್ರಕಾಶ್ ರಾಜ್

ತಿರುಪತಿ ಲಡ್ಡು ವಿಚಾರದಲ್ಲಿ ‘ಸನಾತನ ಧರ್ಮ ಸಂರಕ್ಷಣಾ ಮಂಡಳಿ’ ಸ್ಥಾಪಿಸಬೇಕು ಎಂದು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿರುವುದಕ್ಕೆ ನಟ ಪ್ರಕಾಶ್ ರಾಜ್, “ನೀವು ಉಪಮುಖ್ಯಮಂತ್ರಿಯಾಗಿರುವ ರಾಜ್ಯದಲ್ಲೇ ಈ ಘಟನೆ ನಡೆದಿದೆ.

ದಯವಿಟ್ಟು ವಿಚಾರಿಸಿ, ತಪ್ಪಿತಸ್ಥರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಿ. ಈ ಸಮಸ್ಯೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಬೃಹದಾಕಾರವಾಗಿ ಬಿಂಬಿಸಿ ಏಕೆ ಭಯವನ್ನು ಹರಡುತ್ತಿದ್ದೀರಿ? ದೇಶವು ಈಗಾಗಲೇ ಸಾಕಷ್ಟು ಹಿಂಸಾತ್ಮಕ ಉದ್ವಿಗ್ನತೆಯನ್ನು ಹೊಂದಿದೆ. ಕೇಂದ್ರದಲ್ಲಿರುವ ನಿಮ್ಮ ಸ್ನೇಹಿತರಿಗೆ ಧನ್ಯವಾದಗಳು” ಎಂದು ಹೇಳಿದ್ದರು.

ಇದಕ್ಕಾಗಿ ನಟ ಪ್ರಕಾಶ್ ರಾಜ್ ಅವರನ್ನು ಪವನ್ ಕಲ್ಯಾಣ್ ತೀವ್ರವಾಗಿ ಟೀಕಿಸಿದ್ದರು. “ನಮ್ಮ ಭಾವನೆಗಳನ್ನು ಗೇಲಿ ಮಾಡಬೇಡಿ. ಈ ಘಟನೆ ನಿಮಗೆ ತಮಾಷೆಯಾಗಿ ಕಾಣಿಸಬಹುದು. ಆದರೆ ನಮಗೆ ಹಾಗಲ್ಲ. ಇದು ಆಳವಾದ ನೋವನ್ನು ಉಂಟುಮಾಡಿದೆ. ಸನಾತನ ಧರ್ಮದ ಬಗ್ಗೆ ಮಾತನಾಡುವ ಮುನ್ನ 100 ಬಾರಿ ಯೋಚಿಸಿ” ಎಂದು ಹೇಳಿದ್ದರು.

ಇದಕ್ಕೆ ತಮ್ಮ ‘ಎಕ್ಸ್’ ಪೇಜ್ ನಲ್ಲಿ ಪ್ರತಿಕ್ರಿಯೆ ನೀಡಿರುವ ನಟ ಪ್ರಕಾಶ್ ರಾಜ್, “ಡಿಯರ್ ಪವನ್ ಕಲ್ಯಾಣ್, ನಾನು ನಿಮ್ಮ ಪತ್ರಿಕಾಗೋಷ್ಠಿಯನ್ನು ನೋಡಿದೆ. ನಾನು ಹೇಳಿದ್ದನ್ನು ನೀವು ತಪ್ಪಾಗಿ ಅರ್ಥೈಸಿಕೋಂಡು ಮಾತನಾಡಿರುವುದು ಆಶ್ಚರ್ಯಕರವಾಗಿದೆ.

ವಿದೇಶದಲ್ಲಿ ಶೂಟಿಂಗ್ ನಲ್ಲಿ ಇದ್ದೇನೆ. ಅದನ್ನು ಮುಗಿಸಿಕೊಂಡು 30ನೇ ತಾರೀಖಿನ ನಂತರ ನಿಮ್ಮ ಪ್ರತಿಯೊಂದು ಪ್ರಶ್ನೆಗೂ ಉತ್ತರ ಕೊಡುತ್ತೇನೆ. ಅಷ್ಟರೊಳಗೆ ನನ್ನ ಹಳೆಯ ಪೋಸ್ಟ್‌ಗಳನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

ದೇಶ

ವಿಜಯವಾಡ: ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಗೆದ್ದು ಕೇಂದ್ರದಲ್ಲಿ ಸರ್ಕಾರ ರಚಿಸಿರುವ ಸನ್ನಿವೇಶದಲ್ಲಿ, ಆಂಧ್ರ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸದಸ್ಯರಾಗಿರುವ ತೆಲುಗು ದೇಶಂ ಪಕ್ಷವು ತನ್ನ ವಿಜಯವನ್ನು ದಾಖಲಿಸಿದೆ.

175 ಸ್ಥಾನಗಳ ಆಂಧ್ರ ಪ್ರದೇಶ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತೆಲುಗು ದೇಶಂ, ಜನಸೇನಾ ಮತ್ತು ಬಿಜೆಪಿ ಒಳಗೊಂಡ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ 164 ಸ್ಥಾನಗಳನ್ನು ಗೆದ್ದುಕೊಂಡಿದೆ. ಹೀಗಾಗಿ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ, ಇಂದು ಮಧ್ಯಾಹ್ನ 11.30ಕ್ಕೆ ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಅಬ್ದುಲ್ ನಜೀರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಅಲ್ಲದೆ, ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್, ಚಂದ್ರಬಾಬು ಪುತ್ರ ನಾರಾ ಲೋಕೇಶ್ ಸೇರಿದಂತೆ 24 ಮಂದಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.

ವಿಜಯವಾಡ ಬಳಿಯ ಗನ್ನಾವರಂ ಪ್ರದೇಶದ ಟೆಕ್ನಾಲಜಿ ಪಾರ್ಕ್ ಮೈದಾನದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ, ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್, ನಟರಾದ ರಜನಿಕಾಂತ್, ಚಿರಂಜೀವಿ, ಬಾಲಕೃಷ್ಣ ಮತ್ತಿತರರು ಭಾಗವಹಿಸಿದ್ದರು.

ಆಂಧ್ರಪ್ರದೇಶದ ಕಿಂಗ್ ಮೇಕರ್, ರಾಜಕೀಯದಲ್ಲಿ ಮುತ್ಸದ್ದಿ, ಜಾಣ ಎಂದು ಗುರುತಿಸಿಕೊಂಡಿರುವ ಚಂದ್ರಬಾಬು ನಾಯ್ಡು ಇಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆ ಏರಿದ್ದಾರೆ!

ರಾಜಕೀಯ

ಡಿ.ಸಿ.ಪ್ರಕಾಶ್

ಆಂಧ್ರಪ್ರದೇಶದ 175 ಕ್ಷೇತ್ರಗಳಲ್ಲಿ 134 ಕ್ಷೇತ್ರಗಳಲ್ಲಿ ಚಂದ್ರಬಾಬು ಗೆದ್ದಿದ್ದಾರೆ: ಜಗನ್ಮೋಹನ್ ಪ್ರತಿಪಕ್ಷ ಸ್ಥಾನಮಾನವನ್ನೂ ಕಳೆದುಕೊಂಡಿದ್ದಾರೆ.

ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಅಧಿಕಾರಕ್ಕೆ ಬರುತ್ತಿದ್ದಂತೆ, ಜಗನ್ಮೋಹನ್ ರೆಡ್ಡಿ ವಿರೋಧ ಪಕ್ಷವಾಗುವ ಅರ್ಹತೆಯನ್ನೂ ಕಳೆದುಕೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿ ಇದೇ 13ರಂದು ಒಂದೇ ಹಂತದಲ್ಲಿ ವಿಧಾನಸಭೆ ಮತ್ತು ಸಂಸತ್ ಚುನಾವಣೆ ನಡೆದಿತ್ತು. ರಾಜ್ಯದಲ್ಲಿ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ, ತೆಲುಗು ದೇಶಂ, ಜನಸೇನಾ ಮತ್ತು ಬಿಜೆಪಿ ಮತ್ತೊಂದು ತಂಡವಾಗಿ ಹಾಗೂ ಕಾಂಗ್ರೆಸ್-ಕಮ್ಯುನಿಸ್ಟ್ ಪ್ರತ್ಯೇಕ ತಂಡವಾಗಿ ಸ್ಪರ್ಧಿಸಿದ್ದವು. ಇದರಿಂದಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.

ಆಂಧ್ರಪ್ರದೇಶದ ಒಟ್ಟು 175 ವಿಧಾನಸಭಾ ಕ್ಷೇತ್ರಗಳ ಪೈಕಿ 88 ಕ್ಷೇತ್ರಗಳನ್ನು ಗೆದ್ದ ಪಕ್ಷ ಸರ್ಕಾರ ರಚಿಸಲಿದೆ. ನಿನ್ನೆ ರಾಜ್ಯಾದ್ಯಂತ 33 ಸ್ಥಳಗಳಲ್ಲಿ 401 ಕೇಂದ್ರಗಳಲ್ಲಿ ಮತ ಎಣಿಕೆ ನಡೆಸಲಾಯಿತು. ಮತ ಎಣಿಕೆಯಲ್ಲಿ ತೆಲುಗು ದೇಶಂ ಪಕ್ಷ ಮೊದಲಿನಿಂದಲೂ ಮುನ್ನಡೆಯನ್ನು ಕಾಯ್ದುಕೊಂಡು ಬಂದಿದ್ದು, ಕೊನೆಯಲ್ಲಿ 134 ಸ್ಥಾನಗಳನ್ನು ಗೆದ್ದಿರುವುದಾಗಿ ಘೋಷಿಸಲಾಯಿತು. ಪಕ್ಷಕ್ಕೆ ಮೂರನೇ ಎರಡರಷ್ಟು ಶಾಸಕರ ಬೆಂಬಲ ಸಿಕ್ಕಿದೆ. ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ 21 ಸ್ಥಾನಗಳನ್ನು ಗೆದ್ದುಕೊಂಡಿದೆ.

ಬಿಜೆಪಿ 8 ಸ್ಥಾನಗಳನ್ನು ಪಡೆದುಕೊಂಡಿದೆ. ಈ ಮೂಲಕ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (NDA) 164 ಸ್ಥಾನಗಳನ್ನು ಗೆದ್ದುಕೊಂಡಿದೆ. ಜಗನ್ಮೋಹನ್ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಕೇವಲ 12 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಜಗನ್ ಅವರ ಪಕ್ಷಕ್ಕೆ ಪ್ರಮುಖ ಪ್ರತಿಪಕ್ಷ ಸ್ಥಾನಮಾನವೂ ಸಿಗಲಾರದು.

ವಿರೋಧ ಪಕ್ಷದ ನಾಯಕರಾಗಿ ಪವನ್ ಕಲ್ಯಾಣ್ ಆಯ್ಕೆಯಾಗುವ ಸಾಧ್ಯತೆ ಇದೆ. ಅದೇ ರೀತಿ ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳ ಪೈಕಿ ತೆಲುಗು ದೇಶಂ 16, ಜನಸೇನೆ 2, ಬಿಜೆಪಿ 3 ಮತ್ತು ವೈಎಸ್‌ಆರ್ ಕಾಂಗ್ರೆಸ್ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಂದೇ ಒಂದು ಸ್ಥಾನ ಸಿಗಲಿಲ್ಲ.

ಕಿಂಗ್ ಮೇಕರ್ ಚಂದ್ರಬಾಬು ನಾಯ್ಡು
ಲೋಕಸಭಾ ಚುನಾವಣಾ ಫಲಿತಾಂಶದ ಪ್ರಕಾರ, ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನೇತೃತ್ವದ ತೆಲುಗು ದೇಶಂ ಒಟ್ಟು 16 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿದೆ. ಹೀಗಾಗಿ ತೆಲುಗುದೇಶಂ ಪ್ರಭಾವ ಹೆಚ್ಚಿದೆ. ಬಿಜೆಪಿಗೆ ಬಹುಮತ ಸಿಗದ ಕಾರಣ ಹೊಸ ಸರ್ಕಾರ ರಚಿಸುವ ಟ್ರಂಪ್ ಕಾರ್ಡ್ ತೆಲುಗು ದೇಶಂ ಬಳಿ ಇದೆ ಎಂದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ. ಚಂದ್ರಬಾಬು ನಾಯ್ಡು ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದಾರೆ?

ಎನ್.ಡಿಎ ಮೈತ್ರಿಕೂಟ 293 ಕಡೆ ಗೆಲುವನ್ನು ಸಾಧಿಸಿ ಬಹುಮತ ಪಡೆದಿದ್ದರೂ ಬಿಜೆಪಿ ಪ್ರತ್ಯೇಕವಾಗಿ ಮ್ಯಾಜಿಕ್ ನಂಬರ್ 272 ಅನ್ನು ತಲುಪುವಲ್ಲಿ ವಿಪಲವಾಗಿದೆ. ಅದು ಬರೀ 240 ಸ್ಥಾನಗಳನ್ನು ಮಾತ್ರ ಪಡೆದು ಹಿನ್ನೆಡೆಯನ್ನು ಅನುಭವಿಸಿದೆ. ಇದು ರಾಷ್ಟ್ರಮಟ್ಟದಲ್ಲಿ ಟ್ರೆಂಡಿಂಗ್ ವಿಷಯವಾಗಿದೆ. ವಿಶ್ವಗುರು, ದೇವಮಾನವ, ನಂ.1 ಪ್ರಧಾನಿ ಎಂದೆಲ್ಲಾ ಹೇಳಿಕೊಂಡಿದ್ದ ಮೋದಿ 3ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಇಡಿಯಬೇಕಾದರೆ ಮೈತ್ರಿಪಕ್ಷಗಳ ಸಹಾಯ… ಸಹಮತ ಬೇಕು.

ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್, ನಿತೀಶ್ ಕುಮರ್ ಮುಂತಾದವರ ಬೆಂಬಲ ಪಡೆದು, ಸರ್ಕಾರ ರಚಿಸಿಕೊಂಡ ಮೇಲೆ ಆಪರೇಷನ್ ಕಮಲದ ಮೂಲಕ ಇದೇ ಪಕ್ಷಗಳನ್ನು ಕೆಡವಿ, ಬಿಜೆಪಿ ಬಹುಮತದೊಂದಿಗೆ 5 ವರ್ಷಗಳು ಅಧಿಕಾರ ನಡೆಸುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಇದಕ್ಕೆ ನಮ್ಮಲ್ಲಿ ಅನೇಕ ಉದಾಹರಣೆಗಳಿವೆ.        

ದೇಶ

ಜನಸೇನಾ ಪಕ್ಷದ ನಾಯಕ ನಟ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಏಲ್ಲೂರಿನಲ್ಲಿ ಪಾದಯಾತ್ರೆ ನಡೆಸಿದರು. ಅಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಆಂಧ್ರಪ್ರದೇಶದಲ್ಲಿ ಕಳೆದ 4 ವರ್ಷಗಳಲ್ಲಿ 30 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದಾರೆ. ಈ ಪೈಕಿ 12 ಸಾವಿರ ಮಹಿಳೆಯರನ್ನು ರಕ್ಷಿಸಲಾಗಿದೆ. ಉಳಿದ 18,000 ಮಹಿಳೆಯರ ಸ್ಥಿತಿ ತಿಳಿದುಬಂದಿಲ್ಲ.

ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಈ ಕುರಿತು ಅಧ್ಯಯನ ಸಭೆಯನ್ನು ಏಕೆ ನಡೆಸಲಿಲ್ಲ? ಮನೆಯಲ್ಲಿರುವ ಮಹಿಳೆಯರು ಪ್ರೀತಿಸುತ್ತಿದ್ದಾರೆಯೇ ಅಥವಾ ವಿಧವೆಯರೇ ಎಂಬ ವಿವರಗಳನ್ನು ಸಮಾಜ ವಿರೋಧಿಗಳ ಕೈಗೆ ನೀಡಲಾಗುತ್ತಿದೆ. ವಿವರಗಳನ್ನು ಸಂಗ್ರಹಿಸಿದ ನಂತರ, ಮಹಿಳೆಯರನ್ನು ಪ್ರೀತಿಯ ಬಲೆಯಲ್ಲಿ ಬೀಳುವಂತೆ ಮಾಡಿ, ಮಹಿಳೆಯರ ವಿರುದ್ಧ ಅಪಹರಣದಂತಹ ಕೃತ್ಯಗಳು ನಡೆಯುತ್ತಿವೆ” ಎಂದು ಆರೋಪಿಸಿದರು.

ಇದು ಆಂಧ್ರಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಪವನ್ ಕಲ್ಯಾಣ್ ಅವರ ಭಾಷಣಕ್ಕೆ ವಿವರಣೆ ಕೋರಿ ರಾಜ್ಯ ಮಹಿಳಾ ಆಯೋಗ ನೋಟಿಸ್ ಜಾರಿಗೊಳಿಸಿದೆ. ಇದರ ಬಗ್ಗೆ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ವಾಸಿ ರೆಡ್ಡಿ ಪದ್ಮಾ, “ಆಂಧ್ರಪ್ರದೇಶದಲ್ಲಿ 30,000 ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಹೇಳಿದ್ದಾರೆ. ಅವರಿಗೆ ಈ ಅಂಕಿಅಂಶಗಳನ್ನು ಕೊಟ್ಟವರು ಯಾರು? ಯಾವ ಕೇಂದ್ರ ಗುಪ್ತಚರ ಸಂಸ್ಥೆ ಅವರಿಗೆ ಹೇಳಿದೆ?

ನಟ ಪವನ್ ಕಲ್ಯಾಣ್ ಅವರಂಥವರು ಶಾಲಾ ಪ್ರೀತಿ, ಕಾಲೇಜು ಪ್ರೇಮ ಎಂದು ಸಿನಿಮಾಗಳಲ್ಲಿ ನಟಿಸುತ್ತಾರೆ. ಅದರಿಂದಲೇ ಸಾಂಸ್ಕೃತಿಕ ಅವನತಿ ಉಂಟಾಗುತ್ತದೆ. 18 ವರ್ಷದ ಹುಡುಗಿಯರು ನಾಪತ್ತೆಯಾಗಲು ಅವರಂತಹವರು ನಟಿಸಿದ ಸಿನಿಮಾಗಳೇ ಕಾರಣ. ಪವನ್ ಕಲ್ಯಾಣ್ ಅವರು ಮಾತನಾಡಿದ ಅಂಕಿಅಂಶಗಳಿಗೆ ಸಾಕ್ಷ್ಯ ಒದಗಿಸಬೇಕು. ಇಲ್ಲದಿದ್ದಲ್ಲಿ ಮಹಿಳೆಯರ ಕ್ಷಮೆ ಕೇಳಬೇಕು. ರಾಜಕೀಯ ಲಾಭಕ್ಕಾಗಿ ಮಹಿಳೆಯರಲ್ಲಿ ತಲ್ಲಣ ಮೂಡಿಸುವ ಮಾತುಗಳನ್ನಾಡಿದ್ದಾರೆ. 10 ದಿನಗಳೊಳಗೆ ಸಾಕ್ಷಿಯ ಒದಗಿಸಬೇಕು” ಎಂದು ಹೇಳಿದ್ದಾರೆ.

AP Women’s Commission seeks proof for Pawan Kalyan’s claims of human trafficking
The state Women’s Commission has asked Pawan Kalyan to furnish proof for his “panic-inducing” statement that women were being abducted in AP with the involvement of village volunteers and YSRCP leaders.