ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಕನ್ನಡ ಚಳವಳಿ Archives » Dynamic Leader
September 10, 2024
Home Posts tagged ಕನ್ನಡ ಚಳವಳಿ
ರಾಜ್ಯ

ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಜುಲೈ 14, 2023 ರಂದು ಭಾರತದ ಆಂಧ್ರಪ್ರದೇಶದ ಶ್ರೀಹರಿಕೋಟಾ ವ್ಯಾಪ್ತಿಯಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡು ಆಗಸ್ಟ್ 23, 2023 ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಯಶಸ್ವಿಯಾಗಿ ಇಳಿಯಿತು.

ಚಂದ್ರಯಾನ-3 ಯೋಜನೆಯಲ್ಲಿ ಪಾಲ್ಗೊಂಡಿದ್ದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಮೊನ್ನೆ ಪ್ರಧಾನಿ ನರೇಂದ್ರ ಮೊದಿಯವರು ಗ್ರೀಸ್ ದೇಶದಿಂದ ನೇರವಾಗಿ ಬೆಂಗಳೂರಿಗೆ ಬಂದಿದ್ದರು. ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿಗಳು, “ಆಗಸ್ಟ್‌ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು” ಎಂದು ಘೋಷಿಸಿದರು. ಮತ್ತು ಪ್ರಗ್ಯಾನ್ ಇಳಿದ ಸ್ಥಳವನ್ನು “ಶಿವಶಕ್ತಿ ಪಾಯಿಂಟ್” ಎಂದು ಕರೆಯಲಾಗುವುದು ಎಂದೂ ಘೋಶಿಸಿದರು.

ಈ ಹಿನ್ನಲೆಯಲ್ಲಿ ಕನ್ನಡ ಚಳವಳಿ ವಾಟಾಲ್ ಪಕ್ಷದ ಅಧ್ಯಕ್ಷ ವಾಟಾಲ್ ನಾಗರಾಜ್ ಅವರು, ‘ಕನ್ನಡ ಚಂದ್ರಯಾನ-3’ ಎಂದು ಮರು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ನೆನ್ನೆ ಮಧ್ಯಾಹ್ನ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಮಲಗಿ ಸತ್ಯಾಗ್ರಹ ನಡೆಸಿದರು.

“ಕರ್ನಾಟಕ, ಕನ್ನಡ, ಕನ್ನಡದ ನೆಲ, ಕನ್ನಡದ ಶಕ್ತಿ ಇವುಗಳಲ್ಲಿ ಚಂದ್ರಯಾನ-3ರಲ್ಲಿ ಕನ್ನಡ ಭಾಷೆ ಬರಲಿಲ್ಲ. ಎಲ್ಲಾದರೂ ಒಂದು ಕಡೆ ಕನ್ನಡ ಪದ ಬರಬೇಕಾಗಿತ್ತು. ಕನ್ನಡದ ಹೆಸರು ಇಟ್ಟಿದ್ದರೆ ಇಡೀ ಭಾರತಕ್ಕೆ ಗೌರವ ಬರುತ್ತಿತ್ತು. ಕರ್ನಾಟಕ ‘ಭಾರತ ಜನನಿಯ ತನುಜಾತೆ’ ಸಂಸ್ಕೃತ ಸ್ಲೋಕ ಹೇಳಿ ಶಿವಶಕ್ತಿ ಹೆಸರನಿಟ್ಟ ಪ್ರಧಾನಿಯವರು ಕನ್ನಡ ಶಕ್ತಿ, ಕನ್ನಡ ನಾಡು, ಕನ್ನಡ ಭೂಮಿ, ಜ್ಞಾಪಕಕ್ಕೆ ಬರಲಿಲ್ಲ.

ಇಸ್ರೋ ಇರುವುದು ಕನ್ನಡ ನಾಡಿನಲ್ಲಿ; ಕನ್ನಡ ಭೂಮಿಯಲ್ಲಿ. ಶಿವಶಕ್ತಿ ಇಟ್ಟಿದ್ದೂ ಆಯಿತು. ತಿರಂಗ ಇಟ್ಟಿದ್ದೂ ಆಯಿತು. “ಕನ್ನಡ ಚಂದ್ರಯಾನ-3” ಎಂದು ಹೆಸರಿಡಬೇಕಾಗಿತ್ತು. ಚಂದ್ರಯಾನ ಇಸ್ರೋ ಪ್ರತಿಷ್ಠೆಯ ಹೆಗ್ಗಳಿಕೆ. ಪ್ರಧಾನ ಮಂತ್ರಿಯವರು ಬಂದಾಗಲೆಲ್ಲಾ ತಪ್ಪು ತಪ್ಪಾದರೂ ಕನ್ನಡದಲ್ಲಿ ಮಾತನಾಡುತ್ತಿದ್ದರು. ಈ ದಿನ ಅವರಿಗೆ ಕನ್ನಡ ಕಾಣಲಿಲ್ಲ. ಕರ್ನಾಟಕವೂ ಕಾಣಲಿಲ್ಲ. ಇಸ್ರೋ ಇರುವುದು ಕರ್ನಾಟಕದಲ್ಲಿ ಎಂದು ಅವರು ಭಾವಿಸಲಿಲ್ಲ.

ರಾಷ್ಟ್ರಕವಿ ಕುವೆಂಪುರವರು ಕರ್ನಾಟಕವನ್ನು ಕರ್ನಾಟಕದ ಮಾತೆ ಎಂದು ಕರೆದಿದ್ದಾರೆ. ಕರ್ನಾಟಕದ ಜನತೆಗೆ ಗೌರವ ಕೊಟ್ಟು ಚಂದ್ರಯಾನಕ್ಕೆ ಕನ್ನಡದ ಹೆಸರನ್ನು ನಾಮಕರಣ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.