ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Dynamic Leader, Author at Dynamic Leader » Page 2 of 143
December 13, 2024
Home Articles posted by Dynamic Leader (Page 2)
ರಾಜಕೀಯ

ಚೆನ್ನೈ: ಪೆರಿಯಾರ್ ಪ್ರತಿಮೆಯನ್ನು ಒಡೆಯುವುದಾಗಿ ಮತ್ತು ಡಿಎಂಕೆ ಸಂಸದೆ ಕನಿಮೊಳಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿ ಮಾಡಿದ ಪ್ರಕರಣಗಳ ಅಡಿಯಲ್ಲಿ ತಮಿಳುನಾಡಿನ ಬಿಜೆಪಿಯ ಹಿರಿಯ ನಾಯಕ ಹೆಚ್.ರಾಜಾ ಅವರಿಗೆ 6 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾ ಶಿಕ್ಷೆಯನ್ನು ಅಮಾನತ್ತಿನಲ್ಲಿ ಇಡಲಾಗಿದೆ.

ತಮಿಳುನಾಡು ಬಿಜೆಪಿ ಸಮನ್ವಯ ಸಮಿತಿ ಅಧ್ಯಕ್ಷ ಹೆಚ್.ರಾಜಾ ಅವರು ಕಳೆದ 2018ರಲ್ಲಿ ತಮ್ಮ ಎಕ್ಸ್ ಸೈಟ್ (ಅಂದಿನ ಟ್ವಿಟ್ಟರ್) ಪುಟದಲ್ಲಿ ಪೆರಿಯಾರ್ ಪ್ರತಿಮೆಯನ್ನು ಒಡೆಯುವುದಾಗಿ ಪೋಸ್ಟ್ ಮಾಡಿದ್ದರು. ಮತ್ತು ಡಿಎಂಕೆ ಸಂಸದೆ ಕನಿಮೊಳಿ ವಿರುದ್ಧ ಮಾನಹಾನಿಕರ ಪೋಸ್ಟ್ ಗಳನ್ನು ಹಾಕಿದ್ದರು. ಇದರ ವಿರುದ್ಧ ಡಿಎಂಕೆ, ಕಾಂಗ್ರೆಸ್ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪರವಾಗಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಯಿತು. ಇದರಲ್ಲಿ ಈರೋಡ್ ನಗರ ಪೊಲೀಸರು, ಕರುಂಗಲ್ಪಾಳ್ಯಂ ಪೊಲೀಸ್ ಠಾಣೆಗೆ ನೀಡಿದ್ದ ದೂರಿನ ಮೇರೆಗೆ ಹೆಚ್.ರಾಜಾ ವಿರುದ್ಧ ಪ್ರಕರಣ ದಾಖಲಿಸಲಾಯಿತು.

ಈ ಪ್ರಕರಣವನ್ನು ರದ್ದುಗೊಳಿಸುವಂತೆ ಹೆಚ್.ರಾಜಾ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ, ಈ ಎರಡು ಪ್ರಕರಣಗಳ ತನಿಖೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸಂಸದರು, ಶಾಸಕರುಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಕ್ಕೆ ಆದೇಶಿಸಿತು.

ಬಳಿಕ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಜಯವೇಲ್ ಅವರ ಮುಂದೆ ಈ ಸಂಬಂಧ ವಿಚಾರಣೆ ನಡೆಯಿತು. ಇದರಲ್ಲಿ ಪೆರಿಯಾರ್ ಪ್ರತಿಮೆಯನ್ನು ಒಡೆಯಬೇಕು ಎಂಬುದಕ್ಕೆ ಯಾವುದೇ ಪುರಾವೆಗಳನ್ನು ಸಂಗ್ರಹಿಸಲಾಗಿಲ್ಲ ಮತ್ತು ಡಿಎಂಕೆ ಸಂಸದೆ ಕನಿಮೊಳಿ ಅವರ ಮೇಲಿನ ಹೇಳಿಕೆ ರಾಜಕೀಯ ಕಾಮೆಂಟ್ ಆಗಿದ್ದು, ಅದರಲ್ಲಿ ಕನಿಮೊಳಿಯವರು ಯಾವುದೇ ದೂರನ್ನು ನೀಡದಿದ್ದರೂ ಮೂರನೇ ವ್ಯಕ್ತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುವುದರಿಂದ ಈ ಪ್ರಕರಣದಿಂದ ಬಿಡುಗಡೆ ಮಾಡಬೇಕು ಎಂದು ಹೆಚ್.ರಾಜಾ ಅವರ ಕಡೆಯಿಂದ ವಾದಿಸಿಸಲಾಯಿತು.

ಎಲ್ಲಾ ವಾದಗಳನ್ನು ದಾಖಲಿಸಿಕೊಂಡ ನ್ಯಾಯಾಧೀಶರು ಇಂದು (ಡಿ 2) ಎರಡೂ ಪ್ರಕರಣಗಳಲ್ಲಿ ತೀರ್ಪನ್ನು ನೀಡಿದರು. ಅದರಂತೆ “ಪೊಲೀಸರ ಕಡೆಯಿಂದ ಹೆಚ್.ರಾಜಾ ಅವರು ಅಪರಾಧ ಎಸಗಿರುವುದು ಸಾಬೀತಾಗಿದೆ. ಈ ಎರಡೂ ಪೋಸ್ಟ್‌ಗಳನ್ನು ಹೆಚ್.ರಾಜಾ ಅವರ ಸಾಮಾಜಿಕ ಮಾಧ್ಯಮ ಪುಟದಿಂದ ಪ್ರಕಟಿಸಲಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿದೆ”  ಎಂದು ನ್ಯಾಯಾಧೀಶ ಜಿ.ಜಯವೇಲ್ ಹೇಳಿದ್ದಾರೆ. ಅಲ್ಲದೆ, ಹೆಚ್.ರಾಜಾಗೆ 6 ತಿಂಗಳ ಜೈಲು ಶಿಕ್ಷೆ ಮತ್ತು ಎರಡೂ ಪ್ರಕರಣಗಳಲ್ಲಿ ರೂ.5000 ದಂಡ ವಿಧಿಸಿ ಆದೇಶಿಸಲಾಗಿದೆ.

ಇದರ ಬೆನ್ನಲ್ಲೇ ಹೆಚ್.ರಾಜಾ ಕಡೆಯಿಂದ ತಾವು ಮೇಲ್ಮನವಿ ಸಲ್ಲಿಸಲಿದ್ದು ಸಮಯಾವಕಾಶ ನೀಡಬೇಕೆಂದು ನ್ಯಾಯಾಧೀಶರನ್ನು ಕೇಳಲಾಯಿತು. ಈ ಮನವಿಯನ್ನು ಸ್ವೀಕರಿಸಿದ ನ್ಯಾಯಾಧೀಶರು ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿದರು. ಅಲ್ಲದೆ, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಆದಾಗ್ಯೂ, ದಂಡವನ್ನು ತಕ್ಷಣವೇ ಪಾವತಿಸಲಾಯಿತು. ಈ ಒಂದು ತಿಂಗಳ ಅವಧಿಯಲ್ಲಿ ಯಾವುದೇ ಮೇಲ್ಮನವಿ ಸಲ್ಲಿಸದಿದ್ದರೆ ಶಿಕ್ಷೆ ಜಾರಿಯಾಗುತ್ತದೆ ಎಂಬುದು ಗಮನಾರ್ಹ.

ರಾಜಕೀಯ

ನವದೆಹಲಿ: ಚುನಾವಣಾ ಆಯೋಗವು ಡಿಸೆಂಬರ್ 3 ರಂದು ಮಹಾರಾಷ್ಟ್ರ ಚುನಾವಣೆ ಫಲಿತಾಂಶದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಪಕ್ಷದ ತಂಡವನ್ನು ಆಹ್ವಾನಿಸಿದೆ.

ಬಿಜೆಪಿ ನೇತೃತ್ವದ ಮಹಾಯುತಿಯ ಭಾರಿ ಗೆಲುವಿಗೆ ಕಾರಣವಾದ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶಗಳಲ್ಲಿ ‘ಗಂಭೀರ ಅಸಂಗತತೆ’ ಉಂಟಾಗಿದೆ ಎಂದು ಕಾಂಗ್ರೆಸ್ ಪಕ್ಷವು ವಿವರಿಸಿರುವ ಬಗ್ಗೆ ಕಳವಳವನ್ನು ಪರಿಹರಿಸಲು ಚುನಾವಣಾ ಆಯೋಗವು ಡಿಸೆಂಬರ್ 3 ರಂದು ಕಾಂಗ್ರೆಸ್ ನಿಯೋಗವನ್ನು ಆಹ್ವಾನಿಸಿದೆ.

ಮತ ಎಣಿಕೆ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಅನುಸರಿಸಿದ ಎಲ್ಲಾ ಚುನಾವಣಾ ಕಾರ್ಯವಿಧಾನಗಳು ಪಾರದರ್ಶಕವಾಗಿವೆ ಎಂದು ಚುನಾವಣಾ ಆಯೋಗವು ಕಾಂಗ್ರೆಸ್‌ಗೆ ತಿಳಿಸಿದೆ ಮತ್ತು ಪಕ್ಷದ ಎಲ್ಲಾ ಕಾನೂನುಬದ್ಧ ಕಾಳಜಿಗಳನ್ನು ಪರಿಶೀಲಿಸುವುದಾಗಿ ಮತ್ತು ಪಕ್ಷಕ್ಕೆ ಲಿಖಿತ ಪ್ರತಿಕ್ರಿಯೆಯನ್ನು ನೀಡುವುದಾಗಿ ಭರವಸೆ ನೀಡಿದೆ.

ಮತದಾರರ ಮತದಾನದ ದತ್ತಾಂಶಕ್ಕೆ ಸಂಬಂಧಿಸಿದ ಸಮಸ್ಯೆಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, ಅದರಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಪ್ರತಿಪಾದಿಸಿದೆ ಮತ್ತು ಎಲ್ಲಾ ಅಭ್ಯರ್ಥಿಗಳ ಮತಗಟ್ಟೆವಾರು ಡೇಟಾ ಲಭ್ಯವಿದ್ದು ಅದನ್ನು ಪರಿಶೀಲಿಸಬಹುದಾಗಿದೆ ಎಂದೂ ಹೇಳಿದೆ.

ಸಂಜೆ 5 ಗಂಟೆಯ ಮತದಾನದ ದತ್ತಾಂಶ ಮತ್ತು ಅಂತಿಮ ಮತದಾನದ ಪ್ರಮಾಣವು ಕಾರ್ಯವಿಧಾನದ ಆದ್ಯತೆಗಳ ಕಾರಣದಿಂದಾಗಿರುತ್ತದೆ. ಏಕೆಂದರೆ, ಮತದಾನದ ಮುಕ್ತಾಯದ ಸಮೀಪದಲ್ಲಿ ಚುನಾವಣಾಧಿಕಾರಿಗಳು ಮತದಾರರ ಮತದಾನದ ಡೇಟಾವನ್ನು ನವೀಕರಿಸುವ ಮೊದಲು ಅನೇಕ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಹೆಚ್ಚುವರಿ ಬಹಿರಂಗಪಡಿಸುವಿಕೆಯ ಕ್ರಮವಾಗಿ, 2024ರ ಲೋಕಸಭೆ ಚುನಾವಣೆಯಲ್ಲಿ ರಾತ್ರಿ 11:45ರ ಸುಮಾರಿಗೆ ಚುನಾವಣಾ ಆಯೋಗವು ಪತ್ರಿಕಾ ಟಿಪ್ಪಣಿಯನ್ನು ಪರಿಚಯಿಸಿತು ಮತ್ತು ನಂತರದ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಅದನ್ನೇ ಅನುಸರಿಸಲಾಯಿತು ಎಂದು ಚುನಾವಣಾ ಆಯೋಗ ಕಾಂಗ್ರೆಸ್‌ಗೆ ತಿಳಿಸಿದೆ.

ಶುಕ್ರವಾರ, ಕಾಂಗ್ರೆಸ್ ಮಹಾರಾಷ್ಟ್ರ ಚುನಾವಣೆಯ ಮತದಾನ ಮತ್ತು ಎಣಿಕೆ ಪ್ರಕ್ರಿಯೆಗಳಿಗೆ ಸಂಬಂಧಿಸಿದ ದತ್ತಾಂಶಗಳಲ್ಲಿ “ತೀವ್ರವಾದ ಮತ್ತು ಗಂಭೀರವಾದ ವ್ಯತ್ಯಾಸಗಳನ್ನು” ಚುನಾವಣಾ ಆಯೋಗದೊಂದಿಗೆ ಪ್ರಸ್ತಾಪಿಸಿತು ಮತ್ತು ಸಂಬಂಧಿತ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಲು ವೈಯಕ್ತಿಕ ವಿಚಾರಣೆಯನ್ನು ಕೋರಿತು.

ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ (MVA) ನವೆಂಬರ್ 20ರ ಚುನಾವಣೆಯಲ್ಲಿ 288 ಅಸೆಂಬ್ಲಿ ಸ್ಥಾನಗಳಲ್ಲಿ 46 ಸ್ಥಾನಗಳನ್ನು ಮಾತ್ರ ನಿರ್ವಹಿಸುವ ಮೂಲಕ ಪರಾಜಯಗೊಂಡಿತು. ಕಾಂಗ್ರೆಸ್ 16, ಶಿವಸೇನೆ (ಯುಬಿಟಿ) 20 ಮತ್ತು ಶರದ್ ಪವಾರ್ ಅವರ ಎನ್‌ಸಿಪಿ 10 ಗಳಿಸಿತು. ಬಿಜೆಪಿ ನೇತೃತ್ವದ ಮಹಾಯುತಿ 230 ಸ್ಥಾನಗಳನ್ನು ಗಳಿಸಿತು, ಬಿಜೆಪಿ ದಾಖಲೆಯ 132 ಸ್ಥಾನಗಳನ್ನು ಗಳಿಸಿತು, ನಂತರ ಶಿವಸೇನೆ 57 ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ. 41 ಸ್ಥಾನಗಳನ್ನು ಗಳಿಸಿತು.

ಮಹಾರಾಷ್ಟ್ರದಲ್ಲಿ ಇವಿಎಂಗಳನ್ನು ಸಜ್ಜುಗೊಳಿಸಲಾಗಿತ್ತು ಎಂದು ಆರೋಪಿಸಿರುವ ಕಾಂಗ್ರೆಸ್, ಪೇಪರ್ ಬ್ಯಾಲೆಟ್‌ಗಳಿಗೆ ಹಿಂದಿರುಗುವಂತೆ ಒತ್ತಾಯಿಸಿದೆ. ಶುಕ್ರವಾರ ನಡೆದ CWC ಸಭೆಯಲ್ಲಿ ಕೂಡ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಅದನ್ನೇ ಪುನರಾವರ್ತಿಸಿದರು.

ಕಾಂಗ್ರೆಸ್‌ನ ಆರೋಪಗಳನ್ನು ಚುನಾವಣಾ ಆಯೋಗ ನಿರಂತರವಾಗಿ ತಳ್ಳಿಹಾಕಿದೆ. ಮತ್ತು ಇವಿಎಂಗಳ ಬಳಕೆಯನ್ನು ಸಮರ್ಥಿಸಿಕೊಂಡಿದೆ. EVM ಗಳು ಸುರಕ್ಷಿತವಾಗಿವೆ ಎಂದು ಚುನಾವಣಾ ಆಯೋಗ ಹೇಳಿದೆ. VVPAT (ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್) ಸೇರಿದಂತೆ ಹಲವು ಪದರಗಳ ಪರಿಶೀಲನೆ ಮತ್ತು ಟ್ಯಾಂಪರ್-ಪ್ರೂಫ್ ಕಾರ್ಯವಿಧಾನಗಳು ಜಾರಿಯಲ್ಲಿವೆ. ಇದು ರಾಜಕೀಯ ಪಕ್ಷಗಳಿಗೆ ಚುನಾವಣೆಗೆ ಮುನ್ನ ಯಂತ್ರಗಳನ್ನು ಪರೀಕ್ಷಿಸಲು ಮತ್ತು ಪರಿಶೀಲಿಸಲು ಅವಕಾಶ ನೀಡುತ್ತದೆ.

ರಾಜಕೀಯ

ನವದೆಹಲಿ: ರಾಜ್ಯದ ರೈತರಿಗೆ ನೀಡಬೇಕಾಗಿದ್ದ ನಬಾರ್ಡ್ ಹಣದಲ್ಲಿ ಶೇ.58 ರಷ್ಟು ಕೇಂದ್ರ ಸರ್ಕಾರ ಕಡಿತಗೊಳಿಸಿರುವುದರಿಂದ ರೈತರು ಅಧಿಕ ಬಡ್ಡಿಗೆ ಸಾಲ ಕೊಡುವ ಲೇವಾದೇವಿದಾರರ ಸುಳಿಗೆ ಸಿಲುಕಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು “ರೈತರಿಗೆ ನೀಡುತ್ತಿದ್ದ ಸಬ್ಸಡಿ ಸಾಲ ಕಡಿತಗೊಳಿಸಿದ್ದರಿಂದ ರಾಜ್ಯದಲ್ಲಿ ಮತ್ತು ದೇಶದಲ್ಲಿ ಆಹಾರ ಉತ್ಪಾದನೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ನಬಾರ್ಡ್ ಸಾಲದ ಪ್ರಮಾಣ ಇಡೀ ದೇಶಕ್ಕೆ ಕಡಿಮೆ ಮಾಡಿದ್ದರೆ ದೇಶದ ರೈತರನ್ನು ಸಂಕಷ್ಟಕ್ಕೆ ದೂಡಿದಂತಾಗಲಿದೆ. ಇಡೀ ದೇಶದ ಕೃಷಿ ಉತ್ಪಾದನೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ” ಎಂದು ಹೇಳಿದ್ದಾರೆ.

“ನಬಾರ್ಡ್ 4.5% ಬಡ್ಡಿಗೆ ರೈತರಿಗೆ ಸಾಲದ ಹಣ ನೀಡುತ್ತಿತ್ತು. ನಾವು ರೈತರಿಗೆ ಬಡ್ಡಿ ರಹಿತವಾಗಿ ಸಾಲ ನೀಡಿ ಈ 4.5% ಬಡ್ಡಿಯನ್ನು ಸರ್ಕಾರವೇ ಭರಿಸುತ್ತಿತ್ತು. ಈಗ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ ಗಳಿಂದ ಸಾಲ ಪಡೆಯುವಂತೆ ಕೇಂದ್ರ ಸರ್ಕಾರ ಹೇಳುತ್ತಿದೆ. ಶೇ10 ಬಡ್ಡಿ ದರದಲ್ಲಿ ವಾಣಿಜ್ಯ ಬ್ಯಾಂಕ್ ಗಳು ಸಾಲ ನೀಡುತ್ತವೆ. ಇದರಿಂದ ಬ್ಯಾಂಕ್ ಗಳಿಗೆ ಲಾಭ ಆಗುತ್ತದೆಯೇ ಹೊರತು ರೈತರಿಗೆ ಅನುಕೂಲ ಇಲ್ಲ” ಎಂದು ಹೇಳಿದ್ದಾರೆ.

“15ನೇ ಹಣಕಾಸು ಆಯೋಗದಲ್ಲೂ ರಾಜ್ಯಕ್ಕೆ ಅನ್ಯಾಯ ಆಯಿತು. ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,000 ಕೋಟಿ ಘೋಷಿಸಿ ಒಂದು ಪೈಸೆಯನ್ನೂ ಕೊಡಲಿಲ್ಲ. ಫೆರಿಫೆರಲ್ ರಿಂಗ್ ರಸ್ತೆಗೂ ಕೊಡಲಿಲ್ಲ. ಇವೆಲ್ಲದರಿಂದ ರೂ.11,000 ಕೋಟಿ ರೂ ರಾಜ್ಯಕ್ಕೆ ನಷ್ಟವಾಗಿದ್ದನ್ನೂ ಪ್ರಧಾನಮಂತ್ರಿಯವರಿಗೆ ನೆನಪಿಸಿದ್ದೇವೆ. ಹೀಗಾಗಿ ಈ ಬಾರಿ ಮತ್ತೆ ನಬಾರ್ಡ್ ಮೂಲಕ ಆಗಿರುವ ಅನ್ಯಾಯವನ್ನು ಸರಿಪಡಿಸಲು ಮನವಿ ಮಾಡಿದ್ದೇವೆ” ಎಂದಿದ್ದಾರೆ.

“ರಾಜ್ಯಕ್ಕೆ ನಿರಂತರ ಅನ್ಯಾಯ ಆಗುತ್ತಿದೆ. ಮಹದಾಯಿ, ಮೇಕೆದಾಟುಗೆ ಅನುಮತಿ ನೀಡುತ್ತಿಲ್ಲ. ಇಷ್ಟಾದರೂ ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರು ಬಾಯಿ ಬಿಡುತ್ತಿಲ್ಲ. ಮಣ್ಣಿನ ಮಗ ಅಂದುಕೊಂಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ? ರಾಜ್ಯಸಭಾ ಸದಸ್ಯರಾದ ಮಾಜಿ ಪ್ರಧಾನಿ ದೇವೇಗೌಡರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಬಾಯಿ ಬಿಡುತ್ತಿಲ್ಲ ಏಕೆ?” ಎಂದು ಕಿಡಿಕಾರಿದ್ದಾರೆ.

ದೇಶ

“ಅಲ್ಪಸಂಖ್ಯಾತರಾದ 3 ಪರ್ಸೆಂಟ್ ಬ್ರಾಹ್ಮಣರಿಗೆ ಈಗಾಗಲೇ “ಮನುಸ್ಮೃತಿ’ ಎಂಬ ಧರ್ಮ ಸಂವಿಧಾವಿದೆ; ಅದನ್ನು ಇಂಪ್ಲಿಮೆಂಟ್ ಮಾಡಕ್ಕೆ ನಿಮ್ಮದೇ ಆದ ಸಂಘ-ಸರ್ಕಾರವಿದೆ. ಮತ್ತೊಂದು ಸಂವಿಧಾನ ನಿಮಗೆ ಏಕೆ ಬೇಕು? ಮೊದಲು ಅದನ್ನು ತ್ಯಜಿಸಿ ಸಹ ಮನುಷ್ಯರಾಗಿ” – ಡಿ.ಸಿ.ಪ್ರಕಾಶ್

ಭಾರತ ಸಂವಿಧಾನದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಸಂವಿಧಾನವನ್ನು ತಿರುಚುವ ಕಾರ್ಯಗಳು ಒಂದೆಡೆ  ನಡೆಯುತ್ತಲೇ ಇವೆ. ಈಗ ಬಿಜೆಪಿಯಲ್ಲಿರುವ ಸುಬ್ರಮಣಿಯನ್ ಸ್ವಾಮಿ, ವಕೀಲ ಅಶ್ವಿನಿ ಉಪಾಧ್ಯಾಯ, ವಿಷ್ಣು ಶಂಕರ್ ಜೈನ್ ಮತ್ತು ಬಲರಾಮ್ ಸಿಂಗ್ ಅವರು ಭಾರತದ ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು. ಇದನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಪಿ.ವಿ.ಸಂಜಯ್ ಕುಮಾರ್ ಪೀಠವು ಇದೇ ನವಂಬರ್ 25 ರಂದು “ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತು ತನ್ನ ಅಧಿಕಾರವನ್ನು ಸರಿಯಾಗಿ ಚಲಾಯಿಸಿದೆ” ಎಂದು ದೃಢಪಡಿಸಿದೆ. ಇದಕ್ಕಿಂತ ದೊಡ್ಡ ಪೀಠಕ್ಕೆ ತೆಗೆದುಕೊಂಡು ಹೋಗಿ ಚರ್ಚೆಯನ್ನು ಎಳೆಯಲು ಜಾತ್ಯತೀತ ವಿರೋಧಿಗಳು ಬಯಸಿದ್ದರು. ಆದರೆ, ಸುಪ್ರೀಂ ಕೋರ್ಟ್ ಅದಕ್ಕೆ ಅವಕಾಶ ನೀಡಲಿಲ್ಲ. ಈ ಅರ್ಜಿಗಳನ್ನು ಆರಂಭಿಕ ಹಂತದಲ್ಲೇ ವಜಾಗೊಳಿಸಿತು.

ಭಾರತದ ಸಂವಿಧಾನವು ಭಾರತ ದೇಶವನ್ನು ‘ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯ’ ಎಂದು ವ್ಯಾಖ್ಯಾನಿಸುತ್ತದೆ.

ಸಂವಿಧಾನದ 42ನೇ ತಿದ್ದುಪಡಿಯು ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಸೇರಿಸಿದೆ. ಇದನ್ನು ತೆಗೆಯಬೇಕು ಎಂಬುದು ಅವರು ವಾದ. ಸಂವಿಧಾನವನ್ನು 100ಕ್ಕೂ ಹೆಚ್ಚು ಬಾರಿ ತಿದ್ದುಪಡಿ ಮಾಡಲಾಗಿದೆ ಅದೆಲ್ಲವನ್ನೂ ತೆಗೆದುಹಾಕಲು ಅವರು ಹೇಳುತ್ತಾರೆಯೇ?

“ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಪಾಶ್ಚಾತ್ಯ ಪರಿಕಲ್ಪನೆಗಳಾಗಿ ಪರಿಗಣಿಸಬೇಕಾಗಿಲ್ಲ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಜಾತ್ಯತೀತ ಎನ್ನುವುದು ಪಾಶ್ಚಿಮಾತ್ಯ ಪರಿಕಲ್ಪನೆ ಎಂದು ಇಲ್ಲಿರುವವರು ಹೇಳುತ್ತಾ ತಿರುಗುತ್ತಿದ್ದಾರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅದನ್ನು ಸೇರಿಸಲಾಗಿತ್ತು ಎಂಬ ವಾದವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.

“ದಿನಾಂಕ: 2-11-1976 ರಂದು ಸಂಸತ್ತು ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ಸೇರಿಸಿತ್ತು. ಅದರ ನಂತರ ಜನತಾ ಸರ್ಕಾರ ಬಂದಿತು. ಜನತಾ ಸರ್ಕಾರ ಇದನ್ನು ಸಂಸತ್ತಿನಲ್ಲೇ ಒಪ್ಪಿಕೊಂಡಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆ ಜನತಾ ಪಕ್ಷದಲ್ಲಿ ಸುಬ್ರಮಣಿಯನ್ ಸ್ವಾಮಿ ಕೂಡ ಇದ್ದರು.

“ಭಾರತದ ಸಂವಿಧಾನದ 368ನೇ ವಿಧಿಯು ನಂತರದ ದಿನಾಂಕದಿಂದ ಜಾರಿಗೆ ಬರುವಂತೆ ಸಂವಿಧಾನದ ಯಾವುದೇ ವಿಭಾಗವನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರ ನೀಡುವುದರಿಂದ, ಇದು ಪೀಠಿಕೆಯ ತಿದ್ದುಪಡಿಗೂ ಅನ್ವಯಿಸುತ್ತದೆ” ಎಂದು ತೀರ್ಪು ಹೇಳಿದೆ.

“ಭಾರತದಲ್ಲಿ ‘ಸಮಾಜವಾದ’ ಎಂದರೆ ಸಮಾನತೆಯ ಸರ್ಕಾರವನ್ನೇ ಸೂಚಿಸುತ್ತದೆ ಮತ್ತು ಅದು ಎಲ್ಲರಿಗೂ ಸಮಾನ ಅವಕಾಶವನ್ನು ಒದಗಿಸುವ ಕಲ್ಯಾಣ ರಾಜ್ಯವನ್ನೂ ಸೂಚಿಸುತ್ತದೆ. ಇದು ‘ನಿರಂಕುಶ’ ಸಿದ್ಧಾಂತವಲ್ಲ” ಎಂಬುದನ್ನೂ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. “ಸಮಾಜವಾದ ಎಂಬ ಪದವು ಇಲ್ಲಿ ಖಾಸಗಿ ವಲಯದ ಅಭಿವೃದ್ಧಿಯನ್ನು ಎಂದಿಗೂ ನಿಲ್ಲಿಸಲಿಲ್ಲ; ಖಾಸಗಿಯವರಿಂದಲೂ ನಮಗೆಲ್ಲ ಲಾಭವಾಗಿದೆ” ಎಂದು ನ್ಯಾಯಮೂರ್ತಿಗಳು ವಿವರಿಸಿದ್ದಾರೆ.

ಈ ತೀರ್ಪಿನ ಮುಖ್ಯ ಅಂಶವೆಂದರೆ ಸಮಾಜವಾದ ಮತ್ತು ಜಾತ್ಯತೀತ ಪದಗಳು ಕೇವಲ ಪೀಠಿಕೆಯಲ್ಲಿ ಮಾತ್ರವಲ್ಲದೆ ಸಂವಿಧಾನದ ವಿವಿಧ ಭಾಗಗಳಲ್ಲಿಯೂ ಇವೆ ಎಂದು ಹೇಳಿರುವುದು.

“ಸಂವಿಧಾನದ ಪೀಠಿಕೆಯಲ್ಲಿ ಸಮಾನತೆ, ಭ್ರಾತೃತ್ವ, ಸ್ವಾತಂತ್ರ್ಯ ಮತ್ತು ನ್ಯಾಯ ಎಂಬ ಪದಗಳು ಜಾತ್ಯತೀತತೆಯನ್ನೇ ಅರ್ಥೈಸುತ್ತವೆ” ಎಂದು ಕಡ್ಡಿ ಮುರಿದಂತೆ ಸುಪ್ರೀಂ ಕೋರ್ಟ್ ತಮ್ಮ ತೀರ್ಪಿನಲ್ಲಿ ಹೇಳಿದೆ.

“ಪ್ರತಿಯೊಬ್ಬ ಪ್ರಜೆಯೂ ತನ್ನ ಇಚ್ಛೆಯ ಧರ್ಮವನ್ನು ಪ್ರತಿಪಾದಿಸುವ ಮತ್ತು ಪ್ರಚಾರ ಮಾಡುವ ಮೂಲಭೂತ ಹಕ್ಕನ್ನು ಹೊಂದಿದ್ದಾನೆ ಎಂದು ಹೇಳುವ ಸಂವಿಧಾನದ 25ನೇ ವಿಧಿಯ ಅರ್ಥವೂ ಕೂಡ ಜಾತ್ಯತೀತತೆ ಎಂಬುದೇ ಅಗಿದೆ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. “ನಾವು ಸಂವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜಾತ್ಯತೀತತೆಯ ಮುಖ್ಯ ಪರಿಕಲ್ಪನೆಯು ಅನೇಕ ಸ್ಥಳಗಳಲ್ಲಿ ಕಂಡುಬರುತ್ತದೆ” ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಹೇಳಿದ್ದಾರೆ.

“ಸಮಾಜವಾದ ಮತ್ತು ಜಾತ್ಯತೀತ ಇವೆರಡೂ ಪೀಠಿಕೆಯಲ್ಲಿ ಮಾತ್ರವಲ್ಲದೆ ಭಾರತೀಯ ಸಂವಿಧಾನದ ಮುಖ್ಯ ತತ್ವಗಳಾಗಿವೆ” ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ಒಪ್ಪಿಕೊಂಡು ಕಾರ್ಯನಿರ್ವಹಿಸಬೇಕು. ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು ಪ್ರಕರಣವನ್ನು ಮಾತ್ರವಲ್ಲ; ಧಾರ್ಮಿಕ ಪಕ್ಷಪಾತ ಎಂಬ ಪರಿಕಲ್ಪನೆಯನ್ನು ಕೂಡ.

ಮೇಲ್ಕಂಡ ಸುಪ್ರೀಂ ಕೋರ್ಟ್ ತೀರ್ಪನ್ನು ಅರಗಿಸಿಕೊಳ್ಳಲಾಗದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು, “ನಮ್ಮನ್ನು (ಬ್ರಾಹ್ಮಣರನ್ನು) ಗೌರವಿಸುವ ಸಂವಿದಾನ ಬರಬೇಕು” ಎಂದು ಹೇಳಿದ್ದೂ ಅಲ್ಲದೇ ರಾಜ್ಯಪಾಲರನ್ನು ಭೇಟಿಯಾಗಿ ಮನವಿಯನ್ನೂ ಸಲ್ಲಿಸಿದ್ದಾರೆ. ಅಲ್ಪಸಂಖ್ಯಾತರಾದ 3 ಪರ್ಸೆಂಟ್ ಬ್ರಾಹ್ಮಣರಿಗೆ ಈಗಾಗಲೇ “ಮನುಸ್ಮೃತಿ’ ಎಂಬ ಸಂವಿಧಾವಿದೆ; ಅದನ್ನು ಇಂಪ್ಲಿಮೆಂಟ್ ಮಾಡಕ್ಕೆ ನಿಮ್ಮದೇ ಆದ ಸಂಘ-ಸರ್ಕಾರವಿದೆ. ಮತ್ತೊಂದು ಸಂವಿಧಾನ ನಿಮಗೆ ಏಕೆ ಬೇಕು? ಮೊದಲು ಅದನ್ನು ತ್ಯಜಿಸಿ ಸಹ ಮನುಷ್ಯರಾಗಿ.

ಬ್ರಾಹ್ಮಣರ ಪ್ರತಿನಿಧಿಗಳಾದ ಸುಬ್ರಮಣಿಯನ್ ಸ್ವಾಮಿ, ವಕೀಲ ಅಶ್ವಿನಿ ಉಪಾಧ್ಯಾಯ, ವಿಷ್ಣು ಶಂಕರ್ ಜೈನ್ ಮತ್ತು ಬಲರಾಮ್ ಸಿಂಗ್ ಮುಂತಾದವರು ಪ್ರಕರಣ ದಾಖಲಿಸಿ ಸುಪ್ರೀಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದಕ್ಕಾಗಿ ಬೇಸರಪಟ್ಟು ವಿಶ್ವಪ್ರಸನ್ನ ತೀರ್ಥರು “ನಮ್ಮನ್ನು ಗೌರವಿಸುವ ಸಂವಿದಾನ ಬರಬೇಕು” ಎಂದು ಹೇಳಿರಬಹುದು ಎಂದು ನಾವು ಭಾವಿಸಿ ಕೊಳ್ಳೋಣ!

ಈ ಗದ್ದಲದ ನಡುವೆ, “ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡುವ ಕಾನೂನು ಜಾರಿಗೆ ತರಬೇಕು” ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮಿಗಳ ಹೇಳಿಕೆ ಆಘಾತವನ್ನು ಉಂಟು ಮಾಡಿದೆ. ಇದರಿಂದ ಸ್ವಾಮಿಗಳು ಎಲ್ಲರ ವಿಮರ್ಶೆಗೆ ಒಳಗಾಗಿದ್ದಾರೆ. ನಂತರ, “ಬಾಯಿ ತಪ್ಪಿ ಹೇಳಿದ ಹೇಳಿಕೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅದೇನೇ ಹಾಗಿರಲಿ, ಸ್ವಾಮಿಗಳ ಈ ರೀತಿಯ ಮಾತುಗಳನ್ನು ಒಪ್ಪಲಾಗದು.

ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿದ ಹಿಂದಿನ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಆ ಮೀಸಲಾತಿಯನ್ನು ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯಕ್ಕೆ ತಲಾ ಶೇ.2ರಷ್ಟು ಹಂಚಿಕೆ ಮಾಡಿತ್ತು. ನಂತರ ಮುಸ್ಲಿಮರ 2ಬಿ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಇದು ಕೂಡ ಸ್ವಾಮಿಜೀಗಳ ಕೋಪಕ್ಕೆ ಕಾರಣವಾಗಿರಬಹುದು. ಅದು ಏನೇ ಇದ್ದರೂ, ಸರ್ಕಾರವು ಸಂವಿಧಾನ ವಿರೋಧಿಗಳಿಂದ ಬಹುಸಂಖ್ಯಾತರನ್ನು ರಕ್ಷಿಸುವುದರೊಂದಿಗೆ ಮೀಸಲಾತಿ ವಿಚಾರದಲ್ಲಿ ಆದಷ್ಟು ಬೇಗ ಎಲ್ಲರೂ ಒಪ್ಪುವಂತಹ ಮೀಸಲಾತಿ ನೀತಿಯನ್ನು ಪ್ರಕಟಿಸುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡಬೇಕು. ಇಲ್ಲದಿದ್ದರೆ ಸಂವಿಧಾನ ವಿರೋಧಿಗಳು ಇದನ್ನು ಬಂಡವಾಳ ಮಾಡಿಕೊಳ್ಳುತ್ತಾರೆ ಎಂಬುದನ್ನು ಯಾರೂ ಮರೆಯಬಾರದು.

ದೇಶ

ನವದೆಹಲಿ: ಪ್ರಧಾನಿಗೆ ರಕ್ಷಣೆ ನೀಡುವ ವಿಶೇಷ ಭದ್ರತಾ ಪಡೆಯಲ್ಲಿ (ಎಸ್‌ಪಿಜಿ) ಮಹಿಳಾ ಕಮಾಂಡೋ ಒಬ್ಬರು ಪ್ರಧಾನಿ ಜತೆಗಿರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದೇಶದ ಪ್ರಧಾನಿ ಮತ್ತು ಸರ್ಕಾರಿ ಭವನದಲ್ಲಿ ತಂಗಿರುವ ಅವರ ಕುಟುಂಬಕ್ಕೆ ಎಸ್‌ಪಿಜಿ., ಎಂದು ಕರೆಯಲ್ಪಡುವ ವಿಶೇಷ ಭದ್ರತಾ ಪಡೆಗಳ ಕಮಾಂಡೋಗಳು ಗಣ್ಯರ ರಕ್ಷಣೆಯನ್ನು ಒದಗಿಸುತ್ತಿದ್ದಾರೆ. ಪ್ರಧಾನಿ ಹೋದಲ್ಲೆಲ್ಲಾ ಅವರು ನೆರಳಿನಂತೆ ಇರುತ್ತಾರೆ.

SPG ಪಡೆಯಲ್ಲಿ ಅರೆಸೇನಾಪಡೆ, CAPF ಎಂದು ಕರೆಯಲ್ಪಡುವ ಕೇಂದ್ರ ಸಶಸ್ತ್ರ ಪಡೆಗಳು, ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ರಾಜ್ಯ ವಿಶೇಷ ಪೊಲೀಸ್ ಪಡೆಗಳು ಮತ್ತು ಕೇಂದ್ರ ಗುಪ್ತಚರ ಸಂಸ್ಥೆಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುವವರಿಗೆ ವಿಶೇಷ ತರಬೇತಿ ನೀಡಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಈ ಹಿನ್ನೆಲೆಯಲ್ಲಿ, ಪ್ರಧಾನಿಯವರ ಎಸ್‌ಪಿಜಿ ಭದ್ರತಾ ಪಡೆಯಲ್ಲಿ ಪ್ರಥಮ ಬಾರಿಗೆ ಮಹಿಳಾ ಕಮಾಂಡೋ ನೇಮಕ ಮಾಡಲಾಗಿದ್ದು, ಪ್ರಧಾನಿ ಭದ್ರತೆಯಲ್ಲಿ ತೊಡಗಿಸಿಕೊಂಡಿರುವ ಫೋಟೋವನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಇದನ್ನು ಬಿಜೆಪಿ ಲೋಕಸಭೆ ಸಂಸದೆ ಮತ್ತು ಬಾಲಿವುಡ್ ನಟಿ ಕಂಗನಾ ರನೌತ್ (Kangana Ranaut) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮೂಲಗಳು, “2013 ರಿಂದ ಎಸ್‌ಪಿಜಿ ಎಂಬ ವಿಶೇಷ ಭದ್ರತಾ ಪಡೆಯಲ್ಲಿ ಮಹಿಳಾ ಕಮಾಂಡೋಗಳನ್ನು ನೇಮಿಸಲಾಗಿತ್ತು. ಪ್ರಸ್ತುತ 100 ಮಹಿಳಾ ಕಮಾಂಡೋಗಳು ಇದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಪ್ರಧಾನಿ ಆಗಮಿಸಿದಾಗ ಮಹಿಳಾ ಕಮಾಂಡೋ ಭದ್ರತಾ ಕರ್ತವ್ಯದಲ್ಲಿದ್ದರು. ಆ ಫೋಟೋ ಈಗ ವೈರಲ್ ಆಗುತ್ತಿದೆ” ಎಂದಿದೆ.

ದೇಶ

ಡಿ.ಸಿ.ಪ್ರಕಾಶ್

PAN ಎಂಬುದು ಆದಾಯ ತೆರಿಗೆ ಇಲಾಖೆಯಿಂದ ತೆರಿಗೆದಾರರಿಗೆ ನೀಡಲಾದ ವಿಶೇಷ 10-ಅಂಕಿಯ ಸಂಖ್ಯೆಯಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಆರಂಭಿಸಿ, ಸಾಲ ಪಡೆಯುವುದು, ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಹಣ ತೆಗೆಯುವುದು, ನಗದು ವಹಿವಾಟು, ತೆರಿಗೆ ವಂಚನೆ ತಡೆಯುವುದು ಮುಂತಾದ ವಿವಿಧ ಕಾರ್ಯಗಳಲ್ಲಿ ಪ್ಯಾನ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ.

PAN 2.0 ಎಂದರೇನು?
ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೊಸ ಪ್ಯಾನ್ ಕಾರ್ಡ್‌ಗಳನ್ನು ವಿತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಉದ್ದೇಶಕ್ಕಾಗಿ 1,435 ಕೋಟಿ ರೂ.ಗಳನ್ನು ಮೀಸಲಿಡುವುದಾಗಿಯೂ ಹೇಳಿದೆ. ಪ್ರಸ್ತುತ ನಾವು 10 ಅಂಕಿಯ ಗುರುತಿನ ಸಂಖ್ಯೆ ಮತ್ತು ಕೋಡ್ ಹೊಂದಿರುವ ಮಾನ್ಯವಾದ ಪ್ಯಾನ್ ಕಾರ್ಡ್ ಅನ್ನು ಹೊಂದಿದ್ದೇವೆ. ಹೊಸದಾಗಿ ಪರಿಚಯಿಸಲಾಗುವ ಪ್ಯಾನ್ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ (QR Code) ಇರುತ್ತದೆ.

ಈ ಮೂಲಕ ಪ್ಯಾನ್ ಕಾರ್ಡ್ ಸೇವೆಗಳನ್ನು ಡಿಜಿಟಲೀಕರಣಗೊಳಿಸುತ್ತದೆ. ಪ್ಯಾನ್ ಕಾರ್ಡ್ ಸೇವೆಗಳು ಪಾರದರ್ಶಕವಾಗಿರುತ್ತವೆ ಎಂದು ನಂಬಲಾಗಿದೆ.

PAN 2.0 ರ ಮುಖ್ಯಾಂಶಗಳು:
• ಏಕೀಕೃತ ಪೋರ್ಟಲ್ (Integrated Portal) ಸೌಲಭ್ಯದ ಮೂಲಕ ಎಲ್ಲಾ PAN ಸಂಬಂಧಿತ ಸೇವೆಗಳಿಗೆ ಒಂದೇ ಆನ್‌ಲೈನ್ ಪ್ಲಾಟ್‌ಫಾರ್ಮ್ ಲಭ್ಯವಿರುತ್ತದೆ.

• QR ಕೋಡ್ ಇರುವ ಕಾರಣ ಸೈಬರ್ ಭದ್ರತೆಯನ್ನು ಸುಧಾರಿಸಲಾಗುತ್ತದೆ.

• ತೆರಿಗೆದಾರರಿಗೆ ಪ್ಯಾನ್ ಕಾರ್ಡ್‌ಗಳಲ್ಲಿನ ಕೊರತೆಗಳನ್ನು ತ್ವರಿತವಾಗಿ ಸರಿಪಡಿಸಲು ಇದು ಕಾರಣವಾಗುತ್ತದೆ.

• ನಿಯಮಗಳನ್ನು ಉಲ್ಲಂಘಿಸಿ ಒಂದಕ್ಕಿಂತ ಹೆಚ್ಚು ಪ್ಯಾನ್ ಹೊಂದಿರುವವರು ಆದಾಯ ತೆರಿಗೆ ಕಾಯಿದೆ, 1961ರ ಪ್ರಕಾರ ಹೆಚ್ಚುವರಿ ಪ್ಯಾನ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ.

ಪ್ರಸ್ತುತ ಪ್ಯಾನ್ ಕಾರ್ಡ್ ಅಮಾನ್ಯವಾಗಿದೆಯೇ?
ಹೊಸ ಪ್ಯಾನ್ ಕಾರ್ಡ್‌ಗಳು ಪ್ಯಾನ್ 2.0 ಯೋಜನೆಯಡಿ ಬಂದರೂ ಈಗಿರುವ ಪ್ಯಾನ್ ಕಾರ್ಡ್‌ಗಳು ಚಲಾವಣೆಯಲ್ಲಿರುತ್ತದೆ. ಕ್ಯೂಆರ್ ಕೋಡ್ ಇಲ್ಲದ ಹಳೆಯ ಪ್ಯಾನ್ ಕಾರ್ಡ್ ಹೊಂದಿರುವವರು ಹೊಸದಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಇದು ಈಗ ಕಡ್ಡಾಯವಲ್ಲ. ಆದಾಗ್ಯೂ ಭವಿಷ್ಯದಲ್ಲಿ ಪ್ಯಾನ್ ಕಾರ್ಯಾಚರಣೆಗಳನ್ನು ಸುಲಭಗೊಳಿಸಲು ಹೊಸ ಕಾರ್ಡ್‌ಗಳನ್ನು ಪಡೆಯುವುದು ಉತ್ತಮ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಪ್ಯಾನ್ 2.0 ಯೋಜನೆಯಡಿ ಕ್ಯೂಆರ್ ಕೋಡ್ ವೈಶಿಷ್ಟ್ಯದೊಂದಿಗೆ ಪ್ಯಾನ್ ಕಾರ್ಡ್‌ಗಳನ್ನು ತೆರಿಗೆದಾರರಿಗೆ ಉಚಿತವಾಗಿ ನೀಡಲಾಗುತ್ತದೆ. ಇದಕ್ಕೆ ಯಾವುದೇ ಶುಲ್ಕವಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ.

ಅಲ್ಲದೆ, ಅಸ್ತಿತ್ವದಲ್ಲಿರುವ PAN ಹೊಂದಿರುವವರು ಇಮೇಲ್, ಮೊಬೈಲ್ ಸಂಖ್ಯೆ, ವಿಳಾಸ, ಹೆಸರು ಬದಲಾವಣೆ, ಜನ್ಮ ದಿನಾಂಕ ಇತ್ಯಾದಿಗಳಂತಹ ಯಾವುದೇ ವಿವರಗಳನ್ನು ಸರಿಪಡಿಸಲು ಅಥವಾ ನವೀಕರಿಸಲು ಬಯಸಿದರೆ, ಅವರು PAN 2.0 ಸ್ಕೀಮ್ ಅನ್ನು ಪ್ರಾರಂಭಿಸಿದ ನಂತರ ಅದನ್ನು ಉಚಿತವಾಗಿ ಮಾಡಬಹುದು.

ಕೇಂದ್ರ ಸಚಿವ ಸಂಪುಟವು ನವೆಂಬರ್ 26 ರಂದು ಪ್ಯಾನ್ 2.0 ಯೋಜನೆಯನ್ನು ಅನುಮೋದಿಸಿದರೂ, ಅದು ಇನ್ನೂ ಜಾರಿಗೆ ಬಂದಿಲ್ಲ.

ರಾಜಕೀಯ

ಡಿ.ಸಿ.ಪ್ರಕಾಶ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ. ಈ ಪರಿಸ್ಥಿತಿಗೆ ಬಿಜೆಪಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೇ ಕಾರಣ ಎಂದು ದೆಹಲಿ ಮುಖ್ಯಮಂತ್ರಿ ಆತಿಶಿ ಆರೋಪಿಸಿದ್ದಾರೆ.

ದೆಹಲಿಯ ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದ ಪಿವಿಆರ್ ಮಲ್ಟಿಪ್ಲೆಕ್ಸ್ ಥಿಯೇಟರ್ ಬಳಿಯ ಸ್ವೀಟ್ ಅಂಗಡಿ ಮುಂಭಾಗದಲ್ಲಿ ಸಂಭವಿಸಿದ ನಿಗೂಢ ಸ್ಫೋಟವು ಪ್ರದೇಶದಲ್ಲಿ ಸಾಕಷ್ಟು ಆಘಾತವನ್ನು ಸೃಷ್ಟಿಸಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅತಿಶಿ, “ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ. ಈ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ 2 ತಿಂಗಳ ಅವಧಿಯಲ್ಲಿ 2ನೇ ಬಾರಿ ಇಂತಹ ಘಟನೆ ನಡೆದಿದೆ.

ಈ ಪರಿಸ್ಥಿತಿಯು ಭದ್ರತಾ ಕ್ರಮಗಳಲ್ಲಿ ಪ್ರಮುಖ ಲೋಪವನ್ನು ಸೂಚಿಸುತ್ತದೆ. ಈ ಪರಿಸ್ಥಿತಿಗೆ ಬಿಜೆಪಿ ಮತ್ತು ಗೃಹ ಸಚಿವ ಅಮಿತ್ ಶಾ ಕಾರಣ. ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿ ನಿವಾಸಿಗಳ ಸುರಕ್ಷತೆಯನ್ನು ನಿರ್ಲಕ್ಷಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ, ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, “ಇಂತಹ ಘಟನೆಗಳು ದೆಹಲಿಯಲ್ಲಿ ಹೆಚ್ಚುತ್ತಿರುವ ಅಭದ್ರತೆಯ ಭಾವನೆಯನ್ನು ತೋರಿಸುತ್ತದೆ. ದೆಹಲಿಯಲ್ಲಿ ಎಲ್ಲಿ ನೋಡಿದರೂ ಭಯದ ವಾತಾವರಣವಿದೆ. ಸಂಜೆ 7 ಗಂಟೆಯ ನಂತರ ಮಹಿಳೆಯರು ಅಸುರಕ್ಷಿತರಾಗಿರುವುದಾಗಿ ಭಾವಿಸುತ್ತಾರೆ. ಅಲ್ಲದೆ, ಹೆಣ್ಣು ಮಕ್ಕಳು ಹೊರಗೆ ಹೋಗುವ ಬಗ್ಗೆ ಪೋಷಕರು ಚಿಂತಿತರಾಗಿದ್ದಾರೆ” ಎಂದು ಹೇಳಿದರು.

ಮುಂದಿನ ವರ್ಷ ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ತಲೆ ಎತ್ತಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ.

ರಾಜಕೀಯ

ನವದೆಹಲಿ: ಪ್ರಿಯಾಂಕಾ ಗಾಂಧಿಯಿಂದ ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಶಕ್ತಿ ಬಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ವಯನಾಡು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ 4,10,931 ಮತಗಳ ಅಂತರದಿಂದ ಗೆಲುವು ಸಾಧಿಸಿದ ಪ್ರಿಯಾಂಕಾ ಅವರು ಇಂದು (ನವೆಂಬರ್ 28) ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, “ಪ್ರಿಯಾಂಕಾ ಗಾಂಧಿ ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಶಕ್ತಿ ತುಂಬಿದ್ದಾರೆ; ನಮಗೂ ಹೊಸ ಶಕ್ತಿ ಬಂದಿದೆ.

ಪ್ರಿಯಾಂಕಾ ಜನರ ಸಮಸ್ಯೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತಲಿದ್ದಾರೆ. ಅದರಲ್ಲೂ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಧ್ವನಿ ನೀಡಲಿದ್ದಾರೆ. ಇದು ನಮ್ಮ ಪಕ್ಷಕ್ಕೆ ಮತ್ತು ಸಾರ್ವಜನಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ” ಎಂದು ಹೇಳಿದರು.

ಮಗಳು ಪ್ರಿಯಾಂಕಾ ಮೊದಲ ಬಾರಿಗೆ ಸಂಸದೆಯಾಗಿ ಅಧಿಕಾರ ಸ್ವೀಕರಿಸಿದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, “ನಮ್ಮೆಲ್ಲರಿಗೂ ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ” ಎಂದು ಹೇಳಿದರು.

ವಿದೇಶ

“ಗಾಜಾ ಮೇಲಿನ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಬಂಧಿಸುವುದು ಸಾಕಾಗುವುದಿಲ್ಲ, ಬೆಂಜಮಿನ್ ನೆತನ್ಯಾಹುಗೆ ಮರಣದಂಡನೆ ವಿಧಿಸಬೇಕು” – ಅಲಿ ಖಮೇನಿ

ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿತು. ಇನ್ನೂ ಅನೇಕರನ್ನು ಯುದ್ಧ ಕೈದಿಗಳಾಗಿ ಸೆರೆಹಿಡಿಯಲಾಯಿತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನೆ ಹಮಾಸ್ ಮೇಲೆ ದಾಳಿ ನಡೆಸುತ್ತಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಯುತ್ತಿರುವ ಈ ಯುದ್ಧದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ.

ಈ ಯುದ್ಧದಲ್ಲಿ ಹಮಾಸ್ ಮಾತ್ರವಲ್ಲದೆ ಹಿಜ್ಬುಲ್ಲಾ ಮತ್ತು ಇರಾನ್ ಪಡೆಗಳೂ ಭಾಗಿಯಾಗಿವೆ. ಗಾಜಾದಲ್ಲಿ ನಡೆದ ದಾಳಿಗೆ ಇಸ್ರೇಲ್ ಪ್ರಧಾನಿಯೇ ಹೊಣೆಯಾಗಬೇಕು ಮತ್ತು ಇದನ್ನು ಯುದ್ಧ ಅಪರಾಧವಾಗಿ ನೋಡಲಾಗುವುದು ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಹೇಳಿತ್ತು.

ಅಲ್ಲದೆ, ಅಂತರಾಷ್ಟ್ರೀಯ ನ್ಯಾಯಾಲಯವು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಹಮಾಸ್ ನಾಯಕರ ವಿರುದ್ಧ ಎರಡು ವರ್ಷಗಳ ಬಂಧನ ವಾರಂಟ್ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ, “ಗಾಜಾ ಮೇಲಿನ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಬಂಧಿಸುವುದು ಸಾಕಾಗುವುದಿಲ್ಲ, ಬೆಂಜಮಿನ್ ನೆತನ್ಯಾಹುಗೆ ಮರಣದಂಡನೆ ವಿಧಿಸಬೇಕು” ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಒತ್ತಾಯಿಸಿದ್ದಾರೆ.

ರಾಜಕೀಯ

ಡಿ.ಸಿ.ಪ್ರಕಾಶ್

2024ರ ಸಂಸತ್ತಿನ ಚಳಿಗಾಲದ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. ಈ ಬಾರಿಯ ಚಳಿಗಾಲದ ಅಧಿವೇಶನ ಡಿಸೆಂಬರ್ 20 ರವರೆಗೆ ನಡೆಯಲಿದೆ ಎಂದು ತಿಳಿಸಲಾಗಿದೆ. ಇದು ವರ್ಷದ ಅಂತಿಮ ಅಧಿವೇಶನವೂ ಆಗಿದೆ. ಕಳೆದ 2 ತಿಂಗಳಲ್ಲಿ ಮಾತ್ರ ದೇಶದಲ್ಲಿ ವಿವಿಧ ರೀತಿಯ ಅವ್ಯವಹಾರಗಳು ಮತ್ತು ಆರೋಪಗಳು ಕೇಳಿಬರುತ್ತಿವೆ. ಚಳಿಗಾಲದ ಅಧಿವೇಶನದಲ್ಲಿ ಅವುಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ, ಇಂದು ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ದೆಹಲಿಯಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು. ಅದರಂತೆ ಬೆಳಗ್ಗೆ 11 ಗಂಟೆಗೆ ಸರ್ವಪಕ್ಷ ಸಭೆ ಆರಂಭವಾಯಿತು. ಅದರಲ್ಲಿ, ಸಂಸತ್ ಅಧಿವೇಶನ ಸುಗಮವಾಗಿ ನಡೆಸುವ ಕುರಿತು ಕೇಂದ್ರ ಸರ್ಕಾರದ ಪರವಾಗಿ ಮನವಿ ಮಾಡಲಾಯಿತು. ಆದಾಗ್ಯೂ, ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸುವುದಾಗಿ ವಿರೋಧ ಪಕ್ಷಗಳ ಪರವಾಗಿ ಹೇಳಲಾಗಿದೆ.

ವಕ್ಫ್ ಕಾಯ್ದೆ ತಿದ್ದುಪಡಿ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸೇರಿದಂತೆ ಮಹತ್ವದ ಮಸೂದೆಗಳನ್ನು ಅಂಗೀಕರಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇಂತಹ ವಾತಾವರಣದಲ್ಲಿ ಅದಾನಿ ವಿರುದ್ಧ ಅಮೆರಿಕ ನ್ಯಾಯಾಲಯದ ಲಂಚದ ದೂರು ಸೇರಿದಂತೆ ಹಲವು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಲು ವಿರೋಧ ಪಕ್ಷಗಳು ಮುಂದಾಗಿರುವಂತಿದೆ. ನಾಳೆ ಚಳಿಗಾಲದ ಅಧಿವೇಶನ ಆರಂಭವಾಗುವ ವೇಳೆಗೆ ಈ ವಿಷಯಗಳು ಚರ್ಚೆಗೆ ಗ್ರಾಸವಾಗುವುದರಿಂದ ತೀವ್ರ ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಇದೆ.

ಈಗಾಗಲೇ ಅದಾನಿ ವಿಚಾರದಲ್ಲಿ ಪ್ರಧಾನಿ ಮೋದಿಯವರ ಪಾತ್ರವೂ ಇದೆ ಎಂದು ವಿರೋಧ ಪಕ್ಷಗಳು ಪ್ರತಿಪಾದಿಸುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದ ಚರ್ಚೆಗಳು ಸಂಸತ್ ಅಧಿವೇಶನದ ಬಿಸಿ ತಟ್ಟುವ ನಿರೀಕ್ಷೆಯಿದೆ. ಸಭೆಯ ವೇಳೆ ಪ್ರಧಾನಿ ಮೋದಿ ಮೌನ ವಹಿಸುತ್ತಾರಾ? ಅಥವಾ ಸೂಕ್ತ ಪ್ರತಿಕ್ರಿಯೆ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕು.

ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಸಂಬಂಧಿಸಿದಂತೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಮ್ಮ ಎಕ್ಸ್ ಪೇಜ್ ನಲ್ಲಿ, “ಕೇಂದ್ರ ಸರ್ಕಾರದ ಶಿಫಾರಸಿನ ಮೇರೆಗೆ ನಾಳೆಯಿಂದ ಡಿಸೆಂಬರ್ 20 ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ. ಇದನ್ನು ಉಭಯ ಸದನಗಳಲ್ಲಿ ನಡೆಸಲು ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. ನಾಳೆ ಮರುದಿನ ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ಸಂವಿಧಾನದ 75ನೇ ವರ್ಷಾಚರಣೆ ನಡೆಯಲಿದೆ” ಎಂದು ಹೇಳಿದ್ದಾರೆ.