ಮಹಿಳಾ ನಿಂದಕ ಮುನಿರತ್ನ ಶಾಸಕತ್ವ ರದ್ದುಗೊಳಿಸಲು ವೆಲ್ಫೇರ್ ಪಾರ್ಟಿ ಆಗ್ರಹ! » Dynamic Leader
November 10, 2024
ರಾಜಕೀಯ

ಮಹಿಳಾ ನಿಂದಕ ಮುನಿರತ್ನ ಶಾಸಕತ್ವ ರದ್ದುಗೊಳಿಸಲು ವೆಲ್ಫೇರ್ ಪಾರ್ಟಿ ಆಗ್ರಹ!

ಬೆಂಗಳೂರು: ಓರ್ವ ಜನಪ್ರತಿನಿಧಿಯಾಗಿ ಮಹಿಳೆಯರ ಬಗ್ಗೆ ಇಷ್ಟೊಂದು ಕೀಳುಮಟ್ಟದ ಮಾತುಗಳನ್ನಾಡಿರುವ ಶಾಸಕ ಮುನಿರತ್ನ ರವರ ನಡೆ ಅತ್ಯಂತ ಖಂಡನೀಯ ಮತ್ತು ಅವರ ಶಾಸಕತ್ವವನ್ನು ಈ ಕೂಡಲೇ ರದ್ದು ಪಡಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಒತ್ತಾಸಿದ್ದಾರೆ.

ಮಾನ್ಯ ಸಭಾಪತಿಗಳು ಮುನಿರತ್ನ ಅವರ ಶಾಸಕತ್ವವನ್ನು ಈ ಕೂಡಲೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿರುವ ಅವರು, “ಇದು ಕೇವಲ ಒಕ್ಕಲಿಗ ಸಮುದಾಯಕ್ಕೆ ಮಾತ್ರವಲ್ಲ ಇಡೀ ಮಹಿಳಾ ಸಮೂಹಕ್ಕೆ ಮಾಡಿದ ಅವಮಾನವಾಗಿದೆ. ಮಹಿಳೆಯರ ಬಗ್ಗೆ ಇವರಿಗೆ ಎಷ್ಟು ಗೌರವವಿದೆ ಎಂಬುದು ಇವರ ಈ ಕೃತ್ಯದಿಂದ ಬಹಿರಂಗಗೊಂಡಿದೆ. ಇಂತಹ ಶಾಸಕರಿಗೆ ನೈತಿಕತೆಯ ಪಾಟದ ಅಗತ್ಯವಿದೆ” ಎಂದು ಹೇಳಿದ್ದಾರೆ.

“ಚಿತ್ರರಂಗದಿಂದ ಬಂದು ರಾಜಕೀಯ ರಂಗದಲ್ಲಿ ಸಭ್ಯತೆ ಮೆರೆದವರು ಅದೆಷ್ಟೋ ಮಂದಿಯಿದ್ದಾರೆ. ಆದರೆ ಇವರು, ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ಚೆಲುವರಾಜು ರವರಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದೂ ಅಲ್ಲದೇ ಅವರ ಪತ್ನಿಯನ್ನು ನಿಂದಿಸುವ ಹಂತಕ್ಕೆ ತಲುಪಿದ್ದಾರೆಂದರೆ ಇವರಲ್ಲಿ ಅಹಂಕಾರ ಪೊಗರು ಅವೆಷ್ಟಿವೆ ಎಂಬುದನ್ನು ಅಂದಾಜಿಸಬಹುದು” ಎಂದು ಕಿಡಿಕಾರಿದ್ದಾರೆ.

“ಜನಪ್ರತಿನಿಧಿ ಎನಿಸಿಕೊಳ್ಳಲು ಇವರೆಷ್ಟು ಅರ್ಹರು? ಜನರು ಜನಪ್ರತಿನಿಧಿಗಳನ್ನು ಆರಿಸುವಾಗ ಅವರ ನೈತಿಕತೆಯನ್ನು ಕೂಡಾ ಮಾನದಂಡವನ್ನಾಗಿಸಬೇಕು. ಇಲ್ಲದಿದ್ದಲ್ಲಿ ಇಂತಹದ್ದು ಮರುಕಳಿಸುತ್ತದೆ” ಎಂದು ಅವರು ಹೇಳಿದ್ದಾರೆ.

Related Posts