ಭಿಲಾಯ್ ಕನ್ನಡ ಸಂಘದವರ ಕನ್ನಡತನ, ಮಾತೃಭಾಷಾ ಪ್ರೇಮ, ತಾಯ್ನಾಡಿನ ಬಗೆಗಿನ ಅಕ್ಕರೆಯನ್ನು ಕಂಡು ನನ್ನ ಮನಸ್ಸು ತುಂಬಿ ಬಂದಿದೆ: ಹೆಚ್.ಡಿ.ಕುಮಾರಸ್ವಾಮಿ » Dynamic Leader
October 3, 2024
ದೇಶ

ಭಿಲಾಯ್ ಕನ್ನಡ ಸಂಘದವರ ಕನ್ನಡತನ, ಮಾತೃಭಾಷಾ ಪ್ರೇಮ, ತಾಯ್ನಾಡಿನ ಬಗೆಗಿನ ಅಕ್ಕರೆಯನ್ನು ಕಂಡು ನನ್ನ ಮನಸ್ಸು ತುಂಬಿ ಬಂದಿದೆ: ಹೆಚ್.ಡಿ.ಕುಮಾರಸ್ವಾಮಿ

ಛತ್ತಿಸಗಢ,

ಛತ್ತಿಸಗಢದ ಭಿಲಾಯ್ ಉಕ್ಕು ಕಾರ್ಖಾನೆ (Bhilai Steel Plant)ಗೆ ಭೇಟಿ ನೀಡಲು ಬಂದಿದ್ದ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ‘ಭಿಲಾಯ್ ಕನ್ನಡ ಸಂಘ’ದ ಸದಸ್ಯರು ಭೇಟಿಯಾಗಿ ಆತ್ಮೀಯವಾಗಿ ಅಭಿನಂದಿಸಿರುವುದಕ್ಕೆ ಸಚಿವರು ಧನ್ಯವಾದಗಳನ್ನು ತಿಳಿಸಿದ್ದಾರೆ.

“ಅವರ ಕನ್ನಡತನ, ಮಾತೃಭಾಷಾ ಪ್ರೇಮ, ತಾಯ್ನಾಡಿನ ಬಗೆಗಿನ ಅಕ್ಕರೆಯನ್ನು ಕಂಡು ನನ್ನ ಮನಸ್ಸು ತುಂಬಿ ಬಂದಿದೆ. ಅವರೆಲ್ಲರಿಗೂ ನನ್ನ ಅನಂತ ಧನ್ಯವಾದಗಳು” ಎಂದು ಹೇಳಿದ್ದಾರೆ.

ಸಂಘದ ಸದಸ್ಯರಾದ ಶಶಿಭೂಷಣ್, ವೆಂಕಟೇಶ್ ಕಾರಂತ್, ಶ್ರೀಧರ್, ನಾಗೇಂದ್ರ ಧನ, ಅನುರಾಧ ಧನ, ವೆಂಕಟೇಶ್ ಬಾಬು, ನಂದಕುಮಾರ್, ಸುಚಿತ್ರಾ, ರೀಟಾ, ಚಂದ್ರಲತಾ ಮುಂತಾದವರು ಉಪಸ್ಥಿತರಿದ್ದರು ಎಂದು ಸಚಿವರು ತಮ್ಮ ‘ಎಕ್ಸ್’ ಸೈಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Related Posts