ಉಜ್ಜಯಿನಿಯ ಜನನಿಬಿಡ ರಸ್ತೆಯಲ್ಲೆ ಮಹಿಳೆ ಮೇಲೆ ಅತ್ಯಾಚಾರ: ರಕ್ಷಿಸದೆ ವಿಡಿಯೋ ರೆಕಾರ್ಡ್ ಮಾಡಿದ ಭೂಪರು!
ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಜನನಿಬಿಡ ರಸ್ತೆಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದೆ. ಅಲ್ಲಿದ್ದವರು ಆ ಮಹಿಳೆಯನ್ನು ರಕ್ಷಿಸದೆ ವಿಡಿಯೋ ರೆಕಾರ್ಡ್ ಮಾಡಿ ಆನ್‌ಲೈನ್‌ನಲ್ಲಿ ಪ್ರಕಟಿಸಿದ್ದಾರೆ.
ಉಜ್ಜಯಿನಿಯ ಕೊಯಿಲಾ ಪಾಠಕ್ ನಲ್ಲಿ ಮಹಿಳೆಯೊಬ್ಬರು ಕಸ ಸಂಗ್ರಹಿಸುತ್ತಿದ್ದರು. ಆ ಪ್ರದೇಶದಲ್ಲಿದ್ದ ಲೋಕೇಶ್ ಎಂಬುವನು, ಮಹಿಳೆಯನ್ನು ಕರೆದುಕೊಂಡು ಹೋಗಿ ಮದುವೆಯಾಗುವುದಾಗಿ ಆಸೆ ಮಾತು ಹೇಳಿದ್ದಾನೆ. ಇದನ್ನು ನಂಬಿದ ಮಹಿಳೆ ಆತನೊಂದಿಗೆ ತೆರಳಿದ್ದಾಳೆ. ಮಹಿಳೆಗೆ ಲೋಕೇಶ್ ರಸ್ತೆಯಲ್ಲೇ ಅರಿವಳಿಕೆ ಮಿಶ್ರಿತ ಮದ್ಯ ನೀಡಿದ್ದಾನೆ. ಇದನ್ನು ಅರಿಯದೆ ಕುಡಿದು ಅಲ್ಲೆ ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.
ಇದನ್ನು ಕಂಡ ಅಲ್ಲಿದ್ದ ಕೆಲವರು ಮಹಿಳೆಗೆ ಸಹಾಯ ಮಾಡದೆ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದು ಪೊಲೀಸರ ಗಮನಕ್ಕೆ ಬಂದಾಗ ಲೋಕೇಶ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.