ಆಂಧ್ರಪ್ರದೇಶದಲ್ಲಿ ಅಣ್ಣಾ ಕ್ಯಾಂಟೀನ್: 5 ರೂಪಾಯಿಗೆ ರುಚಿಕರವಾದ ಆಹಾರ! » Dynamic Leader
September 10, 2024
ದೇಶ

ಆಂಧ್ರಪ್ರದೇಶದಲ್ಲಿ ಅಣ್ಣಾ ಕ್ಯಾಂಟೀನ್: 5 ರೂಪಾಯಿಗೆ ರುಚಿಕರವಾದ ಆಹಾರ!

ಹೈದರಾಬಾದ್: ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅದರ ನಾಯಕ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ಮುಖ್ಯಮಂತ್ರಿಯಾದರು.

ಈ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ ಯೋಜನೆಗಳನೆಲ್ಲ ಅನುಷ್ಠಾನಕ್ಕೆ ತರುತ್ತಿದ್ದಾರೆ. ಟಿಡಿಪಿ ಮತ್ತೆ ಅಧಿಕಾರಕ್ಕೆ ಬಂದರೆ ‘ಅಣ್ಣಾ ಕ್ಯಾಂಟೀನ್’ (Anna Canteen) ತೆರೆಯಲಾಗುವುದು ಎಂದು ಚಂದ್ರಬಾಬು ನಾಯ್ಡು ಭರವಸೆ ನೀಡಿದ್ದರು. ಅದರಂತೆ ಇಂದು ಆಂಧ್ರಪ್ರದೇಶದ 14 ಜಿಲ್ಲೆಗಳಲ್ಲಿ ‘ಅಣ್ಣ ಕ್ಯಾಂಟೀನ್’ ತೆರೆಯಲಾಗಿದೆ.

ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ 3 ವೇಳೆಯೂ 5 ರೂಪಾಯಿಗೆ ರುಚಿಕರವಾದ ಆಹಾರವನ್ನು ನೀಡಲಾಗುತ್ತದೆ. ಪ್ರತಿದಿನ ಒಂದು ಲಕ್ಷ ಮಂದಿ ಆಹಾರ ಸೇವಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಹಾರವು ಉತ್ತಮ ಗುಣಮಟ್ಟದ ಮತ್ತು ರುಚಿಕರವಾಗಿರಬೇಕು ಎಂದು ಆದೇಶಿಸಲಾಗಿದೆ. ರಾಜ್ಯದ ಹಲವೆಡೆ ‘ಅಣ್ಣಾ ಕ್ಯಾಂಟೀನ್’ ತೆರೆಯಲಾಗುವುದು ಎಂದು ಅಧಿಕಾರಿಗಳಿಂದ ತಿಳಿದುಬಂದಿದೆ.

ತಮಿಳುನಾಡಿನಲ್ಲಿ ‘ಅಮ್ಮ ಕ್ಯಾಂಟೀನ್’ ಕರ್ನಾಟಕದಲ್ಲಿ ‘ಇಂದಿರಾ ಕ್ಯಾಂಟೀನ್’ ಇದೀಗ ಆಂಧ್ರಪ್ರದೇಶದಲ್ಲಿ ಅಣ್ಣಾ ಕ್ಯಾಂಟೀನ್ ತೆರೆದಿರುವುದು ಗಮನಾರ್ಹ.

Related Posts