ಶ್ರೀರಾಮನಿಗೆ ಇತಿಹಾಸವೇ ಇಲ್ಲ: ತಮಿಳುನಾಡು ಸಾರಿಗೆ ಸಚಿವ ಶಿವಶಂಕರ್ ವಿವಾದಾತ್ಮಕ ಹೇಳಿಕೆ! » Dynamic Leader
September 18, 2024
ದೇಶ

ಶ್ರೀರಾಮನಿಗೆ ಇತಿಹಾಸವೇ ಇಲ್ಲ: ತಮಿಳುನಾಡು ಸಾರಿಗೆ ಸಚಿವ ಶಿವಶಂಕರ್ ವಿವಾದಾತ್ಮಕ ಹೇಳಿಕೆ!

ಅರಿಯಲೂರು: “ರಾಮನಿಗೆ 3 ಸಾವಿರ ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಆದರೆ ಶ್ರೀರಾಮನಿಗೆ ಇತಿಹಾಸವೇ ಇಲ್ಲ: ಎಂದು ತಮಿಳುನಾಡು ಸಾರಿಗೆ ಸಚಿವ ಶಿವಶಂಕರ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಕೆಲವು ದಿನಗಳ ಹಿಂದೆ ಪುದುಕೊಟ್ಟೈ ‘ಕಂಬನ್ ಕಳಗಂ’ ಆಯೋಜಿಸಿದ್ದ ಕಂಬನ್ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ತಮಿಳುನಾಡು ಕಾನೂನು ಸಚಿವ ರಘುಪತಿ, “ರಾಮನ ಆಡಳಿತ ದ್ರಾವಿಡ ಮಾದರಿಯ ಆಡಳಿತಕ್ಕೆ ನಾಂದಿಯಾಗಿದ್ದು, ಇವಿ ರಾಮಸಾಮಿ, ಅಣ್ಣಾದೊರೈ, ಕರುಣಾನಿಧಿ ಹಾಗೂ ಸ್ಟಾಲಿನ್‌ಗೆ ಪೂರ್ವಭಾವಿಯಾಗಿ ರಾಮನನ್ನು ಕಾಣುತ್ತೇವೆ” ಎಂದು ಹೇಳಿದ್ದರು. ಈ ಮಾತು ಅಂದು ಸಂಚಲನ ಮೂಡಿಸಿತ್ತು.

ಈ ಹಿನ್ನೆಲೆಯಲ್ಲಿ, ಸಚಿವ ರಘುಪತಿ ಮಾತಿಗೆ ವ್ಯತಿರಿಕ್ತವಾಗಿ ಸಾರಿಗೆ ಸಚಿವ ಶಿವಶಂಕರ್ ಬಾಯಿಬಿಟ್ಟಿದ್ದಾರೆ. ಅರಿಯಲೂರಿನಲ್ಲಿ ರಾಜೇಂದ್ರ ಚೋಳರ ಜನ್ಮದಿನವನ್ನು ರಾಜ್ಯೋತ್ಸವವಾಗಿ ಆಚರಿಸುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಸಚಿವ ಶಿವಶಂಕರ್, “ಶ್ರೀರಾಮನಿಗೆ 3 ಸಾವಿರ ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಆದರೆ ರಾಮನಿಗೆ ಇತಿಹಾಸವೇ ಇಲ್ಲ.

ದೇವಾಲಯಗಳು, ಶಾಸನಗಳು ಮತ್ತು ತಾಮ್ರ ಫಲಕದ ಶಾಸನಗಳು ರಾಜೇಂದ್ರ ಚೋಳನ ಆಳ್ವಿಕೆಗೆ ಸಾಕ್ಷಿಯಾಗಿದೆ. ರಾಜೇಂದ್ರ ಚೋಳನನ್ನು ಆಚರಿಸದಿದ್ದರೆ ಇತಿಹಾಸ ಇಲ್ಲದವರನ್ನು ನಮ್ಮ ತಲೆಗೆ ಕಟ್ಟಿಬಿಡುತ್ತಾರೆ” ಎಂದು ಹೇಳಿದ್ದಾರೆ. ಈ ಮಾತು ಡಿಎಂಕೆ ಸರ್ಕಾರಕ್ಕೆ ಮುಜುಗರವನ್ನು ಉಂಟುಮಾಡಿದೆ.

Related Posts