ಸರಣಿ ಭ್ರಷ್ಟಾಚಾರದ ಸರದಾರ ಸಿದ್ದರಾಮಯ್ಯನವರ ಕರ್ಮಕಾಂಡ ಅಗೆದಷ್ಟು ಆಳವಾಗಿದೆ; ಬಗೆದಷ್ಟು ಹೊರಬರುತ್ತಿದೆ: - ಆರ್.ಅಶೋಕ್ » Dynamic Leader
September 17, 2024
ರಾಜ್ಯ

ಸರಣಿ ಭ್ರಷ್ಟಾಚಾರದ ಸರದಾರ ಸಿದ್ದರಾಮಯ್ಯನವರ ಕರ್ಮಕಾಂಡ ಅಗೆದಷ್ಟು ಆಳವಾಗಿದೆ; ಬಗೆದಷ್ಟು ಹೊರಬರುತ್ತಿದೆ: – ಆರ್.ಅಶೋಕ್

ಬೆಂಗಳೂರು: “ಸರಣಿ ಭ್ರಷ್ಟಾಚಾರದ ಸರದಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕರ್ಮಕಾಂಡ ಅಗೆದಷ್ಟು ಆಳವಾಗಿದೆ; ಬಗೆದಷ್ಟು ಹೊರಬರುತ್ತಿದೆ” ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

“ಸಹಕಾರ ಇಲಾಖೆಯ ಅಪೆಕ್ಸ್ ಬ್ಯಾಂಕ್ ಗಳಲ್ಲಿ ಬಹುಕೋಟಿ ರೂಪಾಯಿ ಮೊತ್ತದ ಬೃಹತ್ ಹಗರಣ ಬೆಳಕಿಗೆ ಬಂದಿದ್ದು, ಹಗರಣದ ತನಿಖೆ ನಡೆಸುವಂತೆ ಮಾನ್ಯ ಹೈಕೋರ್ಟ್ ತಾಕೀತು ಮಾಡಿದೆ” ಎಂದು ಹೇಳಿರುವ ಆರ್.ಅಶೋಕ್,

“ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ತಮ್ಮ ಸರ್ಕಾರದಲ್ಲಿ ಹಣಗರಣವಿಲ್ಲದ ಇಲಾಖೆ ಇಲ್ಲ ಎಂಬ ನಾಚಿಕೆಗೇಡು ಪರಿಸ್ಥಿತಿ ಇದೆ. ಇನ್ನಾದರೂ ರಾಜೀನಾಮೆ ಕೊಟ್ಟು ಕರ್ನಾಟಕದ ಮರ್ಯಾದೆ ಉಳಿಸಿ” ಎಂದು ಕಿಡಿಕಾರಿದ್ದಾರೆ.

Related Posts