ವೆಲ್ಫೇರ್ ಪಾರ್ಟಿ ಹೋರಾಟದ ಫಲವಾಗಿ ಇಂದಿರಾ ಕ್ಯಾಂಟೀನನ್ನು ಮತ್ತೆ ಪುನರಾರಂಭಿಸಿದ ಜಿಲ್ಲಾಡಳಿತ! » Dynamic Leader
September 10, 2024
ರಾಜ್ಯ

ವೆಲ್ಫೇರ್ ಪಾರ್ಟಿ ಹೋರಾಟದ ಫಲವಾಗಿ ಇಂದಿರಾ ಕ್ಯಾಂಟೀನನ್ನು ಮತ್ತೆ ಪುನರಾರಂಭಿಸಿದ ಜಿಲ್ಲಾಡಳಿತ!

ಕಲಬುರಗಿ:  ಕಳೆದ ಒಂದೂವರೆ ವರ್ಷದಿಂದ ಮುಚ್ಚಲ್ಪಟ್ಟಿದ್ದ ಇಂದಿರಾ ಕ್ಯಾಂಟೀನನ್ನು ಮತ್ತೆ ತೆರೆದಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ಬಡವರಿಗೆ, ವಿಧ್ಯಾರ್ಥಿಗಳಿಗೆ ಕೂಲಿ ಕಾರ್ಮಿಕರಿಗೆ ಆಸ್ಪತ್ರೆಯ ಬಡರೋಗಿಗಳಿಗೆ ಆಶಾ ಕಿರಣವಾಗಿದ್ದ ಇಂದಿರಾ ಕ್ಯಾಂಟೀನ್ ಗೆ ಬೀಗ ಜಡಿದಿದ್ದು ಸ್ಥಳೀಯರಲ್ಲಿ ಬೇಸರ ತಂದಿತ್ತು.

ಇದರ ವಿರುದ್ಧವಾಗಿ ವೆಲ್ಪೇರ್ ಪಾರ್ಟಿಯು ತೀವ್ರ ಸ್ವರೂಪದ ಹೋರಾಟ ಮಾಡಿದರ ಫಲವಾಗಿ, ಸರ್ಕಾರ ಮತ್ತು ಜಿಲ್ಲಾಡಳಿತವು ಇಂದಿರಾ ಕ್ಯಾಂಟೀನನ್ನು ಪುನರಾರಂಭಗೊಳಿಸಿದೆ. ಈ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕಲಬುರಗಿ ಜಿಲ್ಲಾ ಶಾಖೆ ಕ್ರತಜ್ಞತೆ ಸಲ್ಲಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Posts