ಪವರ್ ಟಿವಿ ಮತ್ತೆ ಆರಂಭವಾಗಲಿ: ಇದು ಕೇವಲ ಪವರ್ ಟಿವಿಗೆ ಸಂದ ಜಯವಲ್ಲ, ಮಾಧ್ಯಮ ಲೋಕಕ್ಕೆ ಸಂದ ಜಯ! - ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘ » Dynamic Leader
September 17, 2024
ರಾಜ್ಯ

ಪವರ್ ಟಿವಿ ಮತ್ತೆ ಆರಂಭವಾಗಲಿ: ಇದು ಕೇವಲ ಪವರ್ ಟಿವಿಗೆ ಸಂದ ಜಯವಲ್ಲ, ಮಾಧ್ಯಮ ಲೋಕಕ್ಕೆ ಸಂದ ಜಯ! – ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘ

ಬೆಂಗಳೂರು: ಪವರ್ ಟಿವಿ ಮತ್ತೆ ಆರಂಭವಾಗಲಿ. ಕಾನೂನಾತ್ಮಕ ಹೋರಾಟ ನಡೆಸಿ, ಪತ್ರಿಕಾ ಸ್ವಾತಂತ್ರ್ಯಕ್ಕೆ ಜೀವಕಳೆ ತುಂಬಿದ ಪವರ್ ಟಿವಿ ಹಾಗೂ ಸಿಬ್ಬಂದಿ ವರ್ಗಕ್ಕೆ ಸಂಘವು ಶುಭಾಶಯಗಳನ್ನು ಕೋರುತ್ತದೆ ಎಂದು ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಪ್ರಸಾದ್. ಜಿ (ಸೂರ್ಯಾಗ್ನಿ ಶಿವು) ಹೇಳಿದ್ದಾರೆ.

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಮತ್ತು ಮಾಧ್ಯಮಗಳು ಒಂದೇ ರೀತಿಯ ಹಕ್ಕುಗಳನ್ನು ಹೊಂದಿವೆ. ಮಾಹಿತಿ ಅಥವಾ ವರದಿಗಳನ್ನು ಬರೆಯುವುದರಲ್ಲಿ, ಪ್ರಕಟಿಸುವುದು ಮತ್ತು ಪ್ರಸಾರ ಮಾಡುವುದರಲ್ಲಿ ಯಾರೂ ಕೂಡ ದೊಡ್ಡವರು ಚಿಕ್ಕವರು ಎಂಬುದೆಲ್ಲ ಇಲ್ಲ. ಕಾನೂನಾತ್ಮಕವಾಗಿ ವ್ಯಕ್ತಿಗತ ತಪ್ಪುಗಳನ್ನು ಬಯಲಿಗೆಳೆಯಲು ಎಲ್ಲರಿಗೂ ಅವಕಾಶ ಇದೆ. ಭಾರತ ಸಂವಿಧಾನ 1950ರ ಪರಿಚ್ಛೇದ 19(1)(ಎ)ನಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಡಿಯಲ್ಲಿ ಪತ್ರಿಕೆ ಮತ್ತು ಪತ್ರಕರ್ತರಿಗೂ ಮುಕ್ತ ಅವಕಾಶವನ್ನು ನೀಡಿದೆ.

ಈ ವಿಚಾರ ಇಲ್ಲಿ ಈಗೇಕೆ ಎನ್ನುವ ಪ್ರಶ್ನೆ?
ತಮಗೆಲ್ಲರಿಗೂ ಅಂದರೆ, ಮಾಧ್ಯಮ ಮಿತ್ರರಿಗೆಲ್ಲರಿಗೂ ತಿಳಿದಿರುವಂತೆ ಕಳೆದ 15 ದಿನಗಳ ಹಿಂದೆ ‘ಪವರ್ ಟಿವಿ’ ಕನ್ನಡ ಖಾಸಗಿ ಸುದ್ದಿ ವಾಹಿನಿಯನ್ನು ಕೆಲವು ರಾಜಕೀಯ – ಪಟ್ಟಭದ್ರ ಹಿತಾಸಕ್ತಿ ಮನಸುಳ್ಳ ವ್ಯಕ್ತಿಗಳು ವಾಹಿನಿಯನ್ನು ಮುಚ್ಚಿಸುವ ಹುನ್ನಾರ ನಡೆಸಿದ್ದರು. ತಾತ್ಕಾಲಿಕವಾಗಿ ಮುಚ್ಚಿಸುವಲ್ಲಿ ಸ್ಥಳೀಯವಾಗಿ ಯಶಸ್ವಿ ಕೂಡ ಆದರು. ಮಾಧ್ಯಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನ ಕೂಡ ಆಯ್ತು. ಆ ಸಂದರ್ಭದಲ್ಲಿ ನಮ್ಮ ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘವು ಪವರ್ ಟಿವಿ ಬೆಂಬಲಕ್ಕೆ ನಿಂತಿತ್ತು.

ಕೊನೆಗೂ ಮಾಧ್ಯಮ ಸ್ವಾತಂತ್ರ್ಯಕ್ಕೆ ಜೀವ ತುಂಬುವ ಕೆಲಸವನ್ನು ಜುಲೈ 12 ರಂದು ಸುಪ್ರೀಂ ಕೋರ್ಟ್ ಮಾಡಿದೆ. ಇದು ಕೇವಲ ಪವರ್ ಟಿವಿಗೆ ಸಂದ ಜಯವಲ್ಲ, ಮಾಧ್ಯಮ ಲೋಕಕ್ಕೆ ಸಂದ ಜಯವಾಗಿದೆ.

ನಮ್ಮ ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘವು (KSWJU) ಸದಾ ಪತ್ರಕರ್ತರ ಪರ; ಪತ್ರಿಕಾ ಸ್ವಾತಂತ್ರ್ಯದ ಪರ. ಪವರ್ ಟಿವಿ ಮತ್ತೆ ಆರಂಭವಾಗಲಿ. ಕಾನೂನಾತ್ಮಕ ಹೋರಾಟ ನಡೆಸಿ, ಪತ್ರಿಕಾ ಸ್ವಾತಂತ್ರ್ಯಕ್ಕೆ ಜೀವಕಳೆ ತುಂಬಿದ ಪವರ್ ಟಿವಿ ಹಾಗೂ ಸಿಬ್ಬಂದಿ ವರ್ಗಕ್ಕೆ ಸಂಘವು ಶುಭಾಶಯಗಳನ್ನು ಕೋರುತ್ತದೆ ಎಂದು ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಪ್ರಸಾದ್. ಜಿ (ಸೂರ್ಯಾಗ್ನಿ ಶಿವು) ಹೇಳಿದ್ದಾರೆ.

Related Posts