ಬಾಲಕಿಯೊಂದಿಗೆ ಮಾತನಾಡಿದ ಯುವಕನಿಗೆ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿದ ಗ್ರಾಮಸ್ಥರು! » Dynamic Leader
September 10, 2024
ದೇಶ

ಬಾಲಕಿಯೊಂದಿಗೆ ಮಾತನಾಡಿದ ಯುವಕನಿಗೆ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿದ ಗ್ರಾಮಸ್ಥರು!

ಅಮ್ರೋಹಾ: ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಖೇರಾ ಅಪ್ರೌಲಾ ಗ್ರಾಮದಲ್ಲಿ ಯುವಕನೊಬ್ಬನಿಗೆ ಅರ್ಧ ತಲೆಯನ್ನು ಬೋಳಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ, ಮೆರವಣಿಗೆಯಲ್ಲಿ ಕರೆದೊಯ್ದ ಘಟನೆ ಸಂಚಲನ ಮೂಡಿಸಿದೆ.

ಖೇರಾ ಅಪ್ರೌಲಾ ಗ್ರಾಮದಲ್ಲಿ ಯುವಕನೊಬ್ಬ ಬಾಲಕಿಯೊಂದಿಗೆ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ಬಾಲಕಿಯ ಮನೆಯವರು ಯುವಕನ ಮೇಲೆ ಕೋಪಗೊಂಡು ಪಂಚಾಯತಿಗೆ ಕೊಂಡೊಯ್ದಿದ್ದಾರೆ. ಆ ಪಂಚಾಯಿತಿಯಲ್ಲಿ ಯುವಕನಿಗೆ ಈ ಕಠಿಣ ಶಿಕ್ಷೆ ನೀಡಲಾಗಿದೆ.

ಈ ಘಟನೆಯ ಕುರಿತ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಯುವಕನನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತಿದ್ದು, ಕೆಲವು ಮಕ್ಕಳು ಅವರನ್ನು ಗೇಲಿ ಮಾಡುತ್ತಿರುವ ದೃಷ್ಯ ರೆಕಾರ್ಡ್ ಆಗಿದೆ.

ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಒಂದೇ ಸಮುದಾಯಕ್ಕೆ ಸೇರಿದ ಎರಡು ಕುಟುಂಬಗಳ ನಡುವೆ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

Related Posts