ದೇಶದಲ್ಲೇ ನ್ಯಾಯ ನೀಡಿಕೆ (Justice Delivery) ಯಲ್ಲಿ ಪ್ರಥಮ‌ ಸ್ಥಾನದಲ್ಲಿರುವ ಕರ್ನಾಟಕ ಪೊಲೀಸ್ ಇಲಾಖೆ! » Dynamic Leader
September 18, 2024
ರಾಜ್ಯ

ದೇಶದಲ್ಲೇ ನ್ಯಾಯ ನೀಡಿಕೆ (Justice Delivery) ಯಲ್ಲಿ ಪ್ರಥಮ‌ ಸ್ಥಾನದಲ್ಲಿರುವ ಕರ್ನಾಟಕ ಪೊಲೀಸ್ ಇಲಾಖೆ!

ಬೆಂಗಳೂರು: ದೇಶದ ಪ್ರತಿಷ್ಠಿತ ಇಂಡಿಯಾ ಜಸ್ಟೀಸ್‌ ರಿಪೋರ್ಟ್‌ ನವರು ನಡೆಸಿದ ಸಮೀಕ್ಷಾ ವರದಿಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಇಡೀ ದೇಶದಲ್ಲೇ ನ್ಯಾಯ ನೀಡಿಕೆ (Justice Delivery) ಯಲ್ಲಿ ಪ್ರಥಮ‌ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಒಟ್ಟು 10 ಅಂಕಗಳನ್ನು ಆಧಾರವಾಗಿಟ್ಟು ನಡೆಸಿದ ಈ ವೈಜ್ಞಾನಿಕ ಸಮೀಕ್ಷೆಯಲ್ಲಿ ಕರ್ನಾಟಕ ಪೊಲೀಸರು 6.38 ಅಂಕಗಳಿಕೆಯ ಮೂಲಕ ಪ್ರಥಮ‌ ಸ್ಥಾನದಲ್ಲಿರುವುದು ಗಮನಾರ್ಹ.

ಅಪರಾಧ ಕೃತ್ಯಗಳನ್ನು ಪತ್ತೆಹಚ್ಚುವುದು, ಅಪರಾಧಿಗಳ ಬಂಧನ, ಕೃತ್ಯದ ಸಾಕ್ಷ್ಯ ಸಂಗ್ರಹಣೆ ಹೀಗೆ ನ್ಯಾಯಾಲಯದಿಂದ ಪ್ರಕರಣದ ತೀರ್ಪು ಬಂದು ಸಂತ್ರಸ್ತರಿಗೆ ನ್ಯಾಯ ದೊರಕುವ ವರೆಗೆ ವಿವಿಧ ಹಂತಗಳಲ್ಲಿ ಪೊಲೀಸ್‌ ಇಲಾಖೆಯು ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದಿದ್ದಾರೆ.

ಈ ಎಲ್ಲಾ ಕಾರ್ಯಗಳನ್ನು ನಾಡಿನ ಪೊಲೀಸ್‌ ಇಲಾಖೆ ದೇಶದ ಇತರೆ ಎಲ್ಲಾ ರಾಜ್ಯಗಳ ಪೊಲೀಸರಿಗಿಂತ ಅತ್ಯಂತ ದಕ್ಷವಾಗಿ, ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ ಎಂಬುದು ಶ್ಲಾಘನೀಯ. ನಾಗರಿಕರ ಪ್ರಾಣ ರಕ್ಷಣೆ, ಸಮಾಜಘಾತುಕರ ಹೆಡೆಮುರಿ ಕಟ್ಟಲು ಹಗಲಿರುಳೆನ್ನದೆ ಶ್ರಮಿಸುತ್ತಿರುವ ಕರ್ನಾಟಕ ಪೊಲೀಸ್‌ ಇಲಾಖೆಗೆ ಧನ್ಯವಾದಗಳು ತಿಳಿಸಿದ್ದಾರೆ.

Related Posts