ಧ್ಯಾನ ಮಾಡಲಿಕ್ಕಾಗಿ ವಿವೇಕಾನಂದ ಮಂಟಪ ತಲುಪಿದ ಪ್ರಧಾನಿ ನರೇಂದ್ರ ಮೋದಿ! » Dynamic Leader
September 21, 2024
ದೇಶ

ಧ್ಯಾನ ಮಾಡಲಿಕ್ಕಾಗಿ ವಿವೇಕಾನಂದ ಮಂಟಪ ತಲುಪಿದ ಪ್ರಧಾನಿ ನರೇಂದ್ರ ಮೋದಿ!

ನಾಗರಕೋಯಿಲ್: ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನ ಜೂನ್ 1 ರಂದು  ಪೂರ್ಣಗೊಳ್ಳಲಿದ್ದು, ಇಂದು (ಮೇ 30) ಅಂತಿಮ ಹಂತದ ಪ್ರಚಾರ ಕಾರ್ಯ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರು 3 ದಿನಗಳ ಭೇಟಿಗಾಗಿ ಕನ್ಯಾಕುಮಾರಿಗೆ ಬಂದಿದ್ದಾರೆ.

ರಸ್ತೆ ಮಾರ್ಗವಾಗಿ ಸರ್ಕಾರಿ ಅತಿಥಿಗೃಹಕ್ಕೆ ತೆರಳಿದ ಮೋದಿ, ಸ್ವಲ್ಪ ಸಮಯ ಅಲ್ಲಿ ವಿಶ್ರಾಂತಿ ಪಡೆದರು. ನಂತರ ಅಲ್ಲಿಂದ ಭಗವತಿ ಅಮ್ಮನ್ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಅವರಿಗೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಭಗವತಿ ಅಮ್ಮನವರ ಭಾವಚಿತ್ರವನ್ನು ಸ್ಮರಣಿಕೆಯಾಗಿ ನೀಡಲಾಯಿತು.

ಅಲ್ಲಿಂದ ಕಡಲತೀರಕ್ಕೆ ಹೊರಟ ಮೋದಿಯವರು ವಿಶೇಷ ದೋಣಿಯ ಮೂಲಕ ವಿವೇಕಾನಂದ ಬೆಟ್ಟೆಕ್ಕೆ ತೆರಳಿದರು. ಕನ್ಯಾಕುಮಾರಿಗೆ ಆಗಮಿಸಿರುವ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ತಮಿಳುನಾಡು ಬಿಜೆಪಿ ಸದಸ್ಯರು ಯಾರೂ ಬರಬಾದೆಂದು ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ.

ಪ್ರಧಾನಿಯವರ ವೈಯಕ್ತಿಕ ಧ್ಯಾನ ಕಾರ್ಯಕ್ರಮವನ್ನು ರಾಜಕೀಯ ಕಾರ್ಯಕ್ರಮವನ್ನಾಗಿ ಮಾಡಬಾರದೆಂದು ಹೇಳಿದೆ. ಇದೇ ವೇಳೆ ಕೇಂದ್ರದ ಮಾಜಿ ಸಚಿವ ಪೊನ್ ರಾಧಾಕೃಷ್ಣನ್ ಅತಿಥಿ ಗೃಹಕ್ಕೆ ಬಂದಿದ್ದರು. ಪೊಲೀಸರು ಅವರಿಗೆ ಅನುಮತಿ ನಿರಾಕರಿಸಿದರು. ಇದಾದ ಬಳಿಕ ಅವರು ಅಲ್ಲಿಂದ ವಾಪಸ್ ತೆರಳಿದರು.

Related Posts