ದೆಹಲಿ ಮದ್ಯ ನೀತಿ ಹಗರಣ: “ಇದು ಸಿಬಿಐ ಕಸ್ಟಡಿಯಲ್ಲ, ಬಿಜೆಪಿ ಕಸ್ಟಡಿ” – ಕವಿತಾ
ನವದೆಹಲಿ: ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತೆಲಂಗಾಣ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರನ್ನು ಜಾರಿ ಇಲಾಖೆ ಮಾರ್ಚ್ 15 ರಂದು ಬಂಧಿಸಿತ್ತು.
ನಂತರ ಜಾರಿ ಅಧಿಕಾರಿಗಳು ಅವರನ್ನು 10 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆಯ ನಂತರ ದೆಹಲಿಯ ತಿಹಾರ್ ಜೈಲಿನಲ್ಲಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಈ ಹಿನ್ನಲೆಯಲ್ಲಿ, ಸದರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕವಿತಾ ಅವರನ್ನು ಇಂದು ದೆಹಲಿ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.
ಆಗ ಅವರ ನ್ಯಾಯಾಂಗ ಬಂಧನವನ್ನು ಇದೇ ಏಪ್ರಿಲ್ 23 ರವರೆಗೆ ವಿಸ್ತರಿಸಿ ನ್ಯಾಯಾಲಯವು ಆದೇಶಿಸಿತು. ಏತ್ಮದ್ಯೆ, ನ್ಯಾಯಾಲಯದ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕಾವಿತಾ, “ಇದು ಸಿಬಿಐ ಕಸ್ಟಡಿಯಲ್ಲ, ಬಿಜೆಪಿ ಕಸ್ಟಡಿ. ಬಿಜೆಪಿ ಹೊರಗೆ ಏನು ಮಾತನಾಡುತ್ತಿದೆಯೋ ಅದನ್ನೇ ಸಿಬಿಐ ಒಳಗೆ ಕೇಳುತ್ತಿದೆ. 2 ವರ್ಷಗಳಿಂದ ಮತೆ ಮತ್ತೆ ಕೇಳುತ್ತಿದೆ, ಹೊಸದು ಏನು ಇಲ್ಲ”. ಎಂದು ಹೇಳಿದರು.