ಒಂದಷ್ಟು ಹೊಸ ಸುಳ್ಳುಗಳು ಮತ್ತು ಭಾವನಾತ್ಮಕ ವಿಚಾರಗಳು ಬಿಟ್ಟರೆ ಮೋದಿಯವರ ಬತ್ತಳಿಕೆಯಲ್ಲಿ ಯಾವ ಬಾಣಗಳೂ ಉಳಿದಿಲ್ಲ: ಸಿದ್ದರಾಮಯ್ಯ » Dynamic Leader
December 4, 2024
ರಾಜಕೀಯ

ಒಂದಷ್ಟು ಹೊಸ ಸುಳ್ಳುಗಳು ಮತ್ತು ಭಾವನಾತ್ಮಕ ವಿಚಾರಗಳು ಬಿಟ್ಟರೆ ಮೋದಿಯವರ ಬತ್ತಳಿಕೆಯಲ್ಲಿ ಯಾವ ಬಾಣಗಳೂ ಉಳಿದಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ಜನರ ಬದುಕಿಗೆ ಸಂಬಂಧಿಸಿದ ನಿರುದ್ಯೋಗ, ಬಡತನ, ಬೆಲೆಯೇರಿಕೆ, ಬರಪೀಡಿತರಿಗೆ ನೆರವು ಈ ಯಾವ ಪ್ರಶ್ನೆಗಳಿಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಉತ್ತರವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ

ಒಂದಷ್ಟು ಹೊಸ ಸುಳ್ಳುಗಳು ಮತ್ತು ಭಾವನಾತ್ಮಕ ವಿಚಾರಗಳು ಬಿಟ್ಟರೆ ಮೋದಿಯವರ ಬತ್ತಳಿಕೆಯಲ್ಲಿ ಯಾವ ಬಾಣಗಳೂ ಉಳಿದಿಲ್ಲ, ಕಳೆದ ಹತ್ತು ವರ್ಷಗಳಲ್ಲಿ ಅಭಿವೃದ್ಧಿ ಎಂಬುದು ಮೋದಿಯವರ ಆಡಳಿತದ ಹತ್ತಿರವೂ ಸುಳಿದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಕಾಲದ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಿದ್ದು, ಭಾರತದ ಭೂಭಾಗವನ್ನು ಚೀನಾಗೆ ಬಿಟ್ಟುಕೊಟ್ಟು ತಣ್ಣಗೆ ಕೂತಿದ್ದು, ಐಟಿ, ಇಡಿ ಮೂಲಕ ಬೆದರಿಸಿ ಉದ್ಯಮಿಗಳು, ಭ್ರಷ್ಟರಿಂದ ಸುಲಿಗೆ ಮಾಡಿದ್ದು, ನಾಲ್ಕಾರು ರಾಜ್ಯಗಳಲ್ಲಿ ಆಪರೇಷನ್ ಕಮಲ ಮಾಡಿ ಸರ್ಕಾರ ಬೀಳಿಸಿದ್ದು ಹೀಗೆ ಮೋದಿಯವರ ದುರಾಡಳಿತದ ಪಟ್ಟಿ ಮಾಡುತ್ತಾ ಹೋದರೆ ಅದಕ್ಕೆ ಕೊನೆಯೇ ಇಲ್ಲ ಎಂದು ಕಿಡಿಕಾರಿದ್ದಾರೆ.

Related Posts