ಚೀನಾ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ 'ಡರ್‌ಪೋಕ್‌' ಆಗುವುದ್ಯಾಕೆ? - ದಿನೇಶ್ ಗುಂಡೂರಾವ್ » Dynamic Leader
December 13, 2024
ರಾಜ್ಯ

ಚೀನಾ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಡರ್‌ಪೋಕ್‌’ ಆಗುವುದ್ಯಾಕೆ? – ದಿನೇಶ್ ಗುಂಡೂರಾವ್

ಬೆಂಗಳೂರು: ಶತಮಾನದ ಶ್ರೇಷ್ಠ ಸುಳ್ಳುಗಾರ ಪ್ರಧಾನಿ ಮೋದಿಯವರ ಬಾಯಲಿ ಬರುವ ಸುಳ್ಳುಗಳು‌ ಒಂದೇ ಎರಡೇ.? ಸುಳ್ಳನ್ನೇ ಹಾಸು ಹೊದ್ದು‌ ಮಲಗಿರುವ ಮೋದಿಯವರು ‘ಕಚ್ಚತೀವು’ ದ್ವೀಪವನ್ನು ಕಾಂಗ್ರೆಸ್ ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿದೆ ಎಂಬ ಹಸಿ ಸುಳ್ಳು ಹೇಳಿ ನಗೆಪಾಟಲಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ವಿಪರ್ಯಾಸವೆಂದರೆ ಪ್ರಧಾನಿಯವರು ಕಚ್ಚತೀವು ದ್ವೀಪದ ಬಗ್ಗೆ ಸುಳ್ಳು ಹೇಳಿಕೊಂಡು ಅಲೆದಾಡುತ್ತಿದ್ದರೆ, ಅತ್ತ ಚೀನಾ ಅರುಣಾಚಲ ಪ್ರದೇಶದ 30 ಊರುಗಳಿಗೆ ತನ್ನ ಹೆಸರು ನಾಮಕರಣ ಮಾಡಿಕೊಂಡಿದೆ. ಈ ಮೂಲಕ ಭಾರತದ ಸಾರ್ವಭೌಮತ್ವವನ್ನೇ ಪ್ರಶ್ನಿಸುತ್ತಿದೆ. ಸುಳ್ಳಿನ ಸರದಾರರು ಈ ಬಗ್ಗೆ ಏನು ಹೇಳುತ್ತಾರೆ ಎಂದು ಕಿಡಿ ಕಾರಿದ್ದಾರೆ.

ಚುನಾವಣೆಯ ಹೊತ್ತಿನಲ್ಲಿ ‘ಕಚ್ಚತೀವು’ ದ್ವೀಪದ ಪ್ರಸ್ತಾಪ ಮಾಡುತ್ತಿರುವ ಮೋದಿಯವರು, ಚೀನಾ ನಮ್ಮ ದೇಶದ ಭೂ ಭಾಗವನ್ನು ಅಕ್ರಮಿಸುತ್ತಿರುವ ಬಗ್ಗೆ ಎಂದಾದರೂ ಬಾಯಿ ಬಿಟ್ಟಿದಾರೆಯೇ.? ಕಳೆದ ಹತ್ತು‌ ವರ್ಷಗಳಿಂದ ಗಡಿ ವಿಚಾರದಲ್ಲಿ‌ ಚೀನಾ ಪದೇ ಪದೇ ಕ್ಯಾತೆ ತೆಗೆಯುತ್ತಿದೆ ಎಂದು ಹೇಳಿದ್ದಾರೆ.

ಆದರೆ ಚೀನಾದ ತಗಾದೆ ವಿರುದ್ಧ ಅಂಧಭಕ್ತರ ಪಾಲಿನ 56 ಇಂಚಿನ ಎದೆಯ ಶೂರ ಒಮ್ಮೆಯಾದರೂ ಮಾತನಾಡುವ ಧೈರ್ಯ ತೋರಿಸಿದ್ದಾರೆಯೇ? ಉತ್ತರ ಕುಮಾರನಂತೆ ವಿಪಕ್ಷಗಳ ಎದುರು ಪೌರುಷ ತೋರಿಸುವ ಮೋದಿಯವರು ಚೀನಾದ ವಿಚಾರದಲ್ಲಿ ‘ಡರ್‌ಪೋಕ್‌’ ಆಗುವುದ್ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಚೀನಾದ ವಿರುದ್ಧ ಪೌರುಷ ತೋರಿಸಲು‌ ಮೋದಿಯವರ 56 ಇಂಚಿನ ಎದೆಯಲ್ಲಿ ಧಮ್ ಇಲ್ಲವೆ? ಕೇಳಿದ್ದಾರೆ.

Related Posts