ಶಾಸಕ ರಾಜಾ ವೆಂಕಟ್ಟಪ್ಪ ನಾಯಕ ನಿಧನ: ಸಚಿವ ಪ್ರಿಯಾಂಕ್ ಖರ್ಗೆ ಸಂತಾಪ! » Dynamic Leader
December 13, 2024
ರಾಜ್ಯ

ಶಾಸಕ ರಾಜಾ ವೆಂಕಟ್ಟಪ್ಪ ನಾಯಕ ನಿಧನ: ಸಚಿವ ಪ್ರಿಯಾಂಕ್ ಖರ್ಗೆ ಸಂತಾಪ!

ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಸುರಪುರ ಕ್ಷೇತ್ರದ ಶಾಸಕರಾದ ರಾಜಾ ವೆಂಕಟ್ಟಪ್ಪ ನಾಯಕ ಅವರು ಇಂದು ಹೃದಯಘಾತದಿಂದ ನಿಧನ ಹೊಂದಿದ ಸುದ್ದಿ ತಿಳಿದು ಅತೀವ ದುಃಖವಾಗಿದೆ ಎಂದು ಐಟಿ ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

“ನಮ್ಮ ಕುಟುಂಬದ ಆತ್ಮೀಯರಾಗಿ, ಚಿಕ್ಕಂದಿನಿಂದ ನನ್ನ ಮಾರ್ಗದರ್ಶಕರಾಗಿದ್ದ ಅವರು ನಮ್ಮನ್ನು ಅಗಲಿರುವ ವಿಚಾರ ನಂಬಲು ಅತೀವ ಕಷ್ಟವಾಗುತ್ತಿದೆ.

ಬ್ರಿಟಿಷರೊಂದಿಗೆ ಹೋರಾಡಿ ವೀರ ಮರಣ ಹೊಂದಿದ ಸುರಪುರ ಸಂಸ್ಥಾನದ ದೊರೆ ನಾಲ್ಕನೇ ರಾಜಾ ವೆಂಕಟಪ್ಪ ನಾಯಕ ಅವರ ಕುಟುಂಬದಿಂದ ಬಂದಿದ್ದ ಜನರ ಪ್ರೀತಿಯ ನಾಯಕ ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ಬಹು ದೊಡ್ಡ ಶಕ್ತಿಯಾಗಿದ್ದರು.

ಅವರ ಈ ಅಕಾಲಿಕ ಅಗಲಿಕೆ ನಮ್ಮ ಭಾಗದ ಜನತೆಗೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಈ ಸಂಕಷ್ಟದ ಸಮಯದಲ್ಲಿ ಅವರ ಕುಟುಂಬ ಹಾಗೂ ಅಪಾರ ಅಭಿಮಾನಿ ವರ್ಗಕ್ಕೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ದೊರಕುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

Related Posts