ಫೆಬ್ರವರಿ 23 ರಂದು ತೆರೆಗೆ ಬರಲಿದೆ "ಕಪ್ಪು ಬಿಳುಪಿನ ನಡುವೆ" ಹಾರಾರ್ ಚಿತ್ರ! » Dynamic Leader
December 13, 2024
ಸಿನಿಮಾ

ಫೆಬ್ರವರಿ 23 ರಂದು ತೆರೆಗೆ ಬರಲಿದೆ “ಕಪ್ಪು ಬಿಳುಪಿನ ನಡುವೆ” ಹಾರಾರ್ ಚಿತ್ರ!

ಅರುಣ್ ಕುಮಾರ್ ಜಿ

ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ ಖ್ಯಾತ ನಟ ವಿಜಯ್ ಸೇತುಪತಿ

ಬೆಂಗಳೂರು: ವೃತ್ತಿಯಲ್ಲಿ ಪಾರಂಪರಿಕ ಆಯುರ್ವೇದ ವೈದ್ಯರಾಗಿರುವ ಧರ್ಮೇಂದ್ರ ಅವರು ನಿರ್ಮಿಸಿರುವ, ವಿಭಿನ್ನ ಕಥೆಯ ಹಾರಾರ್ ಚಿತ್ರ “ಕಪ್ಪು ಬಿಳುಪಿನ ನಡುವೆ” ಚಿತ್ರ ಇದೇ ಫೆಬ್ರವರಿ 23 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ವಸಂತ್ ವಿಷ್ಣು ಈ ಚಿತ್ರವನ್ನು ನಿರ್ದೇಶಿಸುವುದರೊಂದಿಗೆ, ನಾಯಕನಾಗೂ ಅಭಿನಯಿಸಿರುವ ಈ ಚಿತ್ರದ ಟ್ರೇಲರ್ ವೀಕ್ಷಿಸಿದ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ಕನ್ನಡ ಹಾಗೂ ತಮಿಳಿನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ.

“ಕಪ್ಪು ಬಿಳುಪಿನ ನಡುವೆ” ಹಾರಾರ್ ಚಿತ್ರವಾಗಿದ್ದು, “ಕಪ್ಪು ಬಿಳುಪನ್ನು” ಕತ್ತಲು, ಬೆಳುಕಿಗೆ ಹೋಲಿಸಬಹುದು. ಪಾಸಿಟಿವ್ ಹಾಗೂ ನೆಗಟಿವ್ ಎನರ್ಜಿ ಅಂತಲೂ ಎನ್ನಬಹುದು. ಯೂಟ್ಯೂಬರ್ ಗಳ ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ ಎಂದು ವಸಂತ್ ವಿಷ್ಣು ತಿಳಿಸಿದ್ದಾರೆ.

ವಸಂತ್ ವಿಷ್ಣು ಅವರಿಗೆ ನಾಯಕಿಯಾಗಿ ವಿದ್ಯಾಶ್ರೀ ಗೌಡ ನಟಿಸಿದ್ದಾರೆ.  ಬಿರಾದಾರ್, ಶರತ್ ಲೋಹಿತಾಶ್ವ, ಹಾಸ್ಯ ನಟ ಹರೀಶ್, ನವೀನ್ ರಘು, ಮಾಹೀನ್ ಭಾರದ್ವಾಜ್,  ತೇಜಸ್ವಿನಿ ಮುಂತಾದವರು ತಾರಾಬಳಗದಲ್ಲಿದ್ದಾರೆ. 

ಚಿತ್ರದಲ್ಲಿ ಮೂರು ಹಾಡುಗಳಿದ್ದು ಡಾ. ವಿ.ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ.  ರಿಶಾಲ್ ಸಾಯಿ ಸಂಗೀತ ನೀಡಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ಸಂತೋಷ್ ವೆಂಕಿ, ಶ್ರೀಧರ್ ಕಶ್ಯಪ್ ಹಾಡುಗಳನ್ನು ಹಾಡಿದ್ದಾರೆ. ಪ್ರವೀಣ್ ಶೆಟ್ಟಿ ಛಾಯಾಗ್ರಹಣ ಹಾಗೂ ಅಮಿತ್ ಜಾವಲ್ಕರ್ ಸಂಕಲನ ಈ ಚಿತ್ರಕ್ಕಿದೆ.

Related Posts