Gujarat Model: 2 ವರ್ಷದಲ್ಲಿ ಕೇವಲ 32 ಯುವಕರಿಗೆ ಮಾತ್ರವೇ ಉದ್ಯೋಗ ನೀಡಿದ ಗುಜರಾತ್ ಸರ್ಕಾರ! » Dynamic Leader
December 13, 2024
ದೇಶ

Gujarat Model: 2 ವರ್ಷದಲ್ಲಿ ಕೇವಲ 32 ಯುವಕರಿಗೆ ಮಾತ್ರವೇ ಉದ್ಯೋಗ ನೀಡಿದ ಗುಜರಾತ್ ಸರ್ಕಾರ!

ಗುಜರಾತ್ ನಲ್ಲಿ ಕಳೆದ 2 ವರ್ಷಗಳಲ್ಲಿ ಕೇವಲ 32 ಯುವಕರಿಗೆ ಮಾತ್ರವೇ ಉದ್ಯೋಗ ನೀಡಿರುವುದು ಆಘಾತಕಾರಿಯಾಗಿದೆ.

ಗುಜರಾತ್ ರಾಜ್ಯದಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕರು ‘ಬಿಜೆಪಿ ಆಡಳಿತದಲ್ಲಿ ಎಷ್ಟು ಯುವಕರಿಗೆ ಸರ್ಕಾರಿ ಉದ್ಯೋಗ ಸಿಕ್ಕಿದೆ’ ಎಂದು ಪ್ರಶ್ನೆ ಎತ್ತಿದರು.

ಇದಕ್ಕೆ ಕೈಗಾರಿಕಾ ಸಚಿವ ಬಲವಂತ್ ಸಿಂಗ್ ರಜಪೂತ್ ನೀಡಿರುವ ಪ್ರತಿಕ್ರಿಯೆ ಭಾರೀ ಆಘಾತವನ್ನುಂಟು ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ 29 ಜಿಲ್ಲೆಗಳಿಂದ 2,38,978 ಪದವೀಧರರು ಸರ್ಕಾರಿ ಉದ್ಯೋಗಗಳಿಗೆ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಆನಂದ್ ಜಿಲ್ಲೆಯಲ್ಲಿ 21,633, ವಡೋದರಾದಲ್ಲಿ 18,732 ಮತ್ತು ಅಹಮದಾಬಾದ್‌ನಲ್ಲಿ 16,400 ಜನರು ನೋಂದಾಯಿಸಿಕೊಂಡಿದ್ದಾರೆ.

ಕಳೆದ 2 ವರ್ಷಗಳಲ್ಲಿ ಇಷ್ಟು ಲಕ್ಷ ಮಂದಿ ಸರ್ಕಾರಿ ಉದ್ಯೋಗಕ್ಕೆ ಹೆಸರು ನೋಂದಾಯಿಸಿಕೊಂಡಿದ್ದು ಕೇವಲ 32 ಯುವಕರಿಗೆ ಮಾತ್ರ ಸರ್ಕಾರಿ ನೌಕರಿ ನೀಡಲಾಗಿದೆ’ ಎಂದು ಸಚಿವರು ವಿಧಾನಸಭೆಯಲ್ಲಿ ಘೋಷಣೆ ಮಾಡಿರುವುದು ಭಾರೀ ಆಘಾತವನ್ನುಂಟು ಮಾಡಿದೆ.

ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಬಲವಾದ ಆಕ್ಷೇಪಣೆಗಳನ್ನು ದಾಖಲಿಸುತ್ತಿದೆ. ‘ಗುಜರಾತ್ ಮಾದರಿ ಭಾರತಕ್ಕೆ ಮಾರ್ಗದರ್ಶಿಯಾಗಿದೆ ಎಂದು ಪ್ರಧಾನಿಯಿಂದ ಹಿಡಿದು ಬಿಜೆಪಿ ಕಾರ್ಯಕರ್ತರವರೆಗೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಹಿನ್ನಲೆಯಲ್ಲಿ, ಗುಜರಾತ್ ವಿಧಾನಸಭೆಯಲ್ಲಿಯೇ ಗುಜರಾತ್ ಮಾದರಿಯ ಯೋಗ್ಯತೆ ಏನು ಎಂಬುದು ಬಹಿರಂಗವಾಗಿದೆ’ ಎಂದು ಕಿಡಿಕಾರಿದ್ದಾರೆ.

Related Posts