ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ: ವೆಲ್‌ಫೇರ್ ಪಾರ್ಟಿ ಆರೋಪ! » Dynamic Leader
December 5, 2024
ರಾಜಕೀಯ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ: ವೆಲ್‌ಫೇರ್ ಪಾರ್ಟಿ ಆರೋಪ!

ಬೆಂಗಳೂರು: ಹಿಂದೂಗಳ ತೆರಿಗೆ ಹಣ ಹಿಂದುಗಳ ಅಭಿವೃದ್ಧಿ ಗೆ ಮಾತ್ರವೇ ಬಳಸಬೇಕು ಎನ್ನುವ ಮೂಲಕ ಬೆಳ್ತಂಗಡಿ ಶಾಸಕ  ಹರೀಶ್ ಪೂಂಜಾ ರವರು ತನ್ನ ಸಂಕುಚಿತ ಮನೋಭಾವವನ್ನು ಪ್ರದರ್ಶಿಸಿದ್ದಾರೆ ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಹರೀಶ್ ಪೂಂಜಾ ರವರು ಅಜ್ಞಾನದಿಂದ ಭಾರತೀಯರನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಪ್ರಜಾಪ್ರಭುತ್ವದ ಕುರಿತು ಪಾಠ ಮಾಡಿ ನಮ್ಮ ಸಂವಿಧಾನದ ಮಹತ್ವದ ಬಗ್ಗೆ ಅರ್ಥೈಸಬೇಕಾಗಿದೆ. ಭಾರತದ ಬಹುತ್ವದ ಸಂಸ್ಕೃತಿಗಳ ಭಾವೈಕ್ಯದ ಬಗೆಗೆ ಇರುವ ಅರಿವಿನ ಕೊರತೆಯೇ ಇಂತಹ ಹೇಳಿಕೆಗಳಿಗೆ ಕಾರಣವಾಗಿದೆ. ಕೋಮು ಅಮಲು ಮಾತ್ರ ತಲೆಯಲ್ಲಿ ತುಂಬಿ ಇತರರನ್ನು ತುಚ್ಚೀಕರಿಸಿ ಸಮಾಜ ಒಡೆಯುವಂತಹ ರಾಜಕಾರಣಿಗಳು ದೇಶಕ್ಕೆ ಅಪಾಯಕಾರಿ.

ಜನಪ್ರತಿನಿಧಿಗಳು ಪ್ರಜಾಪ್ರಭುತ್ವ ತತ್ವವನ್ನು ಅರ್ಥೈಸಿ, ಸಾಮರಸ್ಯದ ಸಹಬಾಳ್ವೆಯ ಭಾರತದ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದು ಅವರು ಹೇಳಿದ್ದಾರೆ.

Related Posts