ಅಂಬೇಡ್ಕರ್ ಸೇವಾ ಸಮಿತಿಯಿಂದ ಯಾದಗಿರಿ ತಾಲೂಕು ಮತ್ತು ನಗರ ಸಮಿತಿಗಳಿಗೆ ಪದಾಧಿಕಾರಿಗಳ ಆಯ್ಕೆ! » Dynamic Leader
December 13, 2024
ರಾಜ್ಯ

ಅಂಬೇಡ್ಕರ್ ಸೇವಾ ಸಮಿತಿಯಿಂದ ಯಾದಗಿರಿ ತಾಲೂಕು ಮತ್ತು ನಗರ ಸಮಿತಿಗಳಿಗೆ ಪದಾಧಿಕಾರಿಗಳ ಆಯ್ಕೆ!

ಗಿರೀಶ್ ಕುಮಾರ, ಯಾದಗಿರಿ

ಯಾದಗಿರಿ: ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ (ರಿ) ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ನೆನ್ನೆ ಜಿಲ್ಲಾ ಸಮಿತಿ, ತಾಲೂಕ ಸಮಿತಿ ಹಾಗೂ ನಗರ ಸಮಿತಿಗಳ ಪದಾಧಿಕಾರಿಗಳ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷರಾದ ಡಾ.ಕೆ.ಎಂ.ಸಂದೇಶ್ ರವರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷರಾದ ರಾಹುಲ್ ಕೊಲ್ಲೂರಕರ್ ಅವರ ಮುಂದಾಳುತ್ವದಲ್ಲಿ ಅಂಬೇಡ್ಕರ್ ಭವನ ಕೋಟೆಗಾರವಾಡದಲ್ಲಿ ಹಮ್ಮಿಕೊಳ್ಳಲಾಗಿತ್ತು.

ತಾಲೂಕ ಸಮಿತಿಯ ಅಧ್ಯಕ್ಷರಾಗಿ ಯಾದಗಿರಿ ರಾಮು ಗಣಪುರ, ಉಪಾಧ್ಯಕ್ಷರಾಗಿ ಕುಮಾರ್ ಅರಿಕೇರಿ, ಸಹ ಕಾರ್ಯದರ್ಶಿಯಾಗಿ ಮಂಜು ಕುಲೂರ್, ಕಾರ್ಯದರ್ಶಿಯಾಗಿ ದಶರಥ, ಸಹ ಕಾರ್ಯದರ್ಶಿಯಾಗಿ ರಾಧಾಕೃಷ್ಣ, ಖಜಾಂಚಿಯಾಗಿ ರಾಹುಲ್ ಅರಿಕೇರಿ ಹಾಗೂ ಸಮಿತಿ ಸದಸ್ಯರುಗಳಾಗಿ ರಾಜು ಮತ್ತು ಪುಟ್ಟು  ಅವರನ್ನು ಆಯ್ಕೆ ಮಾಡಲಾಯಿತ್ತು ಅದೇ ರೀತಿ, ನಗರ ಸಮಿತಿ ಅಧ್ಯಕ್ಷರಾಗಿ ಯಾದಗಿರಿ ಗಿರೀಶ್ ವಾಡಗೇರಿ, ಉಪಾಧ್ಯಕ್ಷರಾಗಿ ಬಾಲು ಹಳ್ಳಿ, ಕಾರ್ಯದರ್ಶಿಯಾಗಿ ಅನಿಲ್ ಆಯ್ಕೆ ಮಾಡಲಾಗಿದೆ.

ಆಯ್ಕೆಯಾದ ಸಮಿತಿಯ ನಾಯಕರುಗಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ರಾಹುಲ್ ಕೊಲ್ಲೂರಕರ್ ಅವರು,  “ಪ್ರತಿಯೊಬ್ಬ ನಾಯಕರೂ ಸಾಮಾಜಿಕ ಕಳಕಳಿಯಿಂದ ಶೋಷಿತರಿಗೆ, ದಿನಲಿತರಿಗೆ, ಬಹುಜನರ ಏಳಿಗೆಗಾಗಿ ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಹೋರಾಡುತೀರಿ ಎಂದು ಆಶಿಸುತ್ತೇನೆ. ನಿಮ್ಮೆಲ್ಲರಿಗೂ ಇದರಲ್ಲಿ ಯಶಸ್ಸು ದೊರಕಿ, ಸಂಘಟನೆಗೆ ಕೀರ್ತಿ ತರುತ್ತೀರಿ ಎಂದು ಶುಭ ಹಾರೈಸುತ್ತೆನೆ” ಎಂದು ಹೇಳಿದರು.

Related Posts