"ಕಾಣದ ಶಕ್ತಿ" ಚಿತ್ರ ತಂಡಕ್ಕೆ ಶುಭ ಆರೈಸಿದ ಗ್ರಾಮಸ್ಥರು! » Dynamic Leader
November 11, 2024
ಸಿನಿಮಾ

“ಕಾಣದ ಶಕ್ತಿ” ಚಿತ್ರ ತಂಡಕ್ಕೆ ಶುಭ ಆರೈಸಿದ ಗ್ರಾಮಸ್ಥರು!

ಗಿರೀಶ್ ಕುಮಾರ ಯಾದಗಿರಿ

ಯಾದಗಿರಿ: ಇಂದು ಯಾದಗಿರಿಯಲ್ಲಿ “ಕಾಣದ ಶಕ್ತಿ” ಚಿತ್ರ ತಂಡಕ್ಕೆ ಡಾ. ಬಿ.ಆರ್.ಅಂಬೇಡ್ಕರ್ ನಗರದ ಎಲ್ಲಾ ಹಿರಿಯರು ಹಾಗೂ ಅಭಿಮಾನಿಗಳು ಚಿತ್ರ ತಂಡಕ್ಕೆ ಶುಭ ಆರೈಸಿ ಸನ್ಮಾನಿಸಿದರು.

ನಿವೃತ್ತ ವೈದ್ಯಾಧಿಕಾರಿಗಳಾದ ಡಾ.ಭಗವಂತ ಅನವಾರ ಅವರು ಮಾತನಾಡಿ, “ಕಾಣದ ಶಕ್ತಿ” ಚಿತ್ರತಂಡದ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಚಿತ್ರವು ಯಶಸ್ಸು ಕಾಣಲೆಂದು ಶುಭ ಆರೈಸಿದರು. ಅದೇ ರೀತಿ ಕಲಾವಿದರ ತಂಡಕ್ಕೆ ಶುಭ ಆರೈಸಿ ಮಾತನಾಡಿದ ಶರಣು ನಾಟೇಕರ್ ರವರು, ಚಿತ್ರ ತಂಡದಲ್ಲಿ ಎಲ್ಲಾ ಉದಯೋನ್ಮುಖ ನಟರಿದ್ದಾರೆ ಅವರೆಲ್ಲರಿಗೂ ಭವಿಷ್ಯದಲ್ಲಿ ಒಳ್ಳೆಯ ಅವಕಾಶ ದೊರೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಹೊಸ ಪ್ರತಿಭೆಯ ನಿರ್ಮಾಪಕರಾದ ಶೃತಿ ಎಂ ಹಾಗೂ ಎಸ್.ಆರ್.ಸತೀಶ್ ಬಾಬು, ಯುವ ನಟರಾದ ಮಲ್ಲಿಕಾರ್ಜುನ, ಅವಿನಾಶ್ ಅನ್ವರ್, ರೆಡ್ಡಿ ಮುಂತಾದವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸುರೇಶ್ ಬೊಮ್ಮನ, ಕೈಲಾಸ ಅನವಾರ, ಗುರುಲಿಂಗಪ್ಪ ಕಟ್ಟಿಮನಿ, ರಮೇಶ್ ಸುಂಗಲಕರ್, ನರೇಂದ್ರ ಅನವಾರ, ಚಂದ್ರಕಾಂತ ಚಲುವಾದಿ, ಮಲ್ಲಿಕಾರ್ಜುನ ಬೊಮ್ಮನ, ಮಲ್ಲಿಕಾರ್ಜುನ ಈಟೆ, ಆನಂದ್ ಚಟ್ಟೇರಕರ್, ಶಿವುಕುಮಾರ ಬೆಳಗುಂದಿ, ಗೀರಿಶಕುಮಾರ ಚಟ್ಟೇರಕರ್, ಮಲ್ಲಪ್ಪ ಹುಲಕಲ್ ಇನ್ನಿತರರು ಭಾಗವಹಿಸಿ ಚಿತ್ರತಂಡಕ್ಕೆ ಶುಭಾ ಹಾರೈಸಿದರು.

Related Posts