ಹಾನಗಲ್ ಅತ್ಯಾಚಾರ ಪ್ರಕರಣ: ಅನೈತಿಕ ಪೋಲಿಸ್ ಗಿರಿಯನ್ನು ಮಟ್ಟ ಹಾಕಲು ವೆಲ್‌ಫೇರ್ ಪಾರ್ಟಿ ಒತ್ತಾಯ! » Dynamic Leader
December 13, 2024
ಕ್ರೈಂ ರಿಪೋರ್ಟ್ಸ್

ಹಾನಗಲ್ ಅತ್ಯಾಚಾರ ಪ್ರಕರಣ: ಅನೈತಿಕ ಪೋಲಿಸ್ ಗಿರಿಯನ್ನು ಮಟ್ಟ ಹಾಕಲು ವೆಲ್‌ಫೇರ್ ಪಾರ್ಟಿ ಒತ್ತಾಯ!

ಬೆಂಗಳೂರು: ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ನಡೆದ ನೈತಿಕ ಪೋಲಿಸ್ ಗಿರಿ ಹಾಗೂ ಸಾಮೂಹಿಕ ಅತ್ಯಾಚಾರ ಖಂಡನೀಯ. ಮನದಲ್ಲಿ ಕೋಮು ವಿಷ ತುಂಬಿಕೊಂಡು ಸಂವಿಧಾನ ತತ್ವಕ್ಕೇ ಅಪಚಾರಗೈದು ಕಾನೂನನ್ನು ಕೈಗೆತ್ತಿಕೊಳ್ಳುವ ಇಂತಹ ಪ್ರಕ್ರಿಯೆಯನ್ನು ಸರಕಾರ ಮಟ್ಟ ಹಾಕಲೇಬೇಕು ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

“ಭವಿಷ್ಯದಲ್ಲಿ ಇದು ತುಂಬಾ ಅಪಾಯಕಾರಿ. ಕಾನೂನಿನ ಬಗ್ಗೆ ಜನರಿಗೆ ಭಯ ಹೊರಟು ಹೋಗಿರುವುದೇ ಇಂತಹ ಪ್ರಕ್ರಿಯೆಗೆ ಕಾರಣವಾಗಿದೆ. ಸಾಮೂಹಿಕ ಅತ್ಯಾಚಾರ ಗೈದ ಪ್ರಕರಣ ಸಾಮಾನ್ಯವಲ್ಲ. ‘ಇದುವರೆಗೆ ಬಂದಿತರಾದವರ ಪೈಕಿ ಇಬ್ಬರು ಆ ಪ್ರಕರಣದಲ್ಲಿ ಭಾಗಿಯಾದವರಲ್ಲ; ನನಗೆ ಆ ಇಬ್ಬರ ಫೋಟೋ ಮಾತ್ರ ತೋರಿಸಿದ್ದು ಅವರೀರ್ವರೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿಲ್ಲ’ ಎಂಬ ಸಂತ್ರಸ್ತೆಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಹೇಳಿದ್ದಾರೆ.

“ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ಯಾವುದೇ ರಾಜಕೀಯ ಮಾಡದೆ ಪ್ರಾಮಾಣಿಕವಾಗಿ ತನಿಖೆ ನಡೆಸಿ ಸಂತ್ರಸ್ತೆಗೆ ನ್ಯಾಯ ದೊರಕಿಸಿ ಕೊಡಬೇಕಾದುದು ಸರ್ಕಾರದ ಕರ್ತವ್ಯವಾಗಿದೆ. ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವೂ ಗಮನಾರ್ಹ ಎಂದು ಹೇಳಿದ್ದಾರೆ.

Related Posts