ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಮಾಲ್ಡೀವ್ಸ್ ನ ಮೂವರು ಸಚಿವರ ವಜಾ! » Dynamic Leader
October 4, 2024
ವಿದೇಶ

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಮಾಲ್ಡೀವ್ಸ್ ನ ಮೂವರು ಸಚಿವರ ವಜಾ!

ಮಾಲೆ: ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಸಚಿವರಾದ ಮರಿಯಮ್ ಶಿಯುನಾ, ಮಲ್ಶಾ ಷರೀಫ್ ಮತ್ತು ಮಸೂಮ್ ಮಜೀದ್ ಅವರನ್ನು ಸಂಪುಟದಿಂದ ವಜಾಗೊಳಿಸಿರುವುದಾಗಿ ಮಾಲ್ಡೀವ್ಸ್ ಸರ್ಕಾರ ಘೋಷಿಸಿದೆ.

ಪ್ರಧಾನಿ ಮೋದಿ ಅವರು ಲಕ್ಷದ್ವೀಪದಲ್ಲಿ ಕಳೆದ ಕ್ಷಣಗಳ ವೀಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಮೋದಿ ಅವರ ಭೇಟಿಯ ಕುರಿತು ಸಚಿವರಾದ ಮರಿಯಮ್ ಶಿಯುನಾ, ಮಲ್ಶಾ ಷರೀಫ್ ಮತ್ತು ಮಸೂಮ್ ಮಜೀದ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.

‘ಜೀವರಕ್ಷಕ ಸೂಟ್ ಧರಿಸಿರುವ ಮೋದಿ ಇಸ್ರೇಲ್‌ನ ಕೈಗೊಂಬೆ’ ಎಂದು ಮರಿಯಮ್ ಶಿಯುನಾ ಹೇಳಿದ್ದರು. ಸಚಿವರ ಹೇಳಿಕೆ ಕುರಿತು ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಸಚಿವರನ್ನು ವಜಾಗೊಳಿಸಲಾಗಿದೆ.

“ವಿದೇಶಿ ನಾಯಕರು ಮತ್ತು ಗಣ್ಯರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಅವಹೇಳನಕಾರಿ ಕಾಮೆಂಟ್‌ಗಳ ಬಗ್ಗೆ ಮಾಲ್ಡೀವ್ಸ್ ಸರ್ಕಾರಕ್ಕೆ ತಿಳಿದಿದೆ. ಈ ಅಭಿಪ್ರಾಯಗಳು ವೈಯಕ್ತಿಕ ಮತ್ತು ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ. ಅಲ್ಲದೆ, ಇಂತಹ ಕೀಳುಮಟ್ಟದ ಕಾಮೆಂಟ್‌ಗಳನ್ನು ವ್ಯಕ್ತಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳು ಹಿಂಜರಿಯುವುದಿಲ್ಲ” ಎಂದು ಮಾಲ್ಡೀವ್ಸ್ ಸರ್ಕಾರ ಹೇಳಿದೆ.

ಪ್ರಧಾನಿ ಮೋದಿಯವರು ಲಕ್ಷದ್ವೀಪಕ್ಕೆ ಭೇಟಿ ಭೇಟಿ ನೀಡಿದ್ದನ್ನುಮಾಲ್ಡೀವ್ಸ್ ಸಚಿವೆ ಮರಿಯಮ್ ಶಿಯುನಾ ಮತ್ತು ಆಡಳಿತ ಪಕ್ಷದ ಅನೇಕ ಸದಸ್ಯರು ಅವರನ್ನು ಅಪಹಾಸ್ಯ ಮಾಡಿರುವುದನ್ನು ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಖಂಡಿಸಿದ್ದಾರೆ. ಸಚಿವೆ ಮರಿಯಮ್ ಶಿಯುನಾ ಬಳಸಿದ ಭಾಷೆ “ಆಘಾತಕಾರಿ” ಮಾಲ್ಡೀವ್ಸ್‌ನ ಭದ್ರತೆ ಮತ್ತು ಅಭಿವೃದ್ಧಿಗೆ ಭಾರತವು “ಆಪ್ತ ಪಾಲುದಾರ” ಎಂದು ಅವರು ಹೇಳಿದರು.

Related Posts