ಕ್ರಿಮಿನಲ್ ಆರೋಪಿಯ ಪರ ಬಿಜೆಪಿಯು ಪ್ರತಿಭಟಿಸುವುದರ ಹಿಂದೆ ರಾಜಕೀಯ ಲಾಭದ ಹುನ್ನಾರವಿದೆ: ವೆಲ್‌ಫೇರ್ ಪಾರ್ಟಿ » Dynamic Leader
October 11, 2024
ರಾಜಕೀಯ

ಕ್ರಿಮಿನಲ್ ಆರೋಪಿಯ ಪರ ಬಿಜೆಪಿಯು ಪ್ರತಿಭಟಿಸುವುದರ ಹಿಂದೆ ರಾಜಕೀಯ ಲಾಭದ ಹುನ್ನಾರವಿದೆ: ವೆಲ್‌ಫೇರ್ ಪಾರ್ಟಿ

ಬೆಂಗಳೂರು: ಶ್ರೀಕಾಂತ್ ಪೂಜಾರಿ ಪರ ಬಿಜೆಪಿ ಬೀದಿಗಿಳಿದಿರುವುದರಲ್ಲಿ ಕೋಮು ಬಣ್ಣ ಲೇಪಿಸಿ ಜನರನ್ನು ಪ್ರಚೋದಿಸಿ ರಾಜಕೀಯ ಲಾಭಗಳಿಸುವ ಹುನ್ನಾರವಿದೆ ಎಂದು ವೆಲ್‌ಫೇರ್ ಪಾರ್ಟಿಯ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾರ್ಯಾಚರಿಸಿ ಇಲ್ಲಿನ ಬಡವರ, ರೈತರ, ನೊಂದವರ ಸಮಸ್ಯೆಗಳ ಪರವಾಗಿ ಹೋರಾಡಬೇಕಿದ್ದ ಬಿಜೆಪಿ, ಓರ್ವ 16 ಕ್ರಿಮಿನಲ್ ಮೊಕದ್ದಮೆಗಳಲ್ಲಿ ಸಿಲುಕಿರುವ ಆರೋಪಿಯ ಪರವಾಗಿ ಅಲ್ಲಲ್ಲಿ ಪ್ರತಿಭಟನೆ ನಡೆಸುವಂತಹ ಕಾರ್ಯಕ್ಕೆ ಇಳಿದಿರುವುದು ವಿಪರ್ಯಾಸ.

ಕರಸೇವಕರು ಎಂದು ಹೇಳಿಕೊಂಡು ಪ್ರಕರಣವನ್ನುಗಂಭೀರಗೊಳಿಸಿ ಪ್ರಚೋದಿಸುವ ಮೂಲಕ ಲೋಕಸಭಾ ಚುನಾವಣಾ ದಿನಗಳು ಸಮೀಪಿಸುತ್ತಿದ್ದಂತೆ ರಾಜಕೀಯ ಲಾಭ ಗಳಿಸುವ ಯತ್ನದಲ್ಲಿ ಬಿಜೆಪಿ ತೊಡಗಿದೆ. ಇಷ್ಟಕ್ಕೂ ಈ ಪ್ರತಿಭಟನಾಕಾರರು ತಾವು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಒಮ್ಮೆ ಸ್ವಯಂ ಆತ್ಮಾವಲೋಕನ ನಡೆಸಬೇಕಾಗಿದೆ.

ರಾಜ್ಯದ ಬಿಜೆಪಿ ನಾಯಕರು ಈ ಆರೋಪಿಯ ಪರವಾಗಿ ಬೀದಿಗಿಳಿದಿರುವುದರಲ್ಲಿನ ಪ್ರಾಮಾಣಿಕತೆಯ ಬಗ್ಗೆ ಜನರಲ್ಲಿ ಅನುಮಾನವಿದೆ. ಇಲ್ಲಿನ ರೈತರ ಬಡ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಇಷ್ಟೊಂದು ಮಹತ್ವ ನೀಡಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು ಎಂದು ಅವರು ಹೇಳಿದ್ದಾರೆ.

Related Posts