ಮಾಜಿ ಗೆಳತಿಯನ್ನು ಕ್ರೂರವಾಗಿ ಹತ್ಯೆ ಮಾಡಿದ ಅಪರಾಧಿಯನ್ನು ಬಿಡುಗಡೆ ಮಾಡಿದ ರಷ್ಯಾ ಅಧ್ಯಕ್ಷ: ಯಾಕೆ ಗೊತ್ತಾ? » Dynamic Leader
December 5, 2024
ಕ್ರೈಂ ರಿಪೋರ್ಟ್ಸ್ ವಿದೇಶ

ಮಾಜಿ ಗೆಳತಿಯನ್ನು ಕ್ರೂರವಾಗಿ ಹತ್ಯೆ ಮಾಡಿದ ಅಪರಾಧಿಯನ್ನು ಬಿಡುಗಡೆ ಮಾಡಿದ ರಷ್ಯಾ ಅಧ್ಯಕ್ಷ: ಯಾಕೆ ಗೊತ್ತಾ?

ಮಾಸ್ಕೋ: ರಷ್ಯಾದ 23 ವರ್ಷದ ವೆರಾ ಪೆಖ್ತೆಲೆವಾ (Vera Pekhteleva) ಎಂಬ ಮಹಿಳೆ, ವ್ಲಾಡಿಸ್ಲಾವ್ ಕಾನ್ಯಸ್ (Vladislav Kanyus) ಜೊತೆಗಿನ ಸಂಬಂಧವನ್ನು ಮುರಿದುಕೊಂಡರು. ಅದರಿಂದ ಉಂಟಾದ ಸಮಸ್ಯೆಯಿಂದ ಕಾನ್ಯಸ್ ವೆರಾಳನ್ನು ಬರ್ಬರವಾಗಿ ಹತ್ಯೆ ಮಾಡಿದನು. ಮೂರೂವರೆ ಗಂಟೆಗಳ ಕಾಲ ಅತ್ಯಾಚಾರ ಮತ್ತು ಚಿತ್ರಹಿಂಸೆ ನೀಡಿದ ನಂತರ, ಆಕೆಯನ್ನು 111 ಬಾರಿ ಪದೇ ಪದೇ ಇರಿದು ಕಬ್ಬಿಣದ ಕೇಬಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿನು.

ವೆರಾಳ ಕಿರುಚಾಟ ಕೇಳಿದ ನೆರೆಹೊರೆಯವರು ಪೊಲೀಸರಿಗೆ 7 ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಪೊಲೀಸರು ಸ್ಥಳಕ್ಕೆ ತಲುಪಿದಾಗ ವೆರಾ ಶವವಾಗಿ ಪತ್ತೆಯಾಗಿದ್ದರು. ಪೊಲೀಸರು ಕಾನ್ಯಸ್ ನನ್ನು ಬಂಧಿಸಿದರು. ವಿಚಾರಣೆಯ ಕೊನೆಯಲ್ಲಿ, ಕಾನ್ಯಸ್ ಗೆ ಕನಿಷ್ಠ 17 ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಯಿತು.

ಈ ಹಿನ್ನಲೆಯಲ್ಲಿ, ಅಪರಾಧಿ ಕಾನ್ಯಸ್ ಉಕ್ರೇನ್‌ನಲ್ಲಿ ಯುದ್ಧಕ್ಕೆ ಸೇರಲು ನಿರ್ಧರಿಸಿದ ಕಾರಣಕ್ಕೆ ರಷ್ಯಾದ ಅಧ್ಯಕ್ಷ ಪುಟಿನ್ ಅವನನ್ನು ಕ್ಷಮಾದಾನದ ಮೇಲೆ ಬಿಡುಗಡೆ ಮಾಡಿದ್ದಾರೆ. ಒಟ್ಟು 17 ವರ್ಷಗಳ ಶಿಕ್ಷೆಯ ಅವಧಿಯಲ್ಲಿ 1 ವರ್ಷವೂ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಆತನನ್ನು ಬಿಡುಗಡೆ ಮಾಡಲಾಗಿದೆ.

ವೆರಾ ಅವರ ತಾಯಿ ಒಕ್ಸಾನಾ, ಮಿಲಿಟರಿ ಸಮವಸ್ತ್ರದಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತವಾದ ಕಾನ್ಯಸ್ ಅವರ ಫೋಟೋವನ್ನು ನೋಡಿ ವಿಚಲಿತರಾದರು. ತನ್ನ ಮಗಳ ಕೊಲೆಗಾರನನ್ನು ಕ್ಷಮಿಸಿದ್ದಕ್ಕಾಗಿ ಪುಟಿನ್ ಅವರನ್ನು ದೂಷಿಸಿದರು.

“ಕ್ರೂರವಾಗಿ ಹತ್ಯೆ ಮಾಡಿದವನ ಬಳಿ ರಷ್ಯಾವನ್ನು ರಕ್ಷಿಸಲು ನೀವು ಹೇಗೆ ಆಯುಧವನ್ನು ನೀಡಬಹುದು? ಇದು ನನಗೆ ಹೊಡೆತವಾಗಿದೆ. ನನ್ನ ಮಗು ಅವಳ ಸಮಾಧಿಯಲ್ಲಿ ಕೊಳೆಯುತ್ತಿದ್ದಾಳೆ; ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ, ನನ್ನ ಜೀವನದಲ್ಲಿ ಇನ್ನು ಭರವಸೆ ಇಲ್ಲ.

ನಾನು ಬದುಕುವುದಿಲ್ಲ; ನಾನು ಜೀವಂತವಿದ್ದರೂ ಇಲ್ಲದಂತೆ ಇದ್ದೇನೆ. ಅಂತಹ ಘಟನೆ ನನ್ನನ್ನು ಸಂಪೂರ್ಣವಾಗಿ ಬೆಚ್ಚಿಬೀಳಿಸಿದೆ. ನಾನು ತುಂಬಾ ಬಲಶಾಲಿ; ಆದರೆ ನಮ್ಮ ಸರ್ಕಾರದ ಈ ಅನ್ಯಾಯ ನನ್ನನ್ನು ಜೀವನದ ಕೊನೆಯ ಹಂತಕ್ಕೆ ತಳ್ಳೀದೆ. ಮುಂದೇನು ಮಾಡಬೇಕು ಎಂದು ತಿಳಿಯದ ಸ್ಥಿತಿಯಲ್ಲಿ ಇದ್ದೇನೆ”  ಎಂದು ಅವರು ಅಳಲು ತೋಡಿಕೊಂಡರು.

ಉಕ್ರೇನ್‌ನ ಗಡಿಯಲ್ಲಿರುವ ದಕ್ಷಿಣ ರಷ್ಯಾದಲ್ಲಿರುವ ರೋಸ್ಟೋವ್‌ಗೆ ಕಾನ್ಯಸ್ ನನ್ನು ವರ್ಗಾಯಿಸಲಾಗಿದೆ ಎಂದು ಜೈಲು ಅಧಿಕಾರಿಗಳು ಬುಧವಾರ ದೃಢಪಡಿಸಿದ್ದಾರೆ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಅಲಿಯೋನಾ ಪೊಪೊವಾ (Alyona Popova) ಹೇಳಿದ್ದಾರೆ. ಮತ್ತು ಅವರು ನವೆಂಬರ್ 3 ರಂದು ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯ ಪತ್ರವನ್ನೂ ಹಂಚಿಕೊಂಡಿದ್ದಾರೆ. ಅದರಲ್ಲಿ, ಕಾನ್ಯಸ್ ಗೆ ಕ್ಷಮಾದಾನ ನೀಡಲಾಗಿದೆ ಎಂದು, ಅವರ ಶಿಕ್ಷೆಯನ್ನು ಏಪ್ರಿಲ್ 27 ರಂದು ಅಧ್ಯಕ್ಷರ ಆದೇಶದ ಮೇರೆಗೆ ತೆಗೆದುಹಾಕಲಾಗಿದೆ ಎಂದು ತಿಳಿಸಲಾಗಿತ್ತು.

ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅಧ್ಯಕ್ಷರ ನೀತಿಯನ್ನು ಬೆಂಬಲಿಸಿದ್ದಾರೆ. “ಉಕ್ರೇನ್‌ನಲ್ಲಿ ಯುದ್ಧ ಮಾಡಲು ಕಳುಹಿಸಲಾಗಿರುವ ರಷ್ಯಾದ ಕೈದಿಗಳು ಅವರ ಅಪರಾಧಗಳಿಗಾಗಿ ರಕ್ತದಿಂದ ಪ್ರಾಯಶ್ಚಿತ್ತ ಮಾಡುತ್ತಿದ್ದಾರೆ” ಎಂದು ಪೆಸ್ಕೋವ್ ಹೇಳಿದ್ದಾರೆ.

Related Posts