ಅಡ್ವಾಣಿ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ: ಇಂದು ಎಲ್.ಕೆ.ಅಡ್ವಾಣಿ ಅವರಿಗೆ 96ನೇ ಹುಟ್ಟು ಹಬ್ಬ! » Dynamic Leader
January 22, 2025
ದೇಶ

ಅಡ್ವಾಣಿ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ: ಇಂದು ಎಲ್.ಕೆ.ಅಡ್ವಾಣಿ ಅವರಿಗೆ 96ನೇ ಹುಟ್ಟು ಹಬ್ಬ!

ನವದೆಹಲಿ: ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರ 96ನೇ ಹುಟ್ಟುಹಬ್ಬವನ್ನು ಇಂದು (ನ.08) ನವದೆಹಲಿಯ ಅವರ ಸ್ವಗೃಹದಲ್ಲಿ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಖುದ್ದು ಭೇಟಿ ಮಾಡಿ, ಹೂಗುಚ್ಛ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಅಡ್ವಾಣಿ ಅವರ ಆರೋಗ್ಯವನ್ನೂ ಮೋದಿ ವಿಚಾರಿಸಿದರು. ಪ್ರಧಾನಿ ಮೋದಿ ಜೊತೆಗೆ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಜೆ.ಪಿ ನಡ್ದಾ ಕೂಡ ಅಡ್ವಾಣಿ ಮನೆಗೆ ತೆರಳಿ ಅಭಿನಂದಿಸಿದ್ದಾರೆ.

Related Posts