ನಾಡಪ್ರಭು ಕೆಂಪೇಗೌಡರ ಉತ್ಸವ: ಹೊರನಾಡಿನ ಕನ್ನಡಿಗರು ತಾಯ್ನಾಡಿನ ಮೇಲೆ ಇರಿಸಿರುವ ಪ್ರೀತಿ, ಅಭಿಮಾನ ಅವರ್ಣನೀಯ: ಹೆಚ್.ಡಿ.ಕುಮಾರಸ್ವಾಮಿ » Dynamic Leader
December 5, 2024
ವಿದೇಶ

ನಾಡಪ್ರಭು ಕೆಂಪೇಗೌಡರ ಉತ್ಸವ: ಹೊರನಾಡಿನ ಕನ್ನಡಿಗರು ತಾಯ್ನಾಡಿನ ಮೇಲೆ ಇರಿಸಿರುವ ಪ್ರೀತಿ, ಅಭಿಮಾನ ಅವರ್ಣನೀಯ: ಹೆಚ್.ಡಿ.ಕುಮಾರಸ್ವಾಮಿ

ದುಬೈ: ಶೇಕ್ ರಶೀದ್ ಆಡಿಟೋರಿಯಂನಲ್ಲಿ ಯುಎಇ ಒಕ್ಕಲಿಗರ ಸಂಘ ಇಂದು ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಉತ್ಸವವನ್ನು ಶ್ರೀ.ಆದಿಚುಂಚನಗಿರಿ ಮಹಸಂಸ್ಥಾನದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿ ಮಾತನಾಡಿದರು.

“ಹೊರನಾಡಿನ ಕನ್ನಡಿಗರು ತಾಯ್ನಾಡಿನ ಮೇಲೆ ಇರಿಸಿರುವ ಪ್ರೀತಿ, ಅಭಿಮಾನ ಅವರ್ಣನೀಯ. ನಾಡಪ್ರಭುಗಳ ಸ್ಫೂರ್ತಿ, ಅದರ್ಶದೊಂದಿಗೆ ಬದುಕು ಕಟ್ಟಿಕೊಂಡು ಸಮಾಜಮುಖಿಗಳಾಗಿ ಹೆಜ್ಜೆ ಹಾಕುತ್ತಿರುವ ಅವರೆಲ್ಲರೂ ಅಭಿನಂದನೀಯರು. ಅವರ ಜತೆಗೂಡಿ ನಾಡಪ್ರಭುಗಳನ್ನು ಸ್ಮರಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ” ಎಂದು ಹೇಳಿದರು.

ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್, ಶಾಸಕರಾದ ಸಮೃದ್ಧಿ ಮಂಜುನಾಥ್, ಸ್ವರೂಪ್ ಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಯುಎಇ ಒಕ್ಕಲಿಗರ ಸಂಘದ ಅಧ್ಯಕ್ಷೆ ರಶ್ಮಿ ನಂದಕಿಶೋರ್, ಉಪಾಧ್ಯಕ್ಷ ಹರೀಶ್ ಕೋಡಿ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು, ಕನ್ನಡ ಬಂಧುಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Related Posts