ಚೀನಾ: ಕಣ್ಮರೆಯಾಗುತ್ತಿರುವ ಸಚಿವರು... ವಜಾಗೊಳಿಸುವ ಸರ್ಕಾರ! - ಅಲ್ಲಿ ಏನು ನಡೆಯುತ್ತಿದೆ? » Dynamic Leader
November 2, 2024
ವಿದೇಶ

ಚೀನಾ: ಕಣ್ಮರೆಯಾಗುತ್ತಿರುವ ಸಚಿವರು… ವಜಾಗೊಳಿಸುವ ಸರ್ಕಾರ! – ಅಲ್ಲಿ ಏನು ನಡೆಯುತ್ತಿದೆ?

ಡಿ.ಸಿ.ಪ್ರಕಾಶ್ ಸಂಪಾದಕರು

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ನಿಕಟವಾಗಿದ್ದ ರಕ್ಷಣಾ ಸಚಿವ ಕ್ವಿನ್ ಗ್ಯಾಂಗ್ ಅನ್ನು ಕೆಲವು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಕಣ್ಮರೆಯಾದ ನಂತರ, ಅವರನ್ನು ಸಚಿವ ಸ್ಥಾನದಿಂದ ಪದಚ್ಯುತಿಗೊಳಿಸಿದ್ದಾರೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್. ಈ ಹಿಂದೆ ವಿದೇಶಾಂಗ ಸಚಿವರೂ ಇದೇ ರೀತಿಯಲ್ಲಿ ಕಣ್ಮರೆಯಾಗಿದ್ದು ಅವರನ್ನೂ ಸಹ ಹುದ್ದೆಯಿಂದ ತೆಗೆದುಹಾಕಲಾಗಿದೆ. ಚೀನಾದಲ್ಲಿ ಸಚಿವರುಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗುವುದು ಮತ್ತು ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಇದು ಚೀನಾದ ಜನರಲ್ಲಿ ಭಾರೀ ಸಂಚಲನ ಮೂಡಿಸಿದೆ.

ಮೊದಲು ಕಾಣೆಯಾದ ವಿದೇಶಾಂಗ ಮಂತ್ರಿ: ಚೀನಾದ ವಿದೇಶಾಂಗ ಸಚಿವರಾಗಿದ್ದ ಕ್ವಿನ್ ಗ್ಯಾಂಗ್ (Qin Gang) ಜೂನ್ ಅಂತ್ಯದಿಂದ ನಾಪತ್ತೆಯಾಗಿದ್ದಾರೆ. ಕಳೆದ ಜೂನ್ 25 ರಂದು ರಷ್ಯಾ, ಶ್ರೀಲಂಕಾ ಮತ್ತು ವಿಯೆಟ್ನಾಂ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಕ್ವಿನ್ ಗ್ಯಾಂಗ್ ನಂತರ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಅಂತರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿದ ನಂತರವೇ ಹೊರಜಗತ್ತಿಗೆ ಇಂಥದ್ದೊಂದು ಘಟನೆ ನಡೆದಿರುವುದು ತಿಳಿದು ಬಂದಿತು. ಒಂದು ತಿಂಗಳು ಕಳೆದಿದ್ದರೂ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಬಗ್ಗೆ ಇನ್ನೂ ಯಾವುದೇ ಸುದ್ದಿ ಇಲ್ಲ. ಈ ಹಿನ್ನಲೆಯಲ್ಲಿ, ಕ್ವಿನ್ ಗ್ಯಾಂಗ್ ಅವರನ್ನು ಸಚಿವ ಸ್ಥಾನದಿಂದ ತೆಗೆದು ವಾಂಗ್ ಯಿ ಅವರನ್ನು ಚೀನಾದ ಹೊಸ ವಿದೇಶಾಂಗ ಸಚಿವರನ್ನಾಗಿ ನೇಮಿಸಲಾಯಿತು.

ಟಿವಿ ಶೋ ನಿರೂಪಕಿ ಫೂ ಕ್ಸಿಯಾಟಿಯನ್ (Fu Xiaotian) ಎಂಬ ಮಹಿಳೆಯೊಂದಿಗೆ ಮಾಜಿ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್

ಏನು ಕಾರಣ: ಆರಂಭದಲ್ಲಿ, ಅನಾರೋಗ್ಯದ ಕಾರಣದಿಂದ ಕ್ವಿನ್ ಗ್ಯಾಂಗ್ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ವರದಿಗಳಾದವು. ನಂತರ ಸಚಿವ ಸ್ಥಾನದಿಂದ ವಜಾಗೊಳಿಸಿದ ಮೇಲೆ ರಹಸ್ಯ ಬಯಲಾಯಿತು. ಅಂದರೆ, ಟಿವಿ ಶೋ ನಿರೂಪಕಿ ಫೂ ಕ್ಸಿಯಾಟಿಯನ್ (Fu Xiaotian) ಎಂಬ ಮಹಿಳೆಯೊಂದಿಗೆ ಕ್ವಿನ್ ಗ್ಯಾಂಗ್ ರಹಸ್ಯ ಸಂಬಂಧದಲ್ಲಿದ್ದು, ಚೀನಾ ಸರ್ಕಾರದ ಪ್ರಮುಖ ಹುದ್ದೆಯಲ್ಲಿರುವವರು ವಿವಾಹೇತರ ಸಂಬಂಧ ಹೊಂದಬಾರದು ಎಂಬ ಅಧಿಕೃತ ಆದೇಶವಾಗಿರುವ ಕಾರಣ ಕ್ವಿನ್ ಗ್ಯಾಂಗನ್ನು ನಾಪತ್ತೆಮಾಡಿರಬಹುದು ಎಂಬ ವರದಿಗಳೂ ಸೋರಿಕೆಯಾಗುತ್ತಿವೆ.

ಪ್ರಸ್ತುತ ನಾಪತ್ತೆಯಾಗಿರುವ ರಕ್ಷಣಾ ಸಚಿವರು: ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಅವರಂತೆಯೇ ರಕ್ಷಣಾ ಸಚಿವ ಶಾಂಗ್‌ಫು ಕೂಡ ಕಣ್ಮರೆಯಾಗಿದ್ದಾರೆ. ಕೊನೆಯ ಬಾರಿಗೆ ಕಳೆದ ಆಗಸ್ಟ್ ಅಂತ್ಯದಲ್ಲಿ ಚೀನಾ-ಆಫ್ರಿಕಾ ಶಾಂತಿ ಮತ್ತು ಭದ್ರತಾ ವೇದಿಕೆಯ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದ ಕಾರಣ, ಲಿ ಶಾಂಗ್‌ಫು ಕೂಡ ನಾಪತ್ತೆಯಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿತು. ಈ ಹಿನ್ನಲೆಯಲ್ಲಿ ಶಾಂಗ್‌ಫು ಅವರನ್ನು ಚೀನಾದ ರಕ್ಷಣಾ ಸಚಿವ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ಚೀನಾ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಔಪಚಾರಿಕವಾಗಿ, ಶಾಂಗ್‌ಫು ಅವರಿಗೆ ಸಂಬಂಧಿಸಿದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಒಪ್ಪಿಗೆಯಿಂದ ತೆಗೆದುಹಾಕಲಾಗಿದೆ.

ಚೀನಾ ರಕ್ಷಣಾ ಮಾಜಿ ಸಚಿವ ಲಿ ಶಾಂಗ್‌ಫು

ಏನು ಕಾರಣ: ಲಿ ಶಾಂಗ್‌ಫು ಚೀನಾದ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಚೀನಾ-ಅಮೆರಿಕಾ ಮಿಲಿಟರಿ ವಿನಿಮಯದಲ್ಲಿ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಚೀನಾ ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿದ ನಂತರ, ಅಮೆರಿಕಾ ಶಾಂಗ್‌ಫು ಅವರನ್ನು ತಮ್ಮ ದೇಶಕ್ಕೆ ಬರುವುದನ್ನು ನಿಷೇಧಿಸಿತು. ಅದೇ ರೀತಿ ಅವರು ಸಚಿವರಾಗಿದ್ದಾಗ ಚೀನಾ ತೈವಾನ್‌ಗೆ ಶಸ್ತ್ರಾಸ್ತ್ರ ಪೂರೈಸಿದ್ದು ಕೂಡ ಅಮೆರಿಕಾವನ್ನು ಕೆರಳಿಸಿತ್ತು. ಏತನ್ಮಧ್ಯೆ, ಅಮೆರಿಕಾ ರಕ್ಷಣಾ ಇಲಾಖೆಯ ಪ್ರತಿನಿಧಿಗಳು ಪ್ರಾದೇಶಿಕ ಭದ್ರತಾ ಸಮಾಲೋಚನೆಗಾಗಿ ಮುಂದಿನ ತಿಂಗಳು ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ, ಅಮೆರಿಕಾದಿಂದ ನಿಷೇಧಕ್ಕೊಳಗಾಗಿರುವ ಲಿ ಶಾಂಗ್‌ಫು ರಕ್ಷಣಾ ಸಚಿವರಾಗಿರುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ಅವರನ್ನು ಹುದ್ದೆಯಿಂದ ಕೆಳಗಿಳಿಸಿರಬಹುದು ಎನ್ನಲಾಗುತ್ತಿದೆ.

ಪದಚ್ಯುತಿ ಮಾಡಿದೆಲ್ಲವೂ ಸರಿಯೇ… ಆದರೆ ಕಾಣೆಯಾದವರ ಗತಿಯೇನು?’ ಇದನ್ನು ಚೀನಾ ಸರ್ಕಾರ ಮರೆಮಾಚುತ್ತಿರುವುದೇ ಇಲ್ಲಿ ನಿಗೂಢ!

Related Posts