ಭಾಷಣಕ್ಕೆ ನಿಂತರೆ ಶೌರ್, ರೌದ್ರ, ಪ್ರತಾಪಗಳ ಬಗ್ಗೆಯೇ ಮಾತಾಡುವ ಮೋದಿಯವರು ಚೀನಾ ವಿಚಾರದಲ್ಲಿ ಹೆದರುವುದ್ಯಾಕೆ? ಅಷ್ಟು ಭಯವೇ? » Dynamic Leader
September 21, 2024
ರಾಜಕೀಯ

ಭಾಷಣಕ್ಕೆ ನಿಂತರೆ ಶೌರ್, ರೌದ್ರ, ಪ್ರತಾಪಗಳ ಬಗ್ಗೆಯೇ ಮಾತಾಡುವ ಮೋದಿಯವರು ಚೀನಾ ವಿಚಾರದಲ್ಲಿ ಹೆದರುವುದ್ಯಾಕೆ? ಅಷ್ಟು ಭಯವೇ?

ಮೊನ್ನೆಯಷ್ಟೇ ನಡೆದ ಬ್ರಿಕ್ಸ್ ಸಮ್ಮೇಳನದಲ್ಲಿ ಗಡಿ ವಿವಾದ ಕುರಿತಂತೆ‌ ಮೋದಿಯವರು ಚೀನಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಚೀನಾ, ಅರುಣಾಚಲ ಪ್ರದೇಶ ಸೇರಿಸಿಕೊಂಡು ನಕ್ಷೆ ಬಿಡುಗಡೆ ಮಾಡಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್,

ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಬೆಲೆ ರೂ.200 – 400 ಇಳಿಕೆ: ಕೇಂದ್ರ ಸರಕಾರ ಘೋಷಣೆ!

“ಅರುಣಾಚಲ ಪ್ರದೇಶವನ್ನು ಸೇರಿಸಿಕೊಂಡು ಚೀನಾ ಹೊಸ ನಕ್ಷೆ ಬಿಡುಗಡೆ ಮಾಡಿದೆ‌.‌ ಗಡಿ ವಿಚಾರದಲ್ಲಿ ಚೀನಾದ ತಗಾದೆ ಹೊಸದೇನಲ್ಲ. ಇಷ್ಟಾದರೂ ಮೋದಿಯವರು ಗಡಿಯಲ್ಲಿ ಏನು ಆಗಿಲ್ಲ ಎಂಬ ನಿರ್ಲಿಪ್ತತೆಯಲ್ಲಿದ್ದಾರೆ. ಭಾಷಣಕ್ಕೆ ನಿಂತರೆ ಶೌರ್, ರೌದ್ರ, ಪ್ರತಾಪಗಳ ಬಗ್ಗೆಯೇ ಮಾತಾಡುವ ಮೋದಿಯವರು ಚೀನಾ ವಿಚಾರದಲ್ಲಿ ಹೆದರುವುದ್ಯಾಕೆ? ಅಷ್ಟು ಭಯವೇ?

ಮೊನ್ನೆಯಷ್ಟೇ ನಡೆದ ಬ್ರಿಕ್ಸ್ ಸಮ್ಮೇಳನದಲ್ಲಿ ಗಡಿ ವಿವಾದ ಕುರಿತಂತೆ‌ ಮೋದಿಯವರು ಚೀನಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಚೀನಾ, ಅರುಣಾಚಲ ಪ್ರದೇಶ ಸೇರಿಸಿಕೊಂಡು ನಕ್ಷೆ ಬಿಡುಗಡೆ ಮಾಡಿದೆ. ಭಕ್ತರ ಪಾಲಿನ ವಿಶ್ವಗುರು ಮೋದಿಯವರು,ವಿಶ್ವಮಟ್ಟದಲ್ಲಿ ಎಷ್ಟು ಪ್ರಭಾವ ಹೊಂದಿದ್ದಾರೆ ಎಂದು ಇದರಲ್ಲೆ ಅರ್ಥವಾಗುತ್ತದೆ.

ಇದನ್ನೂ ಓದಿ: ಸ್ವಾಭಿಮಾನದ ಮದುವೆಗಳನ್ನು ವಕೀಲರೇ ನಡೆಸಬಹುದು; ನ್ಯಾಯಾಲಯದ ಪ್ರತಿನಿಧಿಯಾಗಿ ಅಲ್ಲ! – ಸುಪ್ರೀಂ ಕೋರ್ಟ್

ನಮ್ಮೊಂದಿಗೆ ಚೀನಾ ಪದೇ ಪದೇ ರಗಳೆ ಮಾಡುತ್ತಿದ್ದರೂ ಪ್ರಧಾನಿ ದಿವ್ಯ ಮೌನದಲ್ಲಿದ್ದಾರೆ. ಮೌನದ ಹಿಂದಿರುವುದು ಚೀನಾದ ಮೇಲಿನ ಭಯವೋ, ಅಸಹಾಯಕತೆಯೋ ದೇವರೆ ಬಲ್ಲ. ಆದರೆ ಬೆನ್ನಟ್ಟಿ ಬರುವ ಬೇಟೆಗಾರನಿಗೆ ಶಕ್ತಿಯಿಲ್ಲದಿದ್ದರೆ ಮೊಲ ಕೂಡ ಮೂರು ಕಾಲಲ್ಲಿ ಓಡುವಂತೆ ಚೀನಾ ಮೋದಿಯವರ ಪುಕ್ಕಲುತನವನ್ನು ಕೆಣಕುತ್ತಿದೆ. 56 ಇಂಚಿನ ಶೌರ್ಯ ಎಲ್ಲಿ? ಎಂದು ಹೇಳಿದ್ದಾರೆ.

Related Posts