ಮಹಾರಾಷ್ಟ್ರದಲ್ಲಿ ದಲಿತ ಮಕ್ಕಳನ್ನು ಮೇಕೆ, ಪಾರಿವಾಳ ಕದ್ದಿದ್ದಕ್ಕೆ ತಲೆಕೆಳಗಾಗಿ ನೇತು ಹಾಕಿ ಚಿತ್ರಹಿಂಸೆ! » Dynamic Leader
December 13, 2024
ಕ್ರೈಂ ರಿಪೋರ್ಟ್ಸ್ ದೇಶ

ಮಹಾರಾಷ್ಟ್ರದಲ್ಲಿ ದಲಿತ ಮಕ್ಕಳನ್ನು ಮೇಕೆ, ಪಾರಿವಾಳ ಕದ್ದಿದ್ದಕ್ಕೆ ತಲೆಕೆಳಗಾಗಿ ನೇತು ಹಾಕಿ ಚಿತ್ರಹಿಂಸೆ!

ಮೇಕೆ ಮತ್ತು ಪಾರಿವಾಳಗಳನ್ನು ಕದ್ದಿದ್ದಕ್ಕಾಗಿ ದಲಿತ ಮಕ್ಕಳನ್ನು ತಲೆಕೆಳಗಾಗಿ ನೇತು ಹಾಕಲಾದ ಘಟನೆ ಅಹ್ಮದ್‌ನಗರ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

ಮುಂಬೈ: ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಗೆ ಸೇರಿದ ಶ್ರೀರಾಮಪುರ ತಾಲ್ಲೂಕಿನ ಹರೇಗಾಂವ್ ಗ್ರಾಮದಲ್ಲಿ, ಮೇಕೆ, ಪಾರಿವಾಳ ಕಳ್ಳತನ ಮಾಡಿದ್ದಾರೆ ಎಂದು ದಲಿತ ಕುಟುಂಬಕ್ಕೆ ಸೇರಿದ ಮಕ್ಕಳನ್ನು ಜೀವಂತವಾಗಿ ತಲೆಕೆಳಗಾಗಿ ನೇತುಹಾಕಿ ಥಳಿಸುತ್ತಿರುವ ಘಟನೆ ಆಘಾತವನ್ನು ಉಂಟುಮಾಡಿದೆ. ಈ ಸಂಬಂಧ ಐವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸನಾತನ ಧರ್ಮವು ಓದುವುದನ್ನು ತಡೆಮಾಡಿತು; ದ್ರಾವಿಡ ಮಾದರಿ ಸರ್ಕಾರ ಹಸಿವು ನೀಗಿಸಿ ಓದುವಂತೆ ಮಾಡಿದೆ!

ಅಹಮದ್‌ನಗರಕ್ಕೆ ಸೇರಿದವರಾದ ರಾಜ್ಯ ಕಂದಾಯ ಸಚಿವ ರಾಮಕೃಷ್ಣ ವಿ.ಕೆ.ಪಾಟೀಲ್ ಅವರು ಆಸ್ಪತ್ರೆಗೆ ತೆರಳಿ ಮಕ್ಕಳು ಮತ್ತು ಅವರ ಪೋಷಕರನ್ನು ಭೇಟಿ ಮಾಡಿದ್ದಾರೆ. ಮತ್ತು ಹೆಚ್ಚಿನ ತನಿಖೆಗೆ ಆದೇಶ ಮಾಡಿದ್ದರೆ. ಇದೇ ವೇಳೆ ವಂಚಿತ್ ಬಹುಜನ ಅಘಾಡಿ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಮಾತನಾಡಿ, “ಜಾತಿ ತಾರತಮ್ಯ, ಅವಮಾನ, ನಿಂದನೆ, ಹಿಂಸೆ, ದೌರ್ಜನ್ಯ ಹೊಸದಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿ ಬದಲಾವಣೆ ತರೋಣ” ಎಂದರು.

ಇದನ್ನೂ ಓದಿ: ಗಾಂಧಿಯನ್ನು ಕೊಂದವರು ಜೈ ಭೀಮ್ ಚಿತ್ರಕ್ಕೆ ಹೇಗೆ ಪ್ರಶಸ್ತಿ ನೀಡುತ್ತಾರೆ?: ನಟ ಪ್ರಕಾಶ್ ರಾಜ್ ಪ್ರಶ್ನೆ!

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯ ವಕ್ತಾರ ಮಹೇಶ್ ಥಾಬೆ ಮಾತನಾಡಿ, “ದಲಿತರ ಹಕ್ಕುಗಳನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲವಾಗಿದೆ” ಎಂದಿದ್ದಾರೆ.

ಇದನ್ನೂ ಓದಿ: ಇನ್ನು ಕೆಲವು ಪಕ್ಷಗಳು “ಇಂಡಿಯಾ” ಮೈತ್ರಿಕೂಟಕ್ಕೆ ಸೇರಲಿವೆ: ನಿತೀಶ್ ಕುಮಾರ್

Related Posts