2024ರ ಲೋಕಸಭಾ ಚುನಾವಣೆಗೆ ಪ್ರಭಾವಿ ಜಾತಿ ಮುಖಂಡರ ಬೆಂಬಲ ಪಡೆಯಲು ಬಿಜೆಪಿ ನಿರ್ಧಾರ! » Dynamic Leader
December 3, 2024
ದೇಶ ರಾಜಕೀಯ

2024ರ ಲೋಕಸಭಾ ಚುನಾವಣೆಗೆ ಪ್ರಭಾವಿ ಜಾತಿ ಮುಖಂಡರ ಬೆಂಬಲ ಪಡೆಯಲು ಬಿಜೆಪಿ ನಿರ್ಧಾರ!

ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಭಾವಿ ಜಾತಿ ಮುಖಂಡರ ಬೆಂಬಲ ಪಡೆಯುವಂತೆ ಬಿಜೆಪಿ ರಾಜ್ಯ ನಾಯಕರುಗಳಿಗೆ ಪಕ್ಷದ ನಾಯಕತ್ವ ಸೂಚನೆ ನೀಡಿದೆ ಎಂದು ವರದಿಯಾಗಿದೆ. ವಿರೋಧ ಪಕ್ಷಗಳ ಒಗ್ಗಟ್ಟಿನಿಂದ ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳಲ್ಲಿ ಹಾಗೂ ಪಕ್ಷದ ಆಂತರಿಕ ಗೊಂದಲದಿಂದ ಕರ್ನಾಟಕದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಸ್ಥಾನಗಳು ಕಡಿಮೆಯಾಗಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.

ಇದನ್ನೂ ಓದಿ: ಉಪನಿಷತ್ತುಗಳು, ವೇದಗಳು ಮತ್ತು ಸಂಸ್ಕೃತ ಇಡೀ ಜಗತ್ತಿಗೆ ವಿಶ್ವಕೋಶಗಳಾಗಿವೆ; ಯಾವುದೇ ಆಕ್ಷೇಪವಿಲ್ಲದೆ ಅಧಿಕೃತ ಭಾಷೆಯನ್ನಾಗಿ ಹಿಂದಿಯನ್ನು ಒಪ್ಪಿಕೊಳ್ಳುವ ಅಗತ್ಯವನ್ನು ರೂಪಿಸಿಕೊಲ್ಲಿ! – ಅಮಿತ್ ಶಾ

ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಭಾವಿ ಜಾತಿ ಮುಖಂಡರು, ಸಮುದಾಯ ಸಂಘಟನೆಗಳು, ಖ್ಯಾತ ಕ್ರೀಡಾ ಪಟುಗಳು, ಕೈಗಾರಿಕೋದ್ಯಮಿಗಳು, ಚಿತ್ರರಂಗದ ಗಣ್ಯರು ಮುಂತಾದವರ ಬೆಂಬಲ ಪಡೆಯಬೇಕು. ಇವರು ಬಹಿರಂಗವಾಗಿ ಬಿಜೆಪಿಗೆ ಬೆಂಬಲ ನೀಡದಿದ್ದರೂ ಬಿಜೆಪಿ ವಿರುದ್ಧ ಹೋಗದಂತೆ ನೋಡಿಕೊಳ್ಳಬೇಕು.

ಇದನ್ನೂ ಓದಿ: ಭಾರತ ಮಾತೆ ಕೇವಲ ಭೂಮಿ ಅಲ್ಲ; ನಿರ್ದಿಷ್ಟ ಸಂಸ್ಕೃತಿ, ಇತಿಹಾಸ, ಧರ್ಮಕ್ಕೆ ಸಂಬಂಧಿಸಿಲ್ಲ ಭಾರತ ಪ್ರತಿಯೊಬ್ಬ ಭಾರತೀಯನ ಧ್ವನಿಯಾಗಿದೆ! – ರಾಹುಲ್ ಗಾಂಧಿ

ಇದರಿಂದ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ವಾತಾವರಣ ನಿರ್ಮಾಣವಾಗುವುದನ್ನು ತಪ್ಪಿಸಬಹುದು ಎಂದು ರಾಜ್ಯ ಅಧ್ಯಕ್ಷರುಗಳು, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಿಗೆ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Related Posts